ಉಡುಪಿ: ಎಬಿವಿಪಿ 77ನೇ ಸಂಸ್ಥಾಪನಾ ದಿನಾಚರಣೆ

Upayuktha
0


ಉಡುಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಜುಲೈ 9ರಂದು ಎಬಿವಿಪಿಯ 77ನೇ ಸಂಸ್ಥಾಪನಾ ದಿನವನ್ನು ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನಾಗಿ ಆಚರಿಸಲಾಯಿತು. 


ಬೆಳಗ್ಗೆ 9 ಗಂಟೆಗೆ ಸರಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ  ಕಾರ್ಯಾಲಯ ಕೇಶವ ನಿಲಯದ ಮಾಧವ ಸಭಾಂಗಣದಲ್ಲಿ ಧ್ವಜಾರೋಹಣ ನಡೆಸಿ ನಂತರ ಮಾತನಾಡಿದ ಎಬಿವಿಪಿಯ ಹಿರಿಯ ಕಾರ್ಯಕರ್ತರಾದ ಡಾ| ಶಿವಾನಂದ ನಾಯಕ್ ಕಳೆದ ಅನೇಕ ದಶಕಗಳಿಂದ ಕಾಲೇಜಿನಲ್ಲಿರುವ ಯುವಕರಲ್ಲಿ ರಾಷ್ಟ್ರ ಪ್ರೇಮದ ಬೀಜವನ್ನು ಬಿತ್ತಿ ರಾಷ್ಟ್ರ ಪುನರ್ನಿರ್ಮಾಣದ ಸಂಕಲ್ಪದ ಕೈಂಕರ್ಯವನ್ನು ಕೈಗೊಳ್ಳುವಂತೆ ಮಾಡುತ್ತಿರುವ ಏಕೈಕ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಎಂದು ಹೇಳಿದರು.


ನಗರ ಕಾರ್ಯದರ್ಶಿ ಮಾಣಿಕ್ಯ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಎಬಿವಿಪಿ ತನ್ನ ಸದಸ್ಯತ್ವದ ಮೂಲಕ ವಿಶ್ವದ ಅತೀ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿದೆ ಮತ್ತು ಈ ಬಾರಿಯ ಸದಸ್ಯತ್ವ ಅಭಿಯಾನವು ಇಂದಿನಿಂದ ಪ್ರಾರಂಭವಾಗಲಿದ್ದು ಉಡುಪಿಯ ವಿದ್ಯಾರ್ಥಿಗಳು ಅತೀ ಹೆಚ್ಚು ಸಂಖ್ಯೆಯಲ್ಲಿ ಇದರಲ್ಲಿ ಭಾಗವಹಿಸಿ ಈ ಹಿಂದಿನಂತೆ ಮುಂದೆ ನಡೆಯಲಿರುವ ರಚನಾತ್ಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕರೆ ನೀಡಿದರು.


ಕಾರ್ಯಕ್ರಮದಲ್ಲಿ ನಗರ ಉಪಾಧ್ಯಕ್ಷರಾದ ಪ್ರೊ| ಪ್ರವೀಣ್ ಆಚಾರ್ಯ ಅವರ ಉಪಸ್ಥಿತರಿದ್ದರು. ರಾಜ್ಯ ಸಹ ಕಾರ್ಯದರ್ಶಿ ಗಣೇಶ್ ಪೂಜಾರಿ, ಜಿಲ್ಲಾ ಸಂಚಾಲಕ ಶ್ರೇಯಸ್ ಅಂಚನ್,  ಕರ್ನಾಟಕ ದಕ್ಷಿಣ ಪ್ರಾಂತದ ಸಾಮಾಜಿಕ ಜಾಲತಾಣ ಪ್ರಮುಖ್ ನವೀನ್, ನಗರ ಸಹ ಕಾರ್ಯದರ್ಶಿ ಶಿವನ್,  ಹಾಗೂ ಹಿರಿಯ ಕಾರ್ಯಕರ್ತರಾದ ಆಶೀಷ್ ಶೆಟ್ಟಿ ಬೋಳ ಮತ್ತು ಅಜಿತ್ ಜೋಗಿ ಮತ್ತು ಪ್ರಮುಖರಾದ ಮನೀಶ್, ಸ್ವಸ್ತಿಕ್, ಅಂಕಿತಾ, ಮನು, ಲ್ಯಾರಿ, ಕಿಶೋರ್, ಹೃಷಿತ್ ಸೇರಿದಂತೆ ಇತರೆ ಕಾರ್ಯಕರ್ತರು ಭಾಗವಹಿಸಿದ್ದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top