ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಒಂದು ದಿನದ ರಾಷ್ಟ್ರೀಯ ಮಟ್ಟದ ಪ್ರತಿಭಾ ಉತ್ಸವ ಅಲೋಶಿನ್ ಫೆಸ್ಟ್ 2025ನ ಉದ್ಘಾಟನಾ ಸಮಾರಂಭವನ್ನು ವಿವಿಯ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ಸೋಮವಾರ ಆಗಸ್ಟ್ 25ರಂದು ಬೆಳಗ್ಗೆ 9 ಗಂಟೆಗೆ ಆಯೋಜಿಸಲಿದೆ.
ಸಂಸ್ಥೆಯ ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿ ಶ್ರೀ ಕನ್ಯಾನ ಸದಾಶಿವ ಶೆಟ್ಟಿ ಈ ಉತ್ಸವದ ಉದ್ಘಾಟನೆಯನ್ನು ನಡೆಸಲಿದ್ದಾರೆ. ಗೌರವ ಅತಿಥಿಯಾಗಿ ಹಿರಿಯ ವಿದ್ಯಾರ್ಥಿ, ಚಿತ್ರ ನಟ ಶ್ರೀ ರಾಜ್ ದೀಪಕ್ ಶೆಟ್ಟಿ ಆಗಮಿಸಲಿದ್ದಾರೆ. ವಿವಿಯ ಕುಲಪತಿ ವಂ. ಡಾ. ಪ್ರವೀಣ್ ಮಾರ್ಟೀಸ್ ಎಸ್.ಜೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಈ ಉತ್ಸವವು ‘ಹಬ್ಬಗಳ ಹಬ್ಬ’ ಹಾಗೂ ’ಸಾಂಸ್ಕೃತಿಕ ಹಬ್ಬ’ ಎಂಬ ಎರಡು ವಿಭಾಗಗಳಲ್ಲಿ ಆಯೋಜಿಸಲಾಗುವುದು. ‘ಹಬ್ಬಗಳ ಹಬ್ಬʼದಲ್ಲಿ ಒಟ್ಟು 31 ಸ್ಪರ್ಧೆಗಳು ಕಲಾ ವಿದ್ಯಾರ್ಥಿಗಳಿಗೆ ಚರ್ಚೆ, ಚಿತ್ರಕಲೆ, ಮೊನೊಲಾಗ್, ರಸಪ್ರಶ್ನೆ, ಫ್ಯಾಶನ್ ಶೋ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಮ್ಯಾನೇಜ್ಮೆಂಟ್ ರೊಡೀಸ್, ಬ್ಯುಸಿನೆಸ್ ಮ್ಯಾನೇಜರ್, ಬ್ಯುಸಿನೆಸ್ ರಸಪ್ರಶ್ನೆ, ಶಾರ್ಕ್ ಟ್ಯಾಂಕ್, ಬ್ರಾಂಡ್ ಮ್ಯಾಡ್ ಆಡ್, ಬೆಸ್ಟ್ ಅಕೌಂಟೆಂಟ್, ಬೆಸ್ಟ್ ಮ್ಯಾನೇಜ್ಮೆಂಟ್ ಟೀಂ, ಮಾರ್ಕೆಟಿಂಗ್, ಪ್ರಾಡಕ್ಟ್ ಲಾಂಜ್, ಕಾರ್ಪರೇಟ್ ವಾಕ್, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸೈನ್ನ್ಸ್ ರಂಗೋಲಿ, ಸೈನ್ನ್ಸ್ ರಸಪ್ರಶ್ನೆ, ದಿ ಸೈನ್ನ್ಸ್ ಸ್ಟಾಂಡ್‌ಪಾಯಿಂಟ್, ಸೈನ್ನ್ಸ್ ಪಝಲ್, ಸೈನ್ನ್ಸ್‌ಎಸ್ಕೇಪ್ ರೂಮ್, ಸೈನ್ನ್ಸ್ ಎಕ್ಸಿಬಿಶನ್, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಐಟಿ ಮ್ಯಾನೇಜರ್, ಕೋಡಿಂಗದ ಟೈಂ, ಪೋಟೋ ಆಂಡ್ ವಿಡಿಯೋಗ್ರಫಿ, ಐಟಿ ಎಕ್ಪೋ, ಗೇಮಿಂಗ್ ಟೈಂ, ಕುಕಿಂಗ್ ವಿಥೌಟ್ ಫೈರ್, ರೀಲ್ ಮೇಕಿಂಗ್, ಪೋಸ್ಟರ್ ಮೇಕಿಂಗ್ ಸ್ಪೋಟ್ಸ್ ಕ್ವಿಜ್, ಟ್ರಾಶನ್ ಹಾಗೂ ಸಾಂಸ್ಕೃತಿಕ ಹಬ್ಬಗಳಲ್ಲಿ ಶಾಸ್ತ್ರೀಯ ನೃತ್ಯ, ಫೇಸ್ ಪೈಂಟಿಂಗ್, ಮೆಹೆಂದಿ, ಕಸದಿಂದ ರಸ ಹಾಗೂ ಸಮೂಹ ನೃತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಸಮಾರೋಪ ಸಮಾರಂಭವು ಅಪರಾಹ್ನ 3.00 ಗಂಟೆಗೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ವಿಝ್‌ಡೋಮ್ ಎಜ್ಯುಕೇಶನ್ ಇದರ ಸ್ಥಾಪಕಿ ಹಾಗೂ ವ್ಯವಸ್ಥಾಪನಾ ನಿರ್ದೇಶಕಿ ಡಾ. ಫ್ರಾನ್ಸಿಸ್ಕಾ ತೇಜ್ ಆಗಮಿಸಲಿದ್ದಾರೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ವರಿಷ್ಠಾಧಿಕಾರಿ ವಂ. ಮೆಲ್ವಿನ್ ಜೋಸೆಫ್ ಪಿಂಟೋ ಅವರು ವಹಿಸಲಿದ್ದಾರೆ.
ವಿವಿಧ ಕಾಲೇಜುಗಳ 1500 ವಿದ್ಯಾರ್ಥಿಗಳನ್ನು ಒಳಗೊಂಡ ಸುಮಾರು 37 ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಪ್ರತೀ ವೈಯಕ್ತಿಕ ವಿಭಾಗದ ವಿಜೇತ ವಿದ್ಯಾರ್ಥಿಗಳಿಗೆ ನಗದು ಹಾಗೂ ಪ್ರಶಸ್ತಿ ಪತ್ರ ಮತ್ತು ಫಲಕದೊಂದಿಗೆ ಗೌರವಿಸಲಾಗುವುದು. ಉತ್ತಮ ಪ್ರದರ್ಶನ ನೀಡಿದ ಕಾಲೇಜು ತಂಡಕ್ಕೆ ಸಮಗ್ರ ಫಲಕ ನೀಡಿ ಗೌರವಿಸಲಾಗುವುದು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

