ದಕ್ಷಿಣ ಕನ್ನಡ ಹೆಸರಿಗೆ ಭೌಗೋಳಿಕ ಆಸ್ಮಿತೆ ಈಗಿಲ್ಲ; ಮಂಗಳೂರು ಜಿಲ್ಲೆ ಹೆಸರೇ ಸೂಕ್ತ

Chandrashekhara Kulamarva
0


ಹು ಕಾಲದಿಂದಲೂ ದಕ್ಷಿಣ ಕನ್ನಡ ಜಿಲ್ಲೆ ಎಂದೇ ಕರೆಸಿಕೊಂಡಿರುವ ಜಿಲ್ಲೆಗೆ ಇದೀಗ ಹೆಸರು ಬದಲಾಯಿಸಬೇಕು ಅನ್ನುವ ಒತ್ತಾಯ ಕೇಳಿ ಬರುತ್ತಿದೆ. ಈ ಒತ್ತಾಯ ಸಹಜ ಕೂಡ. ಯಾಕೆಂದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಸರಿನ ಹಿಂದಿನ ಇತಿಹಾಸ ತೆಗೆದುಕೊಂಡರೆ ಇದು ಸ್ವಷ್ಟವಾಗಿ ತಿಳಿಯುತ್ತದೆ.


ಕರಾವಳಿಯ ಜಿಲ್ಲೆಗಳೆಂದೇ ಕರೆಸಿಕೊಂಡಿರುವ ಎರಡು ಜಿಲ್ಲೆಗಳಾದ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಈ ಎರಡು ಹೆಸರುಗಳಿಗೆ ಬೌಗೋಳಿಕವಾದ ಹಿನ್ನೆಲೆಯಲ್ಲಿರುವ ಕಾರಣ ದಕ್ಷಿಣ ಕನ್ನಡ ಜಿಲ್ಲೆ ಅನ್ನುವುದಕ್ಕೂ ಕೂಡ ಒಂದು ಭೌಗೋಳಿಕವಾದ ರೀತಿಯಲ್ಲಿ ಒಂದು ಆಸ್ಮಿತೆ ಇತ್ತು. ಆದರೆ ಯಾವಾಗ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಎರಡು ಜಿಲ್ಲೆಗಳಾಗಿ ವಿಭಜಿಸಿದಾಗಲೇ ಈ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಧ್ಯದಲ್ಲಿಯೇ ಉಡುಪಿ ಜಿಲ್ಲೆ ಹುಟ್ಟಿಕೊಂಡಾಗಲೇ ದಕ್ಷಿಣ ಕನ್ನಡ ಅನ್ನುವ ಭೌಗೋಳಿಕವಾದ ಆಸ್ಮಿತೆಯನ್ನು ಕಳೆದುಕೊಂಡಿತು.


ನಿಜಕ್ಕೂ ನೇೂಡಿದರೆ ಆವಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಬದಲಾಯಿಸಿ ಮಂಗಳೂರು ಜಿಲ್ಲೆ ಎಂದೇ ಹೆಸರಿಸಬಹುದಿತ್ತು. ಆದರೆ ಈ ಸಂದರ್ಭದಲ್ಲಿ ಯಾರು ಕೂಡಾ ಇದ್ದ ಹಳೆಯ ಹೆಸರನ್ನು ಬದಲಾಯಿಸುವ ಗೇೂಜಿಗೆ ಹೇೂಗಲಿಲ್ಲ. ಆದರೆ ಈಗ ಆಸ್ಮಿತೆಯ ಭಾವನೆ ಹುಟ್ಟಿಕೊಳ್ಳಲು ಶುರುವಾಗಿದೆ. ಇದು ತಪ್ಪಲ್ಲ. ಕೆಲವೊಮ್ಮೆ ಹೆಸರುಗಳೇ ಎಷ್ಟೊಂದು ಗೊಂದಲ ಸೃಷ್ಟಿ ಮಾಡುತ್ತದೆ. ಅಂದರೆ ನಾನು ಶ್ರೀನಗರದಲ್ಲಿ ನಿಂತು ಕಾಶ್ಮೀರ ಹುಡುಕಿದ ಹಾಗೆ. ನಿಜಕ್ಕೂ ನೇೂಡಿದರೆ ಕಾಶ್ಮೀರದಲ್ಲಿ ಕಾಶ್ಮೀರ ಇಲ್ಲ. ಅಲ್ಲಿ ಹತ್ತು ಜಿಲ್ಲೆಗಳು ಒಟ್ಟಿಗೆ ಸೇರಿ ಕಾಶ್ಮೀರವಾಗಿದೆ.


ಅದೇ ರೀತಿಯಲ್ಲಿ ಮಂಗಳೂರಿನಲ್ಲಿ ನಿಂತು ದಕ್ಷಿಣ ಕನ್ನಡ ಜಿಲ್ಲೆ ಹುಡುಕಿದ ಹಾಗೇ. ಹಾಗಾಗಿ ಮಂಗಳೂರನ್ನೇ ಕೇಂದ್ರವಾಗಿಟ್ಟು ಕೊಂಡು ಒಂಭತ್ತು ತಾಲ್ಲೂಕುಗಳನ್ನು ಮಂಗಳೂರು ಜಿಲ್ಲೆ ಎಂದೇ ನಾಮಕರಣ ಮಾಡುವುದು ಹೆಚ್ಚು ಸೂಕ್ತ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಒಂದು ಬಿಟ್ಟರೆ ಉಳಿದ ಎಲ್ಲಾ ಜಿಲ್ಲೆಗಳು ತಮ್ಮ ಕೇಂದ್ರ ಸ್ಥಾನದ ಹೆಸರಿನಿಂದಲೇ ಕರೆಯುವುದರಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡುವುದು ಹೆಚ್ಚು ಸೂಕ್ತ ಅನ್ನುವುದು ನನ್ನ ಅನಿಸಿಕೆ.


- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


إرسال تعليق

0 تعليقات
إرسال تعليق (0)
To Top