ಪುತ್ತೂರು: ಬಿಬಿಎಂ 99 ಬ್ಯಾಚ್ ವಿದ್ಯಾರ್ಥಿಗಳ ವಿದ್ಯಾನಿಧಿ ಹಸ್ತಾಂತರ ಮತ್ತು ಕೌಶಲ್ಯ ತರಬೇತಿ ಕಾರ್ಯಕ್ರಮ ಶನಿವಾರ (ಜುಲೈ 19) ವಿವೇಕಾನಂದ ಮಹಾವಿದ್ಯಾಲಯ ನೆಹರುನಗರ, ಪುತ್ತೂರು ಇಲ್ಲಿ ನಡೆಯಲಿರುವುದು.
ಈ ಕಾರ್ಯಕ್ರಮದಲ್ಲಿ ತರಬೇತುದಾರರಾಗಿ ಕಾರ್ಯಪ್ಪ ಎಂ.ಸಿ, ಬೆಂಗಳೂರು, ಶಿವನಾರಾಯಣ ಭಟ್ ಮಂಗಳೂರು, ಆನಂದ ಶೆಟ್ಟಿ ಕಲ್ಲಡ್ಕ, ರಾಘವೇಂದ್ರ ಬಾಲಕೃಷ್ಣ ಬೆಂಗಳೂರು, ಸತೀಶ್ ಶೆಣೈ U.S.A ಭಾಗವಹಿಸಲಿದ್ದಾರೆ.
ಸದಾಶಿವ್ ಪುತ್ತೂರು (ಬೆಂಗಳೂರು) ಮತ್ತು ಕೃಷ್ಣರಾಜ ಅಡಾಲ (ಬೆಂಗಳೂರು)ಈ ಕಾರ್ಯಕ್ರಮದ ಪರಿಕಲ್ಪನೆ ಮತ್ತು ಆಯೋಜಕರಾಗಿರುತ್ತಾರೆ.
ಅಂತಾರಾಷ್ಟ್ರೀಯ ತೆರಿಗೆ ವಿಭಾಗಗಳಲ್ಲಿ ಉದ್ಯೋಗಾವಕಾಶಗಳು ಮತ್ತು ಅದಕ್ಕೆ ತಯಾರಿ ಹೇಗೆ?- ಈ ವಿಚಾರವಾಗಿ ಬೆಂಗಳೂರಿನ ಅರ್ನ್‌ಸ್ಟ್ & ಯಂಗ್ ಸಂಸ್ಥೆಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ರಾಗಿರುವ ಕಾರ್ಯಪ್ಪ ಎಂ.ಸಿ ಅವರು ಮೊದಲನೆಯ ಸೆಷನ್‌ನಲ್ಲಿ ಮಾಹಿತಿ ನೀಡಲಿದ್ದಾರೆ.
ಎರಡನೇ ಸೆಷನ್‌ನಲ್ಲಿ ಉದ್ಯೋಗವಾಗಿ ಕೃಷಿ ಮತ್ತು ಹೈನುಗಾರಿಕೆ- ಅನುಭವ ಹಂಚಿಕೆ ಕುರಿತು ಕಲ್ಲಡ್ಕದ ಕೃಷಿಕ ಹಾಗೂ ಪಿಡಬ್ಲ್ಯುಡಿ ಗುತ್ತಿಗೆದಾರ ಆನಂದ ಶೆಟ್ಟಿ ವಿವರಣೆ ನೀಡಲಿದ್ದಾರೆ.
ಮೂರನೇ ಸೆಷನ್ ನಲ್ಲಿ- ಸಂದರ್ಶನ ಎದುರಿಸಲು ಬೇಕಾಗುವ ಸಾಮಾನ್ಯ ಕೌಶಲ್ಯಗಳ ಕುರಿತು ಬೆಂಗಳೂರಿನ ಎಂಕ್ಯೂರ್ ಫಾರ್ಮಾದ ಝೋನಲ್ ಸೇಲ್ಸ್ ಮ್ಯಾನೇಜರ್ ಆಗಿರುವ ಶಿವನಾರಾಯಣ ಭಟ್ ಅವರು ಒಳನೋಟಗಳನ್ನು ಹಂಚಿಕೊಳ್ಳಲಿದ್ದಾರೆ.
ಬಳಿಕ ಎಐ ಬೆಂಬಲಿತ ಉದ್ಯಮ ವೃತ್ತಿಪರತೆ ಬಗ್ಗೆ ಅಮೆರಿಕದ ಎಐ ಸ್ಟ್ರಾಟಜಿ & ಟೆಕ್ ಅಲಯನ್ಸಸ್- ಎಸ್‌ಎಸ್ &ಸಿ ಬ್ಲೂ ಪ್ರಿಸಂ ನ ಉಪಾಧ್ಯಕ್ಷ ಸತೀಶ್ ಶೆಣೈ ಅವರು ವಿಚಾರ ಮಂಡಿಸಲಿದ್ದಾರೆ.
ಕೊನೆಯ ಸೆಷನ್‌ನಲ್ಲಿ ಮಾರ್ಕೆಟಿಂಗ್, ಫೈನಾನ್ಸ್ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅವಕಾಶಗಳ ಕುರಿತು ಬೆಂಗಳೂರಿನ ಕೋಟಕ್ ಬ್ಯಾಂಕ್ ಸಮೂಹದ ಮೈಕ್ರೋ ಎಲ್‌ಎಪಿ ವಿಭಾಗದ ಮುಖ್ಯಸ್ಥ ರಾಘವೇಂದ್ರ ಅವರು ಪ್ರಶ್ನೋತ್ತರ ರೂಪದಲ್ಲಿ ಮಾಹಿತಿ ಹಂಚಿಕೊಳ್ಳಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ