ಆಟೋ ನಿಲ್ದಾಣ ಮೇಲ್ಚಾವಣಿ ಉದ್ಘಾಟನೆ

Upayuktha
0


ಮಂಗಳೂರು: ಪಿವಿಎಸ್ ವೃತ್ತ ಬಳಿಯ ಆಟೋರಿಕ್ಷಾ ನಿಲ್ದಾಣಕ್ಕೆ ನೂತನವಾಗಿ ನಿರ್ಮಿಸಲಾದ ಮೇಲ್ಚಾವಣಿಯ ಉದ್ಘಾಟನೆಯನ್ನು ಶಾಸಕ ವೇದವ್ಯಾಸ ಕಾಮತ್ ರವರು ನೆರವೇರಿಸಿದರು. 


ಈ ವೇಳೆ ಮಾತನಾಡಿದ ಶಾಸಕರು, ನಿಮ್ಮೆಲ್ಲರ ಅನುಕೂಲಕ್ಕಾಗಿ ಶಾಸಕರ ನಿಧಿಯಿಂದ ಅನುದಾನವನ್ನು ಹೊಂದಿಸಿಕೊಂಡು ಈ ಆಟೋರಿಕ್ಷಾ ನಿಲ್ದಾಣದ ಮೇಲ್ಚಾವಣಿಯನ್ನು ನಿರ್ಮಿಸಲಾಗಿದ್ದು, 79ನೇ ಸ್ವಾತಂತ್ರ್ಯೋತ್ಸವದ ಶುಭ ದಿನದಂದೇ ಉದ್ಘಾಟನೆಗೊಳ್ಳುತ್ತಿದೆ. ಇಲ್ಲಿನ ಚಾಲಕ ಬಂಧುಗಳಿಗೆ ಇದರ ಉಪಯೋಗವಾದರೆ ಅದಕ್ಕಿಂತ ಸಂತೋಷ ಬೇರೇನಿಲ್ಲ, ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.


ನಿಕಟಪೂರ್ವ ಪಾಲಿಕೆ ಸದಸ್ಯೆ ಪೂರ್ಣಿಮಾ, ರಮೇಶ್ ಹೆಗ್ಡೆ, ಮೋಹನ್ ಪೂಜಾರಿ, ಭಾಗ್ಯ ಶೇಟ್, ಪಿ.ಸಿ ಗುರು, ಪ್ರಮೋದ್ ಆಚಾರ್ಯ, ಗಿರೀಶ್ ಪೈ, ಗಣಪತಿ ಕಾಮತ್, ರವೀಂದ್ರ ಮಲ್ಯ, ವೇಣುಗೋಪಾಲ್, ಗುರುಚರಣ್, ರಾಮಣ್ಣ, ಸೇರಿದಂತೆ ನಿಲ್ದಾಣದ ಆಟೋ ಚಾಲಕರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top