ಸುಳ್ಯದಲ್ಲಿ ನೂತನ ಸ್ವರ್ಣಂ ಜುವೆಲ್ಸ್‌ ಲೋಕಾರ್ಪಣೆ

Upayuktha
0


ಸುಳ್ಯ: ಸುಳ್ಯದ ಜನತೆಗೆ ವಿನೂತನ ಶೈಲಿಯ ಮನಮೋಹಕ ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣಗಳನ್ನು ತಯಾರಿಸಿಕೊಡುವ ಸ್ವರ್ಣಂ ಜ್ಯುವೆಲ್ಸ್‌ ಸೋಮವಾರ ಕಾರ್ಯಾರಂಭ ಮಾಡಿತು.


ಸುಳ್ಯದ ಕೆಎಸ್‌ಆರ್‍‌ಟಿಬಿ ಬಸ್‌ ನಿಲ್ದಾಣದ ಎದುರಿಗಿರುವ ಸುಂತೋಡು ಎಂಪೋರಿಯಂ ಕಾಂಪ್ಲೆಕ್ಸ್‌ನಲ್ಲಿ ತೆರೆಯಲಾದ ನೂತನ ಸ್ವರ್ಣಂ ಜ್ಯುವೆಲ್ಸ್‌ ಮಳಿಗೆಯನ್ನು ಹೆಸರಾಂತ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್‌ ಮಾಲೀಕರಾದ ಕೇಶವ ಪ್ರಸಾದ್ ಮುಳಿಯ ದಂಪತಿ ಹಾಗೂ ಕೃಷ್ಣ ನಾರಾಯಣ ಮುಳಿಯ ದಂಪತಿಗಳು ದೀಪ ಬೆಳಗಿ ಉದ್ಘಾಟಿಸಿದರು.


ಮುಳಿಯ ಜ್ಯುವೆಲ್ಸ್‌ನಲ್ಲಿ 20 ವರ್ಷಗಳ ಅನುಭವ ಪಡೆದಿರುವ ಸಂಜೀವ ಕೆ., ಪ್ರವೀಣ್ ಬಿ ಗೌಡ, ಭವಿತ್ ಯು ಹಾಗೂ ಲೋಕೇಶ್ ಎಂ.ಎಸ್‌ ಅವರು ಸ್ವರ್ಣಂ ಜುವೆಲ್ಸ್‌ನ ಆಡಳಿತ ಪಾಲುದಾರರಾಗಿದ್ದಾರೆ. ಮುಳಿಯ ಜುವೆಲ್ಸ್‌ನಲ್ಲಿ ತಾವು ಪಡೆದ ಅಪೂರ್ವ ಅನುಭವಗಳನ್ನು ಹಾಗೂ ಮುಳಿಯ ಗೋಲ್ಡ್‌ & ಅಂಡ್ ಡೈಮಂಡ್ಸ್‌ ಮಾಲೀಕರೇ ಸ್ವತಃ ಆಗಮಿಸಿ ಸ್ವರ್ಣಂ ಜುವೆಲ್ಸ್ ಉದ್ಘಾಟನೆ ನೆರವೇರಿಸಿದ ಔದಾರ್ಯವನ್ನು ಮುಕ್ತವಾಗಿ ಶ್ಲಾಘಿಸಿದರು.



ಶಶಿಕಲಾ ಮಂದಿರದ ಕುಂಭಕೋಡು ಕಸ್ತೂರಿ ಅಚ್ಯುತ ಭಟ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಪ್ರಧಾನ ಕಾರ್ಯದರ್ಶಿ Ar. ಅಕ್ಷಯ್ ಕೆ.ಸಿ ಅವರು ಡೈಮಂಡ್‌ ಕೌಂಟರ್ ಅನ್ನು ಉದ್ಘಾಟಿಸಿದರು. ಸುಂತೋಡು ಎಂಪೋರಿಯಂ ಮಾಲಕ ಸೂರಯ್ಯ ಗೌಡ ಅವರು ಚಿನ್ನಾಭರಣ ಕೌಂಟರ್ ಉದ್ಘಾಟಿಸಿದರು. ತೂಗುಸೇತುವೆಗಳ ಸರದಾರ, ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಲಹೆಗಾರ ವೇಣು ಶರ್ಮಾ ಅವರು ಉಪಸ್ಥಿತರಿದ್ದರು.


*************



ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ಹಾಗೂ ಸುಳ್ಯದ ಶ್ರೀ ಚನ್ನಕೇಶವ ಸ್ವಾಮಿ, ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹದೊಂದಿಗೆ ಇವತ್ತು ಸ್ವರ್ಣಂ ಚಿನ್ನದ ಮಳಿಗೆ ಉದ್ಘಾಟನೆ ಆಗಿದೆ. ಲೋಕೇಶ, ಪ್ರವೀಣ, ಸಂಜೀವ ಮತ್ತು ಭವಿತ್ ಅವರು ಕರ್ಮಯೋಗದ ಮೂಲಕ ಈ ಹಂತಕ್ಕೆ ಅವರು ತಲುಪಿದ್ದಾರೆ. ಲೋಕೇಶ್ ಪರ್ಚೇಸ್‌ ನಲ್ಲಿ ಪರಿಣತರಾಗಿದ್ದರೆ, ಸಂಜೀವ ಮಾರ್ಕೆಮಟಿಂಗ್‌ನಲ್ಲಿ ಎಕ್ಸ್‌ಪರ್ಟ್‌ ಆಗಿದ್ದಾರೆ. ಹಾಗೆಯೇ ಪ್ರವೀಣ್ ಸೇಲ್ಸ್‌ನಲ್ಲಿ ಕೌಶಲ್ಯ ಪಡೆದಿದ್ದರೆ, ಇವೆಲ್ಲವನ್ನೂ ಸರಿದೂಗಿಸಿಕೊಂಡು ಹೋಗಲು ಭವಿತ್ ಅವರು ಫೈನಾನ್ಸ್‌ನಲ್ಲಿ ಎಕ್ಸ್‌ಪರ್ಟ್ ಆಗಿದ್ದಾರೆ. ಇವಿಷ್ಟೂ ಮಂದಿ ಜತೆಗೂಡಿ ಈ ಹೊಸ ಸ್ವರ್ಣಂ ಜುವೆಲ್ಸ್‌ ಮಳಿಗೆಯನ್ನು ಆರಂಭಿಸಿದ್ದಾರೆ. ಈ ತಂಡ ಯಶಸ್ವಿಯಾಗಿ ಮುಂದುವರಿಯಲಿ ಎಂದು ಮನಪೂರ್ವಕವಾಗಿ ಹಾರೈಸುತ್ತೇನೆ.

- ಕೇಶವ ಪ್ರಸಾದ್ ಮುಳಿಯ

ಮಾಲೀಕರು, ಮುಳಿಯ ಗೋಲ್ಡ್‌ & ಡೈಮಂಡ್ಸ್‌


ಬೃಹತ್ತಾದ ಆಲದ ಮರ ಕೂಡ ಜೋರಾದ ಗಾಳಿಗೆ ಬಿದ್ದು ಹೋಗುತ್ತದೆ. ಆದರೆ ಚಿಕ್ಕ ಚಿಕ್ಕ ಗರಿಕೆ ಹುಲ್ಲನ್ನು ಬಿರುಗಾಳಿ ಸಹ ಏನೂ ಮಾಡಲಾರದು. ಅದೇ ರೀತಿ ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವಂತೆ ದೊಡ್ಡ ಮರದ ಜತೆಗೆ ಸಣ್ಣ ಸಣ್ಣ ಗಿಡ ಮರಗಳನ್ನೂ ಬೆಳೆಸಿದರೆ ಯಾವ ಮರವೂ ಗಾಳಿಗೆ ಬಗ್ಗಬೇಕಾದ ಅಥವಾ ಬೀಳಬೇಕಾದ ಪರಿಸ್ಥಿತಿ ಬರುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ಮುಳಿಯದಲ್ಲಿ ಬೆಳೆದ ನಮ್ಮ ಸಿಬ್ಬಂದಿಗಳು ಇದೀಗ ತಾವಾಗಿಯೇ ಇಂದು ಚಿನ್ನದ ಮಳಿಗೆಯನ್ನು ತೆರೆಯುತ್ತಿರುವುದು ಬಹಳಷ್ಟು ಸಂತೋಷದ ವಿಷಯ. ಮಕ್ಕಳು ಬೆಳೆದ ಹಾಗೇ ಸ್ವತಂತ್ರವಾದ ಜೀವನವನ್ನು ಕಟ್ಟಿಕೊಳ್ಳಲು ಬಯಸುತ್ತಾರೆ. ಅದೇ ರೀತಿ ತಂದೆ ತಾಯಿಯರೂ ಅದಕ್ಕೆ ಬೆಂಬಲವಾಗಿ ನಿಲ್ಲಬೇಕಾಗುತ್ತದೆ. ಮುಳಿಯದ ಎಲ್ಲ ಮೌಲ್ಯಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಿರುವ ನೂತನ ಸ್ವರ್ಣ ಜುವೆಲ್ಸ್ ಪಾಲುದಾರರು ಗ್ರಾಹಕರ ಸೇವೆ ಮತ್ತು ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗುತ್ತಾರೆ ಎಂದು ನಾವು ಬಲವಾಗಿ ನಂಬಿದ್ದೇವೆ. 

- ಕೃಷ್ಣ ನಾರಾಯಣ ಮುಳಿಯ,

ಎಂಡಿ, ಮುಳಿಯ ಗೋಲ್ಡ್ & ಡೈಮಂಡ್ಸ್



ನೂತನ ಸ್ವರ್ಣಂ ಜುವೆಲ್ಸ್ ಮಳಿಗೆಯ ವಿನ್ಯಾಸ, ಅಲಂಕಾರ, ಆಭರಣಗಳ ಜೋಡಣೆ, ಬೆಳಕಿನ ವ್ಯವಸ್ಥೆ ಎಲ್ಲವೂ ಅದ್ಭುತವಾಗಿ ಮೂಡಿಬಂದಿದೆ. ಒಂದು ಉದ್ಯಮವನ್ನು ಆರಂಭಿಸಬೇಕಾದರೆ ಮೂರು ಅಂಶಗಳು ಅತ್ಯಂತ ಪ್ರಮುಖವಾಗಿವೆ- ಅವುಗಳೆಂದರೆ- ಸೇಲ್ಸ್‌, ಪ್ರೊಕ್ಯೂರ್‍‌ಮೆಂಟ್ ಮತ್ತು ಫೈನಾನ್ಸ್. ಈ ಮೂರರಲ್ಲೂ ನೀವು ಮುಳಿಯದಲ್ಲಿ ಕೆಲಸ ಮಾಡಿ ಅನುಭವ ಗಳಿಸಿದ್ದೀರಿ. ಇದರ ಆಧಾರದಲ್ಲಿ ಹೊಸದಾಗಿ ಆರಂಭಿಸಿದ ಸ್ವರ್ಣಂ ಜುವೆಲ್ಸ್‌ ಕೂಡ ಶೀಘ್ರವೇ ಗ್ರಾಹಕರ ವಿಸ್ವಾಸ ಗಳಿಸಿ ಯಶಸ್ವಿಯಾಗಲಿದೆ.

- Ar. ಅಕ್ಷಯ್ ಕೆ.ಸಿ

ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಪ್ರಧಾನ ಕಾರ್ಯದರ್ಶಿ



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top