ಹಸಿರೇ ಉಸಿರು ಸಹಸ್ರವೃಕ್ಷ ಅಭಿಯಾನ: ಪ್ರಶಿಕ್ಷಣ ಕಾರ್ಯಕ್ರಮ

Upayuktha
0


ಉಜಿರೆ:
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಬದುಕು ಕಟ್ಟೋಣ ಬನ್ನಿ ತಂಡ ಉಜಿರೆ ಇವರ ಸಹಭಾಗಿತ್ವದಲ್ಲಿ ನಡೆಯುವ ‘ಹಸಿರೇ ಉಸಿರು’ ಸಹಸ್ರವೃಕ್ಷ ಅಭಿಯಾನ ಕುರಿತ ಪ್ರತಿಕ್ಷಣ ಕಾರ್ಯಕ್ರಮ ಉಜಿರೆ ಎಸ್ ಡಿ ಎಂ ಸೆಕೆಂಡರಿ ಶಾಲೆಯಲ್ಲಿ ಜು.18ರಂದು ನಡೆಯಿತು.


ಎಸ್.ಡಿ.ಎಂ. ಕಾಲೇಜು NSS ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಮಾತನಾಡಿ ಕಾರ್ಯಕ್ರಮದ ರೂಪುರೇಷೆ ವಿವರಿಸಿದರು. “ಗ್ರಾಮಗಳ ಅಭಿವೃದ್ಧಿ ಉದ್ದೇಶದಿಂದ ನಮ್ಮ ಎನ್ನೆಸ್ಸೆಸ್ ಘಟಕವು ಹಲವು ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ. ಅವುಗಳಲ್ಲಿ ‘ಹಸಿರೇ ಉಸಿರು’ ಕೆಲವು ವರ್ಷಗಳಿಂದ ನಡೆದು ಬಂದಿದೆ. 


ಈ ಬಾರಿ 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೇವಲ ಒಂದೇ ರೂಪಾಯಿಯಲ್ಲಿ ಸಸ್ಯ ವಿತರಿಸಲಾಗುವುದು. ಆ ಗಿಡಗಳನ್ನು ಮನೆ ಪರಿಸರದಲ್ಲಿ ನೆಟ್ಟು ತಿಂಗಳಿಗೊಮ್ಮೆ ಫೋಟೋ ತೆಗೆದು ಶಾಲೆಯ ಶಿಕ್ಷಕರಿಗೆ ವಿದ್ಯಾರ್ಥಿಗಳು ಕಳುಹಿಸುವ ಮೂಲಕ ಈ ಕಾರ್ಯ ಯಶಸ್ವಿಯಾಗುವಲ್ಲಿ ಸಹಕರಿಸಬೇಕು” ಎಂದರು. 


ವಿದ್ಯಾರ್ಥಿಗಳು ಜನ್ಮದಿನವನ್ನು ಗಿಡ ನೆಡುವ ಮೂಲಕ ಸಂಭ್ರಮಿಸಿ ನಮ್ಮ ಈ ಕಾರ್ಯವನ್ನು ಯಶಸ್ವಿಗೊಳಿಸಿ ಎಂದು ಅವರು ಮನವಿ ಮಾಡಿದರು. 19ನೇ ಶತಮಾನದಲ್ಲಿ ನಮ್ಮ ದೇಶವು ಕಾಡಿನಿಂದ ಕೂಡಿತ್ತು. ಆದರೆ ಈಗ ಜನರು ತಮ್ಮ ಸ್ವಾರ್ಥಕ್ಕಾಗಿ ಅರಣ್ಯ ಪ್ರದೇಶಗಳನ್ನು ನಾಶ ಮಾಡಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಮುಗಿಲೆತ್ತರಕ್ಕೆ ಬೆಳೆದ ಮರಗಳನ್ನು ಕತ್ತರಿಸುವುದು ತಪ್ಪೆಂದು ತಿಳಿದಿದ್ದರೂ ಜನರು ಅದೇ ತಪ್ಪುಗಳನ್ನು ಮಾಡುತ್ತಿದ್ದಾರೆ, ಪ್ರಕೃತಿಗೆ ವಿರುದ್ಧವಾದ ಕಾರ್ಯಗಳು ಮನುಕುಲದ ವಿನಾಶಕ್ಕೆ ಕಾರಣವಾಗಬಹುದು. ಪ್ರಕೃತಿಯಿಂದ ನಮಗೆ ಶುದ್ಧ ಗಾಳಿ, ನೀರು ಸಂಪನ್ಮೂಲಗಳು ಲಭಿಸುತ್ತವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಚಿಂತಿಸಬೇಕು ಎಂದರು.


ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪ್ರಭು ಮಾತನಾಡಿ, ಪರಿಸರವನ್ನು ಪ್ರಸ್ತುತ ಪೀಳಿಗೆಯ ಜನರು ನಾಶ ಮಾಡಿದ್ದಾರೆ. ಆದರೆ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳು ಪರಿಸರ ನಾಶವಾಗದಂತೆ ಅದನ್ನು ಉಳಿಸಿ ಬೆಳೆಸುವಂತಾಗಲಿ ಎಂದರು. 


ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ ಡಿ ಎಂ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಸುರೇಶ್ ಕುಮಾರ್, ಜನರು ಯಾಂತ್ರಿಕವಾಗಿ ಬದುಕುತ್ತಿದ್ದಾರೆ ಮತ್ತು ಗಿಡ ನೆಡುವ ತಾಳ್ಮೆಯಾಗಲಿ ಸಮಯವಾಗಲಿ ಜನರಿಗಿಲ್ಲ ಎಂಬುದು ಬೇಸರದ ಸಂಗತಿ. ಹಸಿರೇ ಉಸಿರು ಸಹಸ್ರ ವೃಕ್ಷ ಅಭಿಯಾನದ ಮೂಲಕ ಗಿಡಗಳನ್ನು ಬೆಳೆಸೋಣ ಎಂದರು.


“ಕೇವಲ ಫೋಟೋ, ವೀಡಿಯೋ ಸಲುವಾಗಿ ಗಿಡಗಳನ್ನು ಬೆಳೆಸದಿರಿ. ನಿಸ್ವಾರ್ಥದಿಂದ ಗಿಡ ಬೆಳೆಸುವ ಹವ್ಯಾಸವನ್ನು ಬೆಳೆಸಿಕೊಳ್ಳಿ” ಎಂದು ಸಲಹೆ ನೀಡಿದರು.  ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ NSS ಸ್ವಯಂಸೇವಕರು ಉಪಸ್ಥಿತರಿದ್ದರು. ಸ್ವಯಂಸೇವಕಿ ನಂದಿನಿ ಕಾರ್ಯಕ್ರಮ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top