ವಿದ್ಯಾರ್ಥಿಗಳಿಗೆ ದೇಶ ಪ್ರೇಮ ಮತ್ತು ರಾಷ್ಟ್ರ ಸೇವೆಯ ಪ್ರೇರಣದಾಯಕ ಸಂದೇಶವನ್ನು ನೀಡಿದ ಪಿ.ಪಾಲನ್ನ
ಬಳ್ಳಾರಿ: ಬಳ್ಳಾರಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ವಾಸವಿ ಎಜ್ಯುಕೇಷನ್ ಟ್ರಸ್ಟ್ ನ ಸಹಯೋಗದೊಂದಿಗೆ ಶ್ರೀ ವಾಸವಿ ವಿದ್ಯಾಲಯದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಭಕ್ತಿ, ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಲಾಯಿತು.
ಶಾಲೆಯ ವಿದ್ಯಾರ್ಥಿಗಳು ಪಥ ಸಂಚಲನದ ಮೂಲಕ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು. 9ನೇ ತರಗತಿ ವಿದ್ಯಾರ್ಥಿನಿಯರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪಾಲನ್ನ ಶ್ರೀ ವಾಸವಿ ಎಜ್ಯುಕೇಷನ್ ಟ್ರಸ್ಟ್ ನ ಆಡಳಿತ ವರ್ಗ ಮತ್ತು ಸದಸ್ಯರು ಧ್ವಜಾರೋಹಣವನ್ನು ನೆರೆವೇರಿಸಿದರು.
ರಾಷ್ಟ್ರಗೀತೆ ಹಾಡುವುದರ ಮೂಲಕ ರಾಷ್ಟ್ರಧ್ವಜಕ್ಕೆ ಗೌರವ ಸೂಚಿಸಿದರು. ಈ ಶುಭ ಸಂದರ್ಭದಲ್ಲಿ ನಯಾ ಭಾರತ್ ಎಂಬ ಪ್ರತಿಜ್ಞಾ ವಿಧಿಯನ್ನು ಶಾಲೆಯ ಮುಖ್ಯೋಪಾಧ್ಯಯರಾದ ಶ್ರೀ ವೀರೇಶ್ .ಯು ರವರು ಬೋಧಿಸಿದರು.ಈ ವರ್ಷವು ವಾಯುಪಡೆ, ಸೇನಾಪಡೆ, ನೌಕಪಡೆ, ಸ್ವತಂತ್ರ ಹೋರಾಟಗಾರರು, ಭಾರತದ ರಾಜ ರಾಣಿಯರು ಮತ್ತು ಸಾಮಾಜಿಕ ಕಾರ್ಯಕರ್ತರ ವೇಷಧಾರಿಗಳಾಗಿ ಪಥಸಂಚಲನದಲ್ಲಿ ವಿಭಿನ್ನವಾಗಿ ಮರೆಗು ತಂದರು.
ಕಾರ್ಯಕ್ರಮದಲ್ಲಿ ಮಾಜಿ ಬುಡಾ ಅಧ್ಯಕ್ಷರಾದ ಪಾಲನ್ನ ಶ್ರೀ ವಾಸವಿ ಎಜ್ಯುಕೇಷನ್ ಟ್ರಸ್ಟ್ ನ ಕಾರ್ಯದರ್ಶಿಗಳಾದ ಪಿ.ಎನ್. ಸುರೇಶ್, ಖಜಾಂಚಿಗಳಾದ ಬಿಂಗಿ ಸುರೇಶ್, ಕಾರ್ಯದರ್ಶಿಗಳಾದ ಮುರುಳಿಕೃಷ್ಣ,ಸದಸ್ಯರುಗಳಾದ ಪಿ.ಜಿ.ಗುಪ್ತ ಮುದುಗಲ್ ಸುಭಾಷ್,ವೆಂಕಟೇಶ್,ರಾಘವೇಂದ್ರ ಮತ್ತು ವೆಂಕಟೇಶ್ ಬಾಬು, ಮುಖ್ಯ ಗುರುಗಳಾದ ವೀರೇಶ್.ಯು,ವಿದ್ಯಾರ್ಥಿಗಳು ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಪೋಷಕರು ಪಾಲ್ಗೊಂಡಿದ್ದರು.
ಮುಖ್ಯ ಅತಿಥಿಗಳಾದ ಪಾಲನ್ನ ರವರು ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ದೇಶ ಪ್ರೇಮ ಮತ್ತು ರಾಷ್ಟ್ರ ಸೇವೆಯ ಪ್ರೇರಣದಾಯಕ ಸಂದೇಶವನ್ನು ನೀಡಿದರು.
ಸ್ವಾತಂತ್ರ್ಯ ದಿನವು ಕೇವಲ ಒಂದು ಹಬ್ಬವಲ್ಲ, ಅದು ನಮ್ಮ ಹೋರಾಟಗಾರರ ತ್ಯಾಗವನ್ನು ಸ್ಮರಿಸುವ ದಿನ, ನಮ್ಮ ರಾಷ್ಟ್ರದ ಏಕತೆ ಮತ್ತು ವೈವಿಧ್ಯತೆಯನ್ನು ಆಚರಿಸುವ ದಿನ ಹಾಗೂ ಮುಂದಿನ ಪೀಳಿಗೆಗೆ ದೇಶಪ್ರೇಮ, ಹೊಣೆಗಾರಿಕೆ ಮತ್ತು ಸತ್ಯ ಸಂದೇಶವನ್ನು ನೀಡುವ ದಿನ ಎಂದು ಕಾರ್ಯದರ್ಶಿಗಳಾದ ಪಿ.ಎನ್.ಸುರೇಶ್ ರವರು ವೇದಿಕೆಗೆ ತಿಳಿಸಿದರು.
ಶಾಲೆಯ ವಿದ್ಯಾರ್ಥಿನಿಯರಾದ ಕುಮಾರಿ ಸ್ಪಂದನ, ಕುಮಾರಿ ಸಿಂಚನ, ಕುಮಾರಿಮಿಸ್ಬ ತಮ್ಮ ಭಾಷಣದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರನ್ನು ಸ್ಮರಿಸಿದರು. ಏಳು ಮತ್ತು ಎಂಟನೇ ತರಗತಿಯ ವಿದ್ಯಾರ್ಥಿನಿಯರು ದೇಶ ಭಕ್ತಿ ಗೀತೆಗಳನ್ನು ಹಾಡುವುದರ ಮೂಲಕ ದೇಶ ಪ್ರೇಮವನ್ನು ವ್ಯಕ್ತಪಡಿಸಿದರು. ಈ ಕಾರ್ಯಕ್ರಮವು ದೇಶಭಕ್ತಿಯ ನೆನಪನ್ನು ಪುನರ್ಜೀವಗೊಳಿಸಿತು .ಹಾಗೆಯೇ ಮುಂದಿನ ಪೀಳಿಗೆಗೆ ಪ್ರೇರಣೆಯನ್ನು ನೀಡಿತು. ವಾಸವಿ ಎಜ್ಯುಕೇಷನ್ ನ ವತಿಯಿಂದ ಸ್ವರಚಿತವಾದ ಸ್ವಾತಂತ್ರ್ಯ ದಿನಾಚರಣೆಯ ವಿಡಿಯೋವನ್ನು ಪ್ರಸ್ತುತ ಪಡಿಸಿ ಮುಖ್ಯ ಅತಿಥಿಗಳ ಸಮ್ಮಖದಲ್ಲಿ ಬಿಡುಗಡೆ ಮಾಡಲಾಯಿತು.
ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಜಬಿನಾ ಬೇಗಂ,ಶ್ರೀಮತಿ ಬಸವರಾಜೇಶ್ವರಿ ಹಾಗೂ ಕುಮಾರಿ ನಸ್ರೀನ್ ಬೇಗಂ ನೇರವೇರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ಸಿಹಿ ಹಂಚಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


