ಮಂಗಳೂರು: "ಸ್ಕೂಲ್ ಲೀಡರ್" ಕನ್ನಡ ಸಿನಿಮಾ 50 ದಿನಗಳ ಪ್ರದರ್ಶನ ಕಾಣುತ್ತಿದೆ. ಒಂದು ಕನ್ನಡ ಶಾಲೆಯ ಕಥಾ ಹಂದರವಿರುವ ಈ ಸಿನಿಮಾದಲ್ಲಿ ಕಥೆ, ಚಿತ್ರಕಥೆ, ನಿರ್ದೇಶನ, ಛಾಯಾಗ್ರಾಹಣ, ಸಂಗೀತ, ಸಾಹಿತ್ಯ, ಹಾಡು ಹೀಗೆ ಎಲ್ಲವೂ ಅದ್ಬುತವಾಗಿ ಮೂಡಿಬಂದಿದೆ. ವಿಶೇಷವಾಗಿ ಮಕ್ಕಳ ನೈಜ ನಟನೆ ಗಮನ ಸೆಳೆಯುತ್ತಿದೆ. ರಝಾಕ್ ಪುತ್ತೂರು ನಿರ್ದೇಶನದ ಸತ್ಯೆಂದ್ರ ಪೈ ನಿರ್ಮಾಣದಲ್ಲಿ ತೆರೆಗೆ ಬಂದಿರುವ ಈ ಚಿತ್ರ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಒಂದು ರೀತಿಯ ಹವಾ ಸೃಷ್ಠಿಮಾಡಿದೆ. ಪ್ರೇಕ್ಷಕರು ಇದನ್ನು ಸಂಪೂರ್ಣ ಮೆಚ್ಚಿಕೊಂಡಿದ್ದಾರೆ. ಈ ಯಶಸ್ವಿ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿರುವ ಮಂಗಳೂರಿನ ಬಿಜೈಯಲ್ಲಿರುವ ಲೂರ್ಡ್ಸ್ ಶಾಲೆಯ ವಿದ್ಯಾರ್ಥಿ ತನ್ಮಯ್ ಶೆಟ್ಟಿ ತನ್ನ ನೈಜ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾನೆ.
ಕನ್ನಡ, ತುಳು ಸೇರಿದಂತೆ ನಾನಾ ಭಾಷೆಗಳಲ್ಲಿ ಈಗಾಗಲೇ ಸುಮಾರು 13 ಚಲನಚಿತ್ರಗಳಲ್ಲಿ ನಟಿಸಿರುವ ತನ್ಮಯ್ ಶೆಟ್ಟಿ, ಇದೀಗ ಸ್ಕೂಲ್ ಲೀಡರ್ ಮೂಲಕ ಗಮನ ಸೆಳೆದಿದ್ದಾನೆ. ತನ್ನ ವಿಭಿನ್ನ ಮ್ಯಾನರಿಸಂನಿಂದ ಇಡೀ ಚಿತ್ರದಲ್ಲಿ ಭಿನ್ನವಾಗಿ ಗುರುತಿಸಿಕೊಂಡಿದ್ದಾನೆ. ಚೋಟು ಪಾತ್ರದ ಮೂಲಕ ಕಥೆಯ ಕೊಂಡಿಯಾಗಿ ಚಿತ್ರದುದ್ದಕ್ಕೂ ಪ್ರೇಕ್ಷಕರಿಗೆ ರಂಜನೆ ನೀಡಿದ್ದಾನೆ. ಹಾಸ್ಯ ಪ್ರಧಾನವಾದ ಈ ಪಾತ್ರದಲ್ಲಿ ತನ್ನ ನೈಜ ನಟನೆಯಿಂದಾಗಿ ನಿರ್ದೇಶಕರಿಂದ ಭೇಷ್ ಅನಿಸಿಕೊಂಡಿದ್ದಾನೆ. ಈತನ ನಟನೆಗೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ ಎಂಬುವುದು ಉಲ್ಲೇಖನೀಯ.
ಮಗನೇ ಮಹಿಷ ಮೂಲಕ ಎಂಟ್ರಿ:
ವೀರೇಂದ್ರ ಶೆಟ್ಟಿ ಕಾವೂರು ನಿರ್ದೇಶನದ ಮಗನೇ ಮಹಿಷ ತುಳು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ತನ್ಮಯ್, ಬಳಿಕ ಅರ್ಜುನ್ ಕಾಪಿಕಾಡ್ ನಿರ್ದೇಶನದ ಅಬತರ, ನಾಗತಿಹಳ್ಳಿ ಚಂದ್ರಶೇಖರ್ ಪ್ರಸ್ತುತಿಯ ಉದಯ್ ಕುಮಾರ್ ನಿರ್ದೇಶನದ ಬನ್-ಟಿ, ಪ್ರಶಾಂತ್ ಶೆಟ್ಟಿ ನಿರ್ದೇಶನದ ಅಪರಾಧಿ ನಾನಲ್ಲ, ಸಂದೀಪ್ ಕಾಮತ್ ನಿರ್ದೇಶನದ ಲೈಟ್ ಹೌಸ್, ಸುಧೀರ್ ರಾಜ್ ನಿರ್ದೇಶನದ ಕೊರಗಜ್ಜ, ನಿತಿನ್ ನಿರ್ದೇಶನದ ರಂಗಸ್ಥಳ, ರಂಜಿತ್ ನಿರ್ದೇಶನದ 90ಎಂಎಲ್, ಗೋಲ್ಡನ್ ಸ್ಟಾರ್ ಗಣೇಶ್ ನಿರ್ಮಾಣದ ಸಂದೀಪ್ ಬೆದ್ರ ನಿರ್ದೇಶನದ ಇನ್ನೂ ಹೆಸರಿಡದ ಕನ್ನಡ ಸಿನಿಮಾ ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ನಟಿಸಿ ಸೈ ಅಸಿಕೊಂಡಿದ್ದಾನೆ.
ಸಿನಿಮಾ ಅಲ್ಲದೆ ಡಾ. ದೇವ್‌ದಾಸ್ ಕಾಪಿಕ್ಕಾಡ್ ಅವರ "ಪುದರ್ ದೀತಿಜಿ" ನಾಟಕ ಸೇರಿದಂತೆ ರಂಗಭೂಮಿ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾನೆ. ಶಾಲೆಯ ಕಲಿಕೆಯ ಜತೆ ಜತೆಗೆ ಸಾಂಸ್ಕೃತಿಕ, ಸಂಗೀತ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದಾನೆ. ಬಾಲ ಪ್ರತಿಭೆ ತನ್ಮಯ್‌ಗೆ ಇನ್ನಷ್ಟು ಅವಕಾಶಗಳು ದೊರೆಯಲಿ ಎಂದು ಆಶಿಸೋಣ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ