ಮಂಗಳೂರು: "ಮಳೆಗಾಲದಲ್ಲಿ ಸಾಮಾನ್ಯವಾಗಿ ಸಾಂಕ್ರಾಮಿಕ ರೋಗಗಳು ಹರಡುವುದು ಸಹಜ. ಪ್ರಕೃತಿ ಧರ್ಮಕ್ಕನುಗುಣವಾಗಿ ನಾವೂ ನಮ್ಮ ಶರೀರವನ್ನು ಅದಕ್ಕೆ ಒಗ್ಗಿಸಿಕೊಂಡು ನಿರೋಗಿಗಳಾಗಬೇಕು. ಈಗ ವೈರಸ್ ಮತ್ತು ಬ್ಯಾಕ್ಟೀರಿಯಾ ಸಂಬಂಧಿತ ಕಾಯಿಲೆಗಳು ಬಹಳ ಬೇಗ ಕಾಡುತ್ತವೆ ಮತ್ತು ಸಾಂಕ್ರಾಮಿಕವೂ ಆಗಿರುತ್ತದೆ. ಸೂಕ್ತ ತಪಾಸಣೆ ಮತ್ತು ವೈದ್ಯಕೀಯ ಚಿಕಿತ್ಸೆಗಳಿಂದ ಗುಣಪಡಿಸಬಹುದು. ಆದರೆ ಇವೆಲ್ಲಕ್ಕೂ ನಮ್ಮ ದೇಹವನ್ನು ಸಿದ್ಧಪಡಿಸಿಕೊಳ್ಳಲು ಒಂದಷ್ಟು ಲಘು ವ್ಯಾಯಾಮ, ಪ್ರಾಣಾಯಾಮಗಳೂ ಸಹಕರಿಸುತ್ತವೆ. ಡೆಂಗ್ಯೂ, ಮಲೇರಿಯಾದಂತಹ ರೋಗಗಳು ರಕ್ತ ಹೀನತೆಯಿಂದ ಬಳಲಿಸಿ ಬಹುದು. ಅದು ಬರದಂತೆ, ನೀರು ಒಂದೇ ಕಡೆ ನಿಂತು ರೋಗಾಣು ಉತ್ಪತ್ತಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು" ಎಂದು ನಗರದ ಖ್ಯಾತ ವೈದ್ಯರಾದ ಡಾ. ಜೆ.ಎನ್.ಭಟ್ಟರವರು ತಿಳಿಸಿದರು.
ಅವರು ಕೋಡಿಕಲ್‌ನ ವಿಪ್ರವೇದಿಕೆ (ರಿ) ಯ ದಶಮಾನೋತ್ಸವ ಸಮಾರಂಭದ ದ್ವಿತೀಯ ಕಾರ್ಯಕ್ರಮದಲ್ಲಿ ಮಳೆಗಾಲದಲ್ಲಿ ಕಾಡಬಹುದಾದ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿ ಅದಿತಿ ಹೆಚ್.ರಾವ್ ರನ್ನು ಪ್ರತಿಭಾ ಪುರಸ್ಕಾರದೊಂದಿಗೆ ಅಧ್ಯಕ್ಷ ವರ್ಕಾಡಿ ರವಿ ಅಲೆವೂರಾಯ ಗೌರವಿಸಿದರು. ಶ್ರೀಮತಿ ಉಷಾ ಮತ್ತು ಶ್ರೀಮತಿ ವಿನೋದಾ ಶಾಸ್ತಿ ತಂಡ ಪ್ರಾರ್ಥನೆ ನಡೆಸಿಕೊಟ್ಟರು. ಟ್ರಸ್ಟಿ ವಿದ್ಯಾ ಗಣೇಶ್ ರಾವ್ ಅತಿಥಿಗಳ ಪರಿಚಯ ಸ್ವಾಗತ ನಡೆಸಿಕೊಟ್ಟರು.
ಗೌರವಾಧ್ಯಕ್ಷ ಜಯರಾಮ ಪದಕಣ್ಣಾಯ, ಉಪಾಧ್ಯಕ್ಷ ವಿಶ್ವೇಶ್ವರ ಭಟ್ ತೆಕ್ಕೆಕೆರೆ, ಪ್ರಭಾ ಮಡಿ, ಗಿರೀಶ್ ರಾವ್, ಬಾಗ್ಲೋಡಿ ಅನೂಪ್ ರಾವ್, ಹರಿಪ್ರಸಾದ್ ರಾವ್, ಅಪರ್ಣಾ ಮತ್ತು ಅನಂತಪದ್ಮನಾಭ ಉಪಾಧ್ಯಾಯ ದಂಪತಿ ಉಪಸ್ಥಿತರಿದ್ದರು. ಕಾರ್ಯದರ್ಶಿ ದುರ್ಗಾದಾಸ್ ಕಟೀಲ್ ನಿರೂಪಿಸಿ, ಕೋಶಾಧಿಕಾರಿ ಕಿಶೋರ್ ಕೃಷ್ಣ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ