ಕಾಸರಗೋಡು: ಬದಿಯಡ್ಕದಲ್ಲಿ ನಡೆದ 54ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ.) ಕಾಸರಗೋಡು ವತಿಯಿಂದ 118ನೇ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ಹಲವಾರು ಕಲಾವಿದರ ಮನಮೋಹಕ ಕಲಾಪ್ರದರ್ಶನದೊಂದಿಗೆ ಬಹಳ ವಿಜೃಂಭಣೆಯಿಂದ ನಡೆಯಿತು.
ಡಾ. ವಾಣಿಶ್ರೀ ಅವರ ಸಾಹಿತ್ಯ ಪ್ರಸ್ತುತಿ ಹಾಗೂ ಮಧುಲತಾ ಪುತ್ತೂರು ಅವರ ನಿರೂಪಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಪ್ರತಿಮ ಕಲಾಕುಸುಮಗಳಾದ ಮಧುಲತಾ ಪುತ್ತೂರು, ಪೂಜಾಶ್ರೀ ಬದಿಯಡ್ಕ, ಅಹನಾ ಎಸ್ ರಾವ್, ಶ್ರದ್ದಾ, ನವ್ಯಶ್ರೀ ಕುಲಾಲ್, ಮೇಧಾ, ತನುಶ್ರೀ, ಗೌತಮಿ, ಶಿವಪ್ರಿಯ, ದಿಯಾ ಸುಕೇಶ್ ಗಟ್ಟಿ, ಯಶಿಕಾ ಸಂದೀಪ್, ರಕ್ಷಿತಾ, ಆದಿರ, ಸಂಕೇತ್, ಪ್ರಿತ್ವಿಕ್ ರೈ, ದ್ರಿತಿಕ್ ರೈ,ಸಾನ್ವಿ ರೈ, ಸಾತ್ವಿಕ್ ರೈ ಮುಂತಾದವರು ಭಾಗವಹಿಸಿ ತಮ್ಮ ಕಲಾ ಪ್ರೌಢಿಮೆಯನ್ನು ಮೆರೆದರು.
ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಸಂಸ್ಥೆಯ ವತಿಯಿಂದ ವೇದಿಕೆಯ ಗಣ್ಯರ ಉಪಸ್ಥಿತಿಯಲ್ಲಿ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. ವೇದಿಕೆಯಲ್ಲಿ ಗಣ್ಯರಾದ ನರೇಂದ್ರ, ಗುರುಪ್ರಸಾದ್ ರೈ, ಡಾ. ವೆಂಕಟಗಿರೀಶ್, ಅಚ್ಯುತ್ ಭಟ್ ಉಪಸ್ಥಿತರಿದ್ದರು. ಡಾ.ವಾಣಿಶ್ರೀ ಅವರಿಗೆ ಗೌರವ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ