ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ 21ನೇ ಪದವಿ ಪ್ರದಾನ ಸಮಾರಂಭ

Upayuktha
0

ಸಂಸ್ಥೆಯ ಹೆಮ್ಮೆಯ ಸಾಧನೆಗಳಲ್ಲಿ ನೀವು ಪಾಲುದಾರರು: ವಾಸುದೇವ ಕಾಮತ್




ಮಂಗಳೂರು: “ನಮ್ಮ ಕಾಲೇಜಿನಲ್ಲಿ ನಿರ್ಮಿಸಿದ ಆಧುನಿಕ ಸೌಲಭ್ಯಗಳು, ಈ ತಾಂತ್ರಿಕ ಶಿಕ್ಷಣ ಸಂಸ್ಥೆಗೆ ದೊರಕಿದ ಸ್ವಾಯತ್ತ ಸ್ಥಾನಮಾನ, NAAC ಮಾನ್ಯತೆ, ಅನೇಕ ಶ್ರೇಣಿಗಳು ಹಾಗೂ ಚಿನ್ನದ ಪದಕ ಇವು ಸಂಸ್ಥೆಯ ಹೆಮ್ಮೆಯ ಸಾಧನೆಗಳು. ಈ ಸಾಧನೆಗಳ ಸಹಯಾತ್ರಿಗಳೆಂದರೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು. ಬರುವ ಡಿಸೆಂಬರ್ 24, 2025ರಂದು ಜರುಗುವ ಜಾಗತಿಕ ಹಳೆಯ ವಿದ್ಯಾರ್ಥಿ ಸಮಾವೇಶದಲ್ಲಿ ಪ್ರತಿಯೊಬ್ಬ ಪದವೀಧರರೂ ಪಾಲ್ಗೊಳ್ಳಿ, ಸಂಸ್ಥೆಯ ಶಕ್ತಿಯನ್ನು ವಿಶ್ವಮಟ್ಟದಲ್ಲಿ ಪ್ರದರ್ಶಿಸೋಣ” ಎಂದು ಕೆನರಾ ಹೈಸ್ಕೂಲ್ ಅಸೋಸಿಯೇಷನ್ (CHSA) ಅಧ್ಯಕ್ಷ ಡಿ. ವಾಸುದೇವ ಕಾಮತ್ ಹೇಳಿದರು.


ಅವರು ಕೆನರಾ ಎಂಜಿನಿಯರಿಂಗ್ ಕಾಲೇಜಿನ 21ನೇ ಪದವಿ ಪ್ರಧಾನ ಸಮಾರಂಭದಲ್ಲಿ ಅಧ್ಯಕ್ಷರಾಗಿ ಮಾತನಾಡಿ, “ಕಾಲೇಜಿನ ಬೆಳೆವ ಹಾದಿ ಪ್ರತಿ ಹಂತದಲ್ಲೂ ಪ್ರಗತಿಯನ್ನೇ ತೋರಿಸುತ್ತಿದೆ. ಇಂತಹ ಸಂಸ್ಥೆಯ ಭಾಗವಾಗಿರುವುದು ಪ್ರತಿಯೊಬ್ಬ ಪದವೀಧರರ ಹೆಮ್ಮೆಯ ವಿಷಯವಾಗಲಿ” ಎಂದರು.


ಕಾರ್ಯಕ್ರಮದಲ್ಲಿ ಮಾತನಾಡಿದ ಮಾನ್ಯ ಕಾರ್ಯದರ್ಶಿ ಎಂ. ರಂಗನಾಥ್ ಭಟ್ ಅವರು, ತಮ್ಮ ಪದವಿ ದಿನಗಳ ನೆನಪುಗಳನ್ನು ಹಂಚಿಕೊಂಡು, “ಜೀವನದಲ್ಲಿ ಬರುವ ವಿಫಲತೆಯಿಂದ ಕುಗ್ಗದೆ ಧೈರ್ಯದಿಂದ ಮುಂದೆ ಸಾಗಬೇಕು. ಸಾಧನೆಗಳನ್ನು ಕಾಪಾಡಿಕೊಳ್ಳಿ, ಸ್ವಾವಲಂಬಿ ಆಗಿ. ಕಾಲೇಜು ಪಡೆದಿರುವ ಸ್ವಾಯತ್ತ ಸ್ಥಾನಮಾನ, NAAC ಮಾನ್ಯತೆ, 10 ವಿ.ಟಿ.ಯು. ಶ್ರೇಣಿಗಳು ಹಾಗೂ ಚಿನ್ನದ ಪದಕ—ಇವು ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ” ಎಂದು ಹೇಳಿದರು.


ಪದವಿ ಪ್ರಧಾನ ಸಮಾರಂಭದಲ್ಲಿ ವಿಭಾಗವಾರು ಶ್ರೇಷ್ಠ ಸಾಧಕರಾದವರನ್ನು, ಕ್ಲಾಸ್ ಪ್ರತಿನಿಧಿಗಳು ಹಾಗೂ ಕ್ಲಬ್ ಸಲಹೆಗಾರರನ್ನು ಪೋಷಕರ ಸಮೇತ ಸನ್ಮಾನಿಸಲಾಯಿತು.. ವಿವಿಧ ಶಾಖೆಗಳ ಪದವೀಧರರಿಗೆ ಪದವಿ ಪ್ರಮಾಣಪತ್ರ ವಿತರಿಸಲಾಯಿತು.


ಹೊಸ ಯೋಜನೆಗಳ ಉದ್ಘಾಟನೆ: 

ಈ ಸಂದರ್ಭದಲ್ಲಿ- ಹೊಸ ಪರೀಕ್ಷಾ ವಿಭಾಗ, 60 ಕಿಲೋವ್ಯಾಟ್ ಸೌರಶಕ್ತಿ ಘಟಕ (ಸಂಸ್ಥೆಯ ಹಸಿರು ಬದ್ಧತೆಯ ಸಂಕೇತ), ವಿದ್ಯಾರ್ಥಿಗಳಿಗೆ ಆಧುನಿಕ ವಸತಿ ಸೌಲಭ್ಯ ಒದಗಿಸುವ “ನಂದಿನಿ ಹಾಸ್ಟೆಲ್” ಸಹಿತ ಮೂರು ಪ್ರಮುಖ ಯೋಜನೆಗಳೂ ಉದ್ಘಾಟನೆಯಾದವು.


ನಾಲ್ವರು ಪದವೀಧರರು ತಮ್ಮ ಹೃದಯಂಗಮ ಅನುಭವ ಹಂಚಿಕೊಂಡು, ವಿದ್ಯಾಭ್ಯಾಸದ ಪಯಣ, ಕಾಲೇಜಿನ ಜೀವನ, ಹಾಗೂ ಆತ್ಮವಿಶ್ವಾಸ ಮತ್ತು ವೃತ್ತಿ ರೂಪಿಕರಣದಲ್ಲಿ ಸಂಸ್ಥೆಯ ಪಾತ್ರವನ್ನು ನೆನಪಿಸಿಕೊಂಡರು. ಗುರುಗಳಿಗೆ ಕೃತಜ್ಞತೆ ಹಾಗೂ ಸಂಸ್ಥೆಯ ಭಾಗವಾಗಿರುವ ಹೆಮ್ಮೆ ಅವರ ಮಾತುಗಳಲ್ಲಿ ವ್ಯಕ್ತವಾಯಿತು.


ಕೆನರಾ ವಿಕಾಸ್ ಸಂಸ್ಥೆಯ ಸಂಯೋಜಕರಾದ ಬಸ್ತಿ ಪುರುಷೋತ್ತಮ್ ಶೆಣೈ, ಗವರ್ನಿಂಗ್ ಕೌನ್ಸಿಲ್‌ನ ಸದಸ್ಯರಾದ ವಿನಾಯಕ್ ಕಾಮತ್, ಪ್ರಾಂಶುಪಾಲರಾದ ಡಾ. ನಾಗೇಶ್ ಹೆಚ್. ಆರ್., ಉಪಪ್ರಾಂಶುಪಾಲ ಡಾ. ಡೆಮಿಯನ್ ಆಂಟೋನಿ ಡಿ’ಮೆಲ್ಲೊ, ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಕಾರ್ಯಕ್ರಮದ ಅಂತ್ಯದಲ್ಲಿ ಸ್ಟೂಡೆಂಟ್ಸ್ ವೆಲ್ಫೇರ್ ನ ಡೀನ್ ಡಾ. ಪ್ರಿಯಾ ವಿ. ಫ್ರಾಂಕ್ ವಂದನೆಗಳನ್ನು ಸಲ್ಲಿಸಿದರು. ಸಮಾರಂಭವನ್ನು ಕ್ಯಾರೋಲ್ ಡಿ’ಮೆಲ್ಲೊ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top