ಸುರತ್ಕಲ್: ಮಾನವೀಯ ಸಂಬಂಧಗಳನ್ನು ಬೆಳೆಸುವ ರೋಟರಿ ಸಂಸ್ಥೆ. ಸಾಮಾಜಿಕ ಸೇವೆಯ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಶೈಕ್ಷಣಿಕ ಮತ್ತು ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಸುರತ್ಕಲ್ ರೋಟರಿ ಸಂಸ್ಥೆಯು ರೋಟರಿ ಜಿಲ್ಲೆಯಲ್ಲಿ ಅನನ್ಯತೆಯನ್ನು ಪಡೆದುಕೊಂಡಿದೆ ಎಂದು ರೋಟರಿ ಜಿಲ್ಲೆ 3181 ರ 2026-27ರ ನಿಯೋಜಿತ ಅಧ್ಯಕ್ಷ ಸತೀಶ ಬೋಳಾರ್ ನುಡಿದರು.
ಅವರು ಸುರತ್ಕಲ್ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ರೋಟರಿ ಜಿಲ್ಲಾ ಅತ್ತ್ಯುತ್ತಮ ಕ್ಲಬ್ ಅವಾರ್ಡ್ ಮತ್ತು ಐದು ವಿಶೇಷ ಪ್ರಶಸ್ತಿಗಳಿಗೆ ಭಾಜನವಾದ ಸುರತ್ಕಲ್ ಕ್ಲಬ್‌ನ ಸಾಧನೆಯನ್ನು ಶ್ಲಾಘಿಸಿದರು.
ನೂತನ ಅಧ್ಯಕ್ಷರಾಗಿ ರಾಮಚಂದ್ರ ಬಿ. ಕುಂದರ್ ಹಾಗೂ ಕಾರ್ಯದರ್ಶಿಯಾಗಿ ರಾಮ್ ಮೋಹನ್ ವೈ. ಅಧಿಕಾರ ಸ್ವೀಕರಿಸಿದರು. ಕೋಶಾಧಿಕಾರಿಯಾಗಿ ಮೋಹನ್ ರಾವ್ ಹೆಚ್, ಉಪಾಧ್ಯಕ್ಷರಾಗಿ ರಮೇಶ್ ರಾವ್. ಎಂ, ನಿಯೋಜಿತ ಅಧ್ಯಕ್ಷರಾಗಿ ಶ್ರೀಧರ್ ಟಿ.ಎನ್, ನಿರ್ದೇಶಕರಾಗಿ ಕೃಷ್ಣಮೂರ್ತಿ, ಚಂದ್ರಕಾಂತ್, ಯಶೋಮತಿ, ಶ್ರೀಶ ಕೆ. ಭಟ್, ಮಂಗಲದೀಪ್, ದಿನೇಶ್ ಶೆಟ್ಟಿ ಮತ್ತು ವಿವಿಧ ಸಮಿತಿಯ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ಗ್ರಹಪತ್ರಿಕೆ ಸುಹೃತ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿದ ವಲಯ 2ರ ಅಸಿಸ್ಟೆಂಟ್ ಗವರ್ನರ್ ಸಿಎ ಶಾಂತರಾಮ್ ಶೆಟ್ಟಿ, ಜಿಲ್ಲಾ ಗವರ್ನರ್ ಅವರ ದಶ ಕಾರ್ಯಕ್ರಮವನ್ನು ತಿಳಿಸಿ ಸಂಧ್ಯಾ ಸುರಕ್ಷಾ ಹಿರಿಯ ನಾಗರಿಕರ ಕಾಳಜಿ ಮತ್ತು ಅಂಗನವಾಡಿ ನವೀಕರಣ, ಪರಿಸರ ಸ್ನೇಹಿ ಯೋಜನೆಗಳ ಮಹತ್ವ ತಿಳಿಸಿದರು.
ನಿರ್ಗಮನ ಅಧ್ಯಕ್ಷ ಸಂದೀಪ್ ರಾವ್ ಇಡ್ಯಾ ಮಾತನಾಡಿ, ರೋಟರಿ ಅಭಿಯಾನದ ಸೇವಾನುಭವ ವಿಶಿಷ್ಟವಾದುದು ಎಂದರು.
ನೂತನ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್ ಸ್ನೇಹ ಪ್ರೀತಿಯ ಸಂಬಂಧಗಳ ಮೂಲಕ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದೆಂದರು.
ಸಾಮಾಜಿಕ ಸೇವಾ ಕಾರ್ಯಗಳ ಅಂಗವಾಗಿ ಸೈಕಲಿಂಗ್ ಕ್ರೀಡಾಪಟು ಹಾರ್ದಿಕ್ ರೈ ಅವರಿಗೆ ಪ್ರೋತ್ಸಾಹಕ ನೆರವು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಹಿಂದು ವಿದ್ಯಾದಾಯಿನಿ ಸಂಸ್ಥೆಯ ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಮಧ್ಯಾಹ್ನದ ಉಚಿತ ಊಟ ಯೋಜನೆಗೆ ಆರ್ಥಿಕ ಕೊಡುಗೆ ನೀಡಲಾಯಿತು.
ಆರು ಮಂದಿ ನೂತನ ಸದಸ್ಯರು ಸೇರ್ಪಡೆಗೊಂಡರು. ಆರ್ಥಿಕ ಕೊಡುಗೆ ನೀಡಿರುವ ರವಿ ಲೋಚನ ಆಚಾರ್ ಅವರನ್ನು ಗೌರವಿಸಲಾಯಿತು.
ಸುರತ್ಕಲ್ ಇನ್ನರ್ ವೀಲ್ ಕ್ಲಬ್‌ನ ನಿಯೋಜಿತ ಅಧ್ಯಕ್ಷೆ ವಿದ್ಯಾ ಪ್ರವೀಣ್ ಶುಭ ಹಾರೈಸಿದರು. ಅಧ್ಯಕ್ಷ ಸಂದೀಪ್ ರಾವ್ ಇಡ್ಯಾ ಸ್ವಾಗತಿಸಿದರು. ಕಾರ್ಯದರ್ಶಿ ನಿತೀಶ್ ಕುಮಾರ್ ವರದಿ ಮಂಡಿಸಿದರು. ಮಂಗಲ್ ದೀಪ್ ಮತ್ತು ಶ್ರೀಶ ಭಟ್ ಅತಿಥಿಗಳನ್ನು ಪರಿಚಯಿಸಿದರು. ಡಾ. ಅರವಿಂದ್ ಭಟ್ ಅತಿಥಿ ಗಳ ಗುರುತಿಸುವಿಕೆ ಪಟ್ಟಿ ವಾಚಿಸಿದರು. ನೂತನ ಕಾರ್ಯದರ್ಶಿ ರಾಮ್ ಮೋಹನ್ ವೈ. ವಂದಿಸಿದರು. ಯಶೋಮತಿ ರವೀಂದ್ರನಾಥ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ