ಸುರತ್ಕಲ್: ತುಳುನಾಡಿನ ಹಿರಿಯ ಹಾಗೂ ಕಿರಿಯ ಸಮುದಾಯವು ಬತ್ತದ ಕೃಷಿಯ ಸಂಪ್ರದಾಯ ನಟ್ಟಿಯ ಕ್ರಮಗಳನ್ನು ಗದ್ದೆಗೆ ಇಳಿಯುವ ಮೂಲಕ ಅರಿತುಕೊಳ್ಳಬೇಕು. ಕೃಷಿ ಕ್ಷೇತ್ರದ ಕಾಯಕ ಜೀವಿಗಳಿಗೆ ನೈತಿಕ ಬೆಂಬಲವನ್ನು ನೀಡಬೇಕು ಎಂದು ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್ ನುಡಿದರು.
ಅವರು ಸುರತ್ಕಲ್ ರೋಟರಿ ಕ್ಲಬ್‌ನ ಕಾರ್ಯದರ್ಶಿ ರಾಮ್ ಮೋಹನ್ ವೈ ಅವರ ಕಿನ್ನಿಗೋಳಿ ಗುತ್ತಕಾಡಿನ ಗದ್ದೆಯಲ್ಲಿ 'ಬನ್ನಿ ನೆೇಜಿ ನೆಡೋಣ ಕೃಷಿ ಭೂಮಿಗೆ ಬನ್ನಿರಿ' ಕಾರ್ಯಕ್ರಮದಲ್ಲಿ ನೇಜಿ ನೆಡುವ ಮೂಲಕ ಚಾಲನೆ ಮಾತನಾಡಿದರು.
ರಾಮ್ ಮೋಹನ್ ಮಾತನಾಡಿ, ವ್ಯಾವಹಾರಿಕ ಲಾಭ ಇಲ್ಲದೆ ಮಾನಸಿಕ ತ್ರಪ್ತಿಗಾಗಿ ಬತ್ತದ ಬೆಳೆ ಬೆಳೆಯಲಾಗುತ್ತಿದೆ ಎಂದರು. ನೇಜಿ ನೆಡುವ ವಿವಿಧ ಹಂತಗಳನ್ನು ಹಿರಿಯ ಮಹಿಳಾ ಕಾಯಕ ಜೀವಿಗಳು ವಿವರಿಸಿದರು.
ಕ್ಲಬ್‌ನ ವೃತ್ತಿ ಸೇವೆಯ ನಿರ್ದೇಶಕಿ ಯಶೋಮತಿ ಎಡೆಬಿಡದೆ ಸುರಿಯುವ ಮಳೆಯಲ್ಲಿಯೂ ಮಹಿಳೆಯರು ದುಡಿಯುವ ಸಾಹಸವನ್ನು ಕೊಂಡಾಡಿ ಕೃಷಿ ಸಂಬಂಧಿ ಓಬೇಲೆ ಹಾಡುಗಳನ್ನು ಉಳಿಸಿ ಕೊಳ್ಳುವ ಕಾರ್ಯ ನಡೆಯಬೇಕು ಎಂದರು.
ಕ್ಲಬ್ ಸೇವಾ ನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ಬತ್ತದ ಕೃಷಿ ಬೆಳವಣಿಗೆಗಳನ್ನು ವಿವಿಧ ಸ್ತರಗಳಲ್ಲಿ ಪರಿಚಯ ಮಾಡಿಕೊಡಬೇಕು ಎಂದರು. ಗದ್ದೆಯ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲರಿಗೂ ವಂದಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ