ಸುರತ್ಕಲ್ ಗೋವಿಂದ ದಾಸ ಕಾಲೇಜಿನಲ್ಲಿ ಮೌಲ್ಯ ಶಿಕ್ಷಣ ಕಾರ್ಯಾಗಾರ
ಸುರತ್ಕಲ್: ಜೀವನದಲ್ಲಿ ಪರಿಪೂರ್ಣತೆಯನ್ನು ಪಡೆದು ಸಾರ್ಥಕ ಜೀವನ ನಡೆಸಬೇಕಾದರೆ ಉನ್ನತ ಜೀವನ ಮೌಲ್ಯಗಳನ್ನು ಮತ್ತು ಸ್ವಾಮಿ ವಿವೇಕಾನಂದರಂತಹ ಆದರ್ಶ ವ್ಯಕ್ತಿಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಐಶಾರಾಮಿ ಜೀವನಕ್ಕಿಂತ ಮೌಲ್ಯಯುತ ಜೀವನವನ್ನು ನಡೆಸುವುದು ಶ್ರೇಷ್ಠವಾದದ್ದು ಎಂದು ಮೈಸೂರಿನ ವಿವೇಕವಂಶಿ ಸಂಸ್ಥೆಯ ಸ್ಥಾಪಕಾಧ್ಯಕ್ಷ ನಿತ್ಯಾನಂದ ಎಸ್.ಬಿ. ನುಡಿದರು.
ಅವರು ಹಿಂದು ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್ ಇಲ್ಲಿನ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜು, ಸುರತ್ಕಲ್‌ನ ಆಂತರಿಕ ಗುಣಮಟ್ಟ ಖಾತರಿ ಕೋಶ ಹಾಗೂ ಮೌಲ್ಯ ಶಿಕ್ಷಣ ಸಂಘ ಮತ್ತು ಭಕ್ತ ಶ್ರೀ ಕುತ್ತೆತ್ತೂರು ಗೋವಿಂದ ದಾಸ ಚಾರಿಟೇಬಲ್ ಟ್ರಸ್ಟ್ ಫೌಂಡೇಶನ್ ಜಂಟಿಯಾಗಿ ಆಯೋಜಿಸಿದ್ದ ಮೌಲ್ಯ ಶಿಕ್ಷಣ ಕಾರ್ಯಾಗಾರ ‘ಜೀವನದಲ್ಲಿ ಪರಿಪೂರ್ಣತೆಯ ಮೌಲ್ಯಗಳಿಗೆ ದಾರಿ’ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಹರೀಶ ಆಚಾರ್ಯ ಪಿ. ಮಾತನಾಡಿ ಶೈಕ್ಷಣಿಕ ಪಠ್ಯಕ್ರಮಗಳೊಂದಿಗೆ ಮೌಲ್ಯ ಶಿಕ್ಷಣವೂ ಜೀವನಕ್ಕೆ ಅಗತ್ಯವಾಗಿದ್ದು ದೇಶದ ಮುಂದಿನ ಸತ್ಪ್ರಜೆಗಳನ್ನು ರೂಪಿಸುವ ಮಾರ್ಗದರ್ಶಕವಾಗಿದೆ ಎಂದರು.
ಭಕ್ತ ಕುತ್ತೆತ್ತೂರು ಶ್ರೀ ಗೋವಿಂದ ದಾಸ ಚಾರಿಟೇಬಲ್ ಟ್ರಸ್ಟ್ ಫೌಂಡೇಶನ್‌ನ ಕಾರ್ಯದರ್ಶಿ ಎಂ. ರಮೇಶ್ ರಾವ್ ಶುಭ ಹಾರೈಸಿದರು. ಮೌಲ್ಯ ಶಿಕ್ಷಣ ಸಂಘದ ಸಂಯೋಜಕ ಡಾ. ಸಂತೋಷ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.
ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಮತ್ತು ಉಪಪ್ರಾಂಶುಪಾಲ ಪ್ರೊ. ನೀಲಪ್ಪ ವಿ. ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ