ಬಾಳೆಹೊನ್ನೂರಿನಲ್ಲಿ ಆನೆ ದಾಳಿಗೆ ಮತ್ತೊಬ್ಬರು ಬಲಿ
ಬಡತನದಲ್ಲಿ ಮಕ್ಕಳು ಜಾಸ್ತಿ ಅಂತ ಒಂದು ಗಾದೆ ಇದೆ! ಆನೆ-ಕಾಡುಕೋಣ-ಮಂಗಗಳಿಗೆ ತಿನ್ನುವುದಕ್ಕೆ ಆಹಾರ ಕೊರತೆಯಾಗಿ, ಆಹಾರ ಬಡತನ ಹೆಚ್ಚಿ, ವಂಶಾಭಿವೃದ್ಧಿ ಹೆಚ್ಚುತ್ತಿದೆಯಾ!? ಅಗ್ರೆಸ್ಸಿವ್ ಆಗುತ್ತಿವೆಯಾ!!?
1) ಆನೆಗಳು (ಕಾಡು ಕೋಣ, ಮಂಗಗಳೂ ಕೂಡ) ಕಾಡು ಬಿಟ್ಟು ಕಾಡಂಚಿಗೆ ಯಾಕೆ ಬರ್ತಾ ಇದಾವೆ?
a) ಕಾಡಿನಲ್ಲಿ ಮೇವಿನ ಕೊರತೆ? (ಹಣ್ಣು, ಸೊಪ್ಪು, ಹುಲ್ಲು... ಇತ್ಯಾದಿ)
b) ಕಾಡಿನಲ್ಲಿ ನೀರಿನ ಕೊರತೆ?
c) ಕಾಡಿನ ಮೇವಿಗಿಂತ ಕಾಡಂಚಿನಲ್ಲಿ ರೈತರು ಬೆಳೆದ ಬೆಳೆಗಳು ಹೆಚ್ಚು ರುಚಿ? (ನಮಗೆ ಮನೆ ಫುಡ್‌ಗಿಂತ ಜಂಕ್ ಫುಡ್ ಜಾಸ್ತಿ ಇಷ್ಟವಾಗಿ ಪ್ಯಾಟಿಗೆ ಹೋದಂತೆ!)
2) ಆನೆ, ಕಾಡುಕೋಣಗಳು ಕಾಡಂಚಿಗೆ ಬಂದಾಗಲೂ ಮನುಷ್ಯರ ಮೇಲೆ ಧಾಳಿ ಮಾಡುತ್ತಿರುವುದೇಕೆ?
a) ಹಸಿವು
b) ಬಾಯಾರಿಕೆ
c) ದಾಳಿ ಮಾಡುವಂತೆ ಯಾರಾದರೂ ಟ್ರೈನಿಂಗ್ ಕೊಟ್ಟಿರಬಹುದಾ? (ನೆಲವಾಸಿಗಳು ಗುಳೆ ಎದ್ದು ಹೋಗಲಿ, ಮಲೆನಾಡಿನಲ್ಲಿ ವಾಸ ಮಾಡುವುದು ಅಪಾಯ ಎಂಬ ಸಂದೇಶ ಹರಡಿ, ಇಲ್ಲಿ ವಾಸಿಸುವ ನೆಲವಾಸಿಗಳ ಜನಸಂಖ್ಯೆಯನ್ನು ಕಡಿತಗೊಳಿಸಿ, ಕೃಷಿ-ವ್ಯಾಪಾರ-ಟ್ರಾನ್ಸ್‌ಪೋರ್ಟ್‌ಗಳನ್ನು ಮಲೆನಾಡಿನ ಧಾರಣಾ ಶಕ್ತಿ ನಿಯಂತ್ರಣ ಹೆಸರಿನಲ್ಲಿ ಮಾಡುತ್ತಿರುವ ಹುನ್ನಾರಕ್ಕೆ ಟ್ರೈನಿಂಗ್ ಕೊಟ್ಟು ದಾಳಿ ಶಿಬಿರಗಳ ರಹಸ್ಯ ಕಾರ್ಯಾಚರಣೆ ಮಾಡ್ತಾ ಇರಬಹುದಾ? ಹೀಗೆ ಮಾಡುವುದಕ್ಕೆ ನಗರ ಪರಿಸರವಾದಿಗಳ ಅಭಿಪ್ರಾಯ ಪಡೆದು, NGO ಸಹಕಾರದೊಂದಿಗೆ, ಸರಕಾರ ಕಾರ್ಯಪ್ರವೃತ್ತ ವಾಗಿರಬಹುದಾ?
ಟೋಟಲಿ ಏನೋ ಇದೆ, ಆದರೆ ಅರ್ಥ ಆಗ್ತಾ ಇಲ್ಲ! ಇಲ್ಲಾಂದ್ರೆ ಆನೆ ಮನೆಗೇ ಬಂದು ದಾಳಿ ಮಾಡುವುದೆಂದ್ರೆ? ಸುಮ್ಮನಿರುತ್ತಿದ್ದ ಕಾಡುಕೋಣಗಳು ಈಗ ಅಗ್ರೆಸ್ಸಿವ್ ಆಗುವುದೆಂದರೆ? ಮಂಗಗಳು ಅಕ್ಷೋಹಿಣಿ ಸೈನ್ಯವಾಗಿ ಬೆಳೆದು ಕಾಡುವುದೆಂದರೆ!?
ಇದಕ್ಕೆ ಪೂರಕವಾಗಿ ಆಡಳಿತ ವ್ಯವಸ್ಥೆಯ ಮನಸ್ಥಿತಿಯನ್ನು ಗಮನಿಸಿದರೆ:
1) ಅಡಿಕೆ ಎಲೆ ಚುಕ್ಕಿ, ಹಳದಿ ರೋಗ ಬಂದಾಗಲೂ, ಅದರಿಂದ ಬದುಕಲು ಸಾಧ್ಯವಾಗದೆ ರೈತರು ಆತ್ಮ ಹತ್ಯೆ ಮಾಡಿಕೊಂಡಾಗಲೂ ಏನೂ ಕ್ರಮ ಇಲ್ಲ.
2) ಮಲೆನಾಡಿನ ಜೀವ ನಾಡಿಯಾದ ಅಡಿಕೆ ಸಮಸ್ಯೆಗಳಿಗೆ ಸರಕಾರದ ನಯಾಪೈಸೆಯ ಸ್ಪಷ್ಟ ಸ್ಪಂದನ ಇಲ್ಲದಿರುವುದು.
3) ಭತ್ತ ಬೆಳೆಯಲಿಕ್ಕೆ ಸಾಧ್ಯವಿಲ್ಲದಷ್ಟು ಅದರ ಖರ್ಚು ಆದಾಯಕ್ಕಿಂತ ಹೆಚ್ಚಾಗಿ, ರೈತರು ಗದ್ದೆ ಹಾಳು ಬಿಡುತ್ತಿದ್ದರೂ ಸರಕಾರ, ಕೃಷಿ ಇಲಾಖೆಗಳು ತಟಸ್ಥವಾಗಿರುವುದು. (ಬೆಂಬಲ ಬೆಲೆ, ಕೃಷಿ ಬಜೆಟ್‌ನಲ್ಲಿ ಎತ್ತಿಟ್ಟ ರುಪಾಯಿಯಲ್ಲಿನ 28 ಪೈಸೆ ಎಲ್ಲಿಗೆ ಹೋಗುತ್ತೆ!?)
4) ಮಲೆನಾಡ ಹೈನುಗಾರಿಕೆ ನಷ್ಟದ ದಾರಿ ಹಿಡಿದು ಸಮಸ್ಯೆ ಎದುರಿಸುವ ಕಾಲದಲ್ಲಿ "ಕಾಡಿಗೆ ಮೇಯಲು ಬಿಡಬಾರದು" ಎಂಬಂತಹ ಕಾನೂನು ಹೊರಡಿಸುವುದು.
5) ಅರ್ಧಂಬರ್ಧ ಅಭಿವೃದ್ಧಿ ಪಡಿಸಿ ಬೇಯಿಸಿದ ಸಾಫ್ಟ್‌ವೇರ್ ತಂತ್ರಜ್ಞಾನವನ್ನು ಮಲೆನಾಡಿಗೆ ಕೃಷಿಯೊಳಗೆ ತಂದು ಹಾಕಿ ಹತ್ತಾರು ಗೋಜಲು, ಗೊಂದಲಗಳನ್ನು ಸೃಷ್ಟಿಸಿ, ಸರಿಪಡಿಸಲು ಒತ್ತಾಯಿಸಿದರೂ ವರ್ಷ ವರ್ಷವೂ ಗೋಜಲು, ಗೊಂದಲಗಳನ್ನು ಯಥಾಸ್ಥಿತಿಯಲ್ಲಿ ಮುಂದುವರೆಸುತ್ತಿರುವುದು.
6) ಮಲೆನಾಡಿನಲ್ಲಿ ಯಾವುದೇ ಮೂಲಭೂತ ಸೌಕರ್ಯಗಳ (ರಸ್ತೆ, ನೀರು, ಕಸ ನಿರ್ವಹಣೆ, ಕೃಷಿ ಉತ್ತೇಜನ...) ಅಭಿವೃದ್ಧಿಗಳನ್ನು ಸಂಪೂರ್ಣ ನಿರ್ಲಕ್ಷಿಸಿರುವುದು.
ಟೋಟಲಿ ಏನೋ ಇದೆ, ಆದರೆ ಅರ್ಥ ಆಗ್ತಾ ಇಲ್ಲ! ಇಲ್ಲಾಂದ್ರೆ ಆನೆ ಮನೆಗೇ ಬಂದು ದಾಳಿ ಮಾಡುವುದೆಂದ್ರೆ? ಸುಮ್ಮನಿರುತ್ತಿದ್ದ ಕಾಡುಕೋಣಗಳು ಈಗ ಅಗ್ರೆಸ್ಸಿವ್ ಆಗುವುದೆಂದರೆ? ಅಗ್ರೆಸ್ಸಿವ್ ಆಗಬೇಕಿದ್ದ ಜನ ಪ್ರತಿನಿಧಿಗಳು ಸೈಲೆಂಟ್ ಆಗುವುದೆಂದರೆ!?
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ