ಉಡುಪಿಯಲ್ಲಿ ಈ ಬಾರಿ 48 ದಿನಗಳ ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವ

Upayuktha
0

  • ಆಗಸ್ಟ್ 1ರಿಂದ ಸೆಪ್ಟೆಂಬರ್ 17ರ ವರೆಗೆ ಉತ್ಸವ
  • ಜು.25ರಂದು ರಾಜ್ಯಪಾಲರಿಂದ ಉತ್ಸವಕ್ಕೆ ಚಾಲನೆ



ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ವತಿಯಿಂದ ಆಗಸ್ಟ್ 1ರಿಂದ ಸೆಪ್ಟೆಂಬರ್ 17ರ ವರೆಗೆ ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವ (48 ದಿನಗಳ ಉತ್ಸವ) ಆಚರಿಸಲಾಗುತ್ತಿದೆ.  ಉತ್ಸವದ ಉದ್ಘಾಟನೆಯನ್ನು ಗೌರವಾನ್ವಿತ ರಾಜ್ಯಪಾಲರಾದ ತಾವರ್‌ಚಂದ್ ಗೆಹ್ಲೋಟ್ ಅವರು ಶುಕ್ರವಾರ (ಜುಲೈ 25) ಸಂಜೆ 4:30ಕ್ಕೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನೆರವೇರಿಸಲಿದ್ದಾರೆ.


ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಹೆಯ ವೈಸ್ ಚಾನ್ಸಲರ್ ಹಾಗೂ ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ ಎಚ್‌.ಎಸ್‌. ಬಲ್ಲಾಳ್,, ಬೆಂಗಳೂರಿನ ಉದ್ಯಮ ರಾಘವೇಂದ್ರ ರಾವ್, ಬೆಂಗಳೂರಿನ ಭೀಮಾ ಗೋಲ್ಡ್ ಆಡಳಿತ ನಿರ್ದೇಶಕ ವಿಷ್ಣುಶರಣ್ ಹಾಗೂ ಉದ್ಯಮಿ ಬಾಳೆಕುದ್ರು ರಾಮಚಂದ್ರ ಉಪಾಧ್ಯಾಯ ಅವರು ಪಾಲ್ಗೊಳ್ಳಲಿದ್ದಾರೆ.


ಶ್ರೀಗಳವರ ಸಂಕಲ್ಪದಂತೆ ಪ್ರತಿದಿನವೂ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಾಟಕ ಪ್ರದರ್ಶನ, ನೃತ್ಯ ಪ್ರದರ್ಶನ, ಶ್ರೀಕೃಷ್ಣನಿಗೆ ಪ್ರಿಯವಾದ ಉಡುಗೊರೆಗಳ ಕಾಣಿಕೆ ಸಲ್ಲಿಕೆ- ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹೈದರಾಬಾದ್‌, ಚೆನ್ನೈಗಳಿಂದ ಆಗಮಿಸುವ ಭರತನಾಟ್ಯ ಕಲಾವಿದರು ವಿಶೇಷ ಪ್ರದರ್ಶನಗಳನ್ನು ನೀಡಲಿದ್ದಾರೆ.


ಬಾಗಲಕೋಟೆಯಿಂದ ಆಗಮಿಸುವ ಕಲಾವಿದರು ಶ್ರೀ ಪ್ರಸನ್ನ ವೆಂಕಟದಾಸರ ಕುರಿತ ನಾಟಕ ಪ್ರದರ್ಶನ ನೀಡಲಿದ್ದಾರೆ. ಜಾನಪದ ಪ್ರಶಸ್ತಿ ಪುರಸ್ಕೃತರಾದ ಉಡುಪಿಯ ಡಾ. ಗಣೇಶ್ ಗಂಗೊಳ್ಳಿ ಅವರಿಂದ ಜಾನಪದ ಹಾಡುಗಳು, ಭಕ್ತಿಗೀತೆಗಳ ಗಾಯನವಿದೆ. ಆಗಸ್ಟ್ 12ರಂದು ನಿಟ್ಟೆ ವಿದ್ಯಾಸಂಸ್ಥೆಯವರಿಂದ ವಿಶೇಷ ಸಮ್ಮೇಳನ ನಡೆಯಲಿದೆ.

ಉಡುಪಿಯ ಗೀತಾ ಮಂದಿರದಲ್ಲಿ ಬುಧವಾರದಂದು ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಪತ್ರಿಕಾಗೋಷ್ಠಿಯಲ್ಲಿ ಜನ್ಮಾಷ್ಟಮಿ ಮಂಡಲೋತ್ಸವದ ಸಂಪೂರ್ಣ ಮಾಹಿತಿ ನೀಡಿದರು. ಕಿರಿಯ ಶ್ರೀಗಳಾದ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಮಠದ ಪ್ರಧಾನರಾದ ಪ್ರಸನ್ನಾಚಾರ್ಯ ಹಾಗೂ ಇತರ ಗಣ್ಯರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top