ಶ್ರೀನಿವಾಸ ಉತ್ಸವ ಬಳಗದ ವೈಭವದ ಶ್ರೀನಿವಾಸ ಕಲ್ಯಾಣ ಮಹೋತ್ಸವ ಸಂಪನ್ನ

Upayuktha
0


ಬೆಂಗಳೂರು: ನಗರದ ಎಚ್ಎಸ್ಆರ್ ಲೇಔಟ್ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 16ನೇ ವಾರ್ಷಿಕೋತ್ಸವದ ಪ್ರಯುಕ್ತ ಕಡೆ ಶ್ರಾವಣ ಶನಿವಾರದಂದು  ಶ್ರೀನಿವಾಸ ಉತ್ಸವ ಬಳಗದ ವತಿಯಿಂದ ವೈಭವದ ಶ್ರೀನಿವಾಸ ಕಲ್ಯಾಣ ಮಹೋತ್ಸವ ಸಂಪನ್ನಗೊಂಡಿತು.


ಡಾ. ತಾಯಲೂರು ವಾದಿರಾಜ ನೇತೃತ್ವದ ತಂಡದಿಂದ ಭೂದೇವಿ ಶ್ರೀದೇವಿ ಸಹಿತ ಶ್ರೀನಿವಾಸದೇವರ ಅದ್ದೂರಿ ಕಲ್ಯಾಣ ಮಹೋತ್ಸವವು ವೇದ ಮಂತ್ರಘೋಷ ದಾಸ ಸಾಹಿತ್ಯ ಕೀರ್ತನೆ ವ್ಯಾಖ್ಯಾನಗಳ ಮೂಲಕ ನಡೆಸಲಾಯಿತು.


ಖ್ಯಾತ ಹರಿದಾಸ ಸಾಹಿತ್ಯ ಗಾಯಕ ಡಾ.ರಾಯಚೂರು ಶೇಷಗಿರಿ ದಾಸ್ ಮತ್ತು ವಿದುಷಿ ದಿವ್ಯಾ ಗಿರಿಧರ್ ಸುಶ್ರಾವ್ಯವಾಗಿ ಶ್ರೀನಿವಾಸ ಕಲ್ಯಾಣದ ವಿವಿಧ ಘಟನಾವಳಿಗಳ ಗಾಯನವನ್ನು ನಡೆಸಿಕೊಟ್ಟರು. ಉಡುಪಿಯ ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ. ಬಿ ಗೋಪಾಲಾಚಾರ್ ಅರ್ಥ ವಿವರಣೆ ವ್ಯಾಖ್ಯಾನದಲ್ಲಿ ಭಗವದ್ ಭಕ್ತರಿಗೆ ಕಲಿಯುಗದ ದೈವ ಶ್ರೀ ಶ್ರೀನಿವಾಸ ದೇವರ ಮಹಿಮೆಯನ್ನು ತಿಳಿಸಿದರು.


ಕಾರ್ಯಕ್ರಮದ ಆರಂಭದಲ್ಲಿ ವಿದುಷಿ ಅಪೂರ್ವ ಲಕ್ಷ್ಮಿ ರವರು ತಾಳಪಾಕ ಅನ್ನಮಾಚಾರ್ಯರ ಕೃತಿಗಳನ್ನು ಪ್ರಸ್ತುತಪಡಿಸಿದರು. ಹಲವಾರು  ಭಜನ ಮಂಡಳಿಗಳಿಂದ ಭಜನೆ, ಕೋಲಾಟ ನೃತ್ಯ ನಡೆಯಿತು. ಗೌರವಾಧ್ಯಕ್ಷ  ಎ. ಎನ್ ಎಲ್ಲಪ್ಪ ರೆಡ್ಡಿ,ಕಾರ್ಯದರ್ಶಿ ಕೆ.ವಾಸುದೇವ,ಸಲಹೆಗಾರ ಕೆ.ಟಿ ರಾಮರಾಜು,ವಿ ಭದ್ರಾ ರೆಡ್ಡಿ ಇನ್ನಿತರರು ಪಾಲ್ಗೊಂಡಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top