ಅ.28: ಮಾನ್‍ಸೂನ್‍ಚೆಸ್ ಪಂದ್ಯಾಟ

Chandrashekhara Kulamarva
0


ಪುತ್ತೂರು: ವಿವೇಕಾನಂದಕಾಲೇಜು, ಪುತ್ತೂರು ಇದರ ಆಶ್ರಯದಲ್ಲಿಅಂತರ್‍ಕಾಲೇಜು ಮಟ್ಟದ 44ನೇ ಮಾನ್ ಸೂನ್‍ಚೆಸ್ ಪಂದ್ಯಾಟವು ಇದೇ ಅಗಸ್ಟ್ 28, 29 ಮತ್ತು 30 ರಂದು ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ. ದಕ್ಷಿಣಕನ್ನಡ, ಉಡುಪಿ ಮತ್ತುಕೊಡಗು ಜಿಲ್ಲೆಯ ವ್ಯಾಪ್ತಿಗೊಳಪಟ್ಟ ಎಲ್ಲಾ ಪದವಿ ಕಾಲೇಜು, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿ/ವಿದ್ಯಾರ್ಥಿನಿಯರುಇದರಲ್ಲಿ ಭಾಗವಹಿಸಲು ಅವಕಾಶವಿದೆ.


ಅಗಸ್ಟ್28  ರಂದು ಪೂರ್ವಾಹ್ನ 10.00 ಘಂಟೆಗೆ ಪಂದ್ಯಾಟವು ಆರಂಭಗೊಳ್ಳಲಿದ್ದು, ಸ್ವಿಸ್ ಮಾದರಿಯಲ್ಲಿ ನಡೆಯುತ್ತದೆ. ಭಾಗವಹಿಸುವವರು ಚೆಸ್ ಬೋರ್ಡ್ ಮತ್ತುಚೆಸ್ ದಾಳವನ್ನು ಸ್ವತಃತರಬೇಕು ಹಾಗೂ ಪ್ರಾಂಶುಪಾಲರ ಸಹಿ ಇರುವ ಗುರುತಿನ ಪತ್ರವನ್ನು ಹೊಂದಿರಬೇಕು.


ಪಂದ್ಯಾಟದಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಪ್ರವೇಶಪತ್ರ ಮತ್ತು ಶುಲ್ಕ ರೂ 200.00ನ್ನು ಪ್ರಾಂಶುಪಾಲರು, ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ನೆಹರುನಗರ, ಪುತ್ತೂರು. ದ.ಕ. 574203 ಇವರಿಗೆ ಪಾವತಿಸಬೇಕು. ಸ್ಫರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ವಿಜೇತರಿಗೆ ಮತ್ತುಉತ್ತಮ 10 ಮಂದಿ ಆಟಗಾರರಿಗೆ ಶಾಶ್ವತ ಫಲಕ ಮತ್ತು ಪ್ರಮಾಣಪತ್ರ ನೀಡಲಾಗುತ್ತದೆ. ಉತ್ತಮ 3 ಮಹಿಳಾ ಆಟಗಾರ್ತಿಯರಿಗೆ ವಿಶೇಷ ಬಹುಮಾನ ನೀಡಲಾಗುತ್ತದೆ. ಎಲ್ಲಾ ಸುತ್ತುಗಳಲ್ಲಿ ಭಾಗವಹಿಸಿದ ಆಟಗಾರರಿಗೆ ಪ್ರಮಾಣ ಪತ್ರ ನೀಡಲಾಗುವುದು.


ಭಾಗವಹಿಸಲು ಇಚ್ಚಿಸುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು, ಅಗಸ್ಟ್ 27 ರ ಮೊದಲುತಮ್ಮ ಪ್ರವೇಶವನ್ನು ನೊಂದಾಯಿಸಿಕೊಳ್ಳಬೇಕು ಎಂದುಕಾಲೇಜಿನ ಪ್ರಾಂಶುಪಾಲರಾದ  ಡಾ.ಶ್ರೀಧರ್ ನಾಯಕ್‍ಅವರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೈಹಿಕ ಶಿಕ್ಷಣ ನಿರ್ದೇಶಕರಾದರವಿಶಂಕರ್ ವಿ.ಎಸ್ (ಮೊಬೈಲ್-9480656799) ಇವರನ್ನು ಸಂಪರ್ಕಿಸಬಹುದು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top