ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಮತ್ತು ಕರ್ನಾಟಕ ರಾಜ್ಯ ಬರಹಗಾರರ ಸಂಘದ ಚಿಕ್ಕಮಗಳೂರು ಜಿಲ್ಲಾ ಘಟಕದ ಸಹಯೋಗದಲ್ಲಿ ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ರಾಜ್ಯಮಟ್ಟದ ಗಾಯನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಜುಲೈ 27ರ ಭಾನುವಾರ ಬೆಳಿಗ್ಗೆ 10:00 ಗಂಟೆಗೆ ಏರ್ಪಡಿಸಲಾಗಿದೆ.
ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ರಾಜ್ಯ ಸಂಘವು ಪ್ರತಿ ಭಾನುವಾರ ಆನ್ಲೈನ್ ನಲ್ಲಿ ಚಿತ್ರಗೀತೆ ಒಳಗೊಂಡು ಜಾನಪದ ಗೀತೆ, ಭಾವಗೀತೆ ಸ್ಪರ್ಧೆಗಳನ್ನು ಏರ್ಪಡಿಸಿಕೊಂಡು ಬಂದು ಭಾಗವಹಿಸಿದ ಎಲ್ಲಾ ಗಾಯಕ ಗಾಯಕಿಯರಿಗೆ ಪ್ರಶಸ್ತಿ ಪತ್ರ ವಿತರಿಸಿ ಪ್ರೋತ್ಸಾಹಿಸಿಕೊಂಡು ಬಂದಿದೆ. ಹೀಗೆ ಭಾಗವಹಿಸಿದ ಗಾಯಕ ಗಾಯಕಿಯರಲ್ಲಿ 34 ಮಂದಿ ಗಾಯಕ ಗಾಯಕಿಯರನ್ನು ಆಯ್ಕೆ ಮಾಡಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲಾಗುತ್ತಿದೆ.
ಚಿಕ್ಕಮಗಳೂರು ಜಿಲ್ಲಾ ಬರಹಗಾರರ ಸಂಘದ ಅಧ್ಯಕ್ಷರು ಡಾ. ವಿದ್ಯಾ ಕೆ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯ ಅಧ್ಯಕ್ಷ ಮಧುನಾಯಕ್ ಲಂಬಾಣಿ ಉದ್ಘಾಟಿಸುವರು. ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಆಶಯ ನುಡಿ ನುಡಿಯುವರು. ಕರ್ನಾಟಕ ರಾಜ್ಯ ಬರಗಾರರ ಸಂಘದ ಗೌರವಾಧ್ಯಕ್ಷರು ಹಾಗೂ ಸಾಹಿತಿಗಳು ಗೊರೂರು ಅನಂತರಾಜು, ಹಾಸನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಸಫಾಯಿ ಕರ್ಮಚಾರಿ ನಿಗಮ ಮಂಡಳಿಯ ಮಾಜಿ ರಾಜ್ಯಾಧ್ಯಕ್ಷ ಕುರುವಂಜಿ ಕೆ.ಪಿ. ವೆಂಕಟೇಶ್, ಚಿಕ್ಕಮಗಳೂರಿನ ಗುತ್ತಿಗೆದಾರ ಬಿ. ಎಲ್. ಪ್ರವೀಣ್ ಬೆಟ್ಟಗೇರಿ, ಮೆಸ್ಕಾಂ ಉಗ್ರಾಣ ಪಾಲಕ ಜಯಣ್ಣ, ಗೌರವಾಧ್ಯಕ್ಷ ಎಂ. ಎಸ್ ನಾಗರಾಜ್, ಉಪಾಧ್ಯಕ್ಷ ಎಚ್.ಎಂ ಜಗದೀಶ್, ಜಿಲ್ಲಾ ಕೋಶಾಧ್ಯಕ್ಷ ಹಸ್ಯೆನಾರ್ ಬೆಳಗೊಳ, ನಿರ್ದೇಶಕ ರಾಕೇಶ್ ಸಿಂಗ್, ಡಾ. ಶೈಲಜಾಕುಮಾರ್, ಭರತನಾಟ್ಯ ಶಿಕ್ಷಕರು ಹಾಸನ, ವಿನೋದ್, ಗೌರವ ಸಲಹೆಗಾರರು, ಇಂಪಾ ನಾಗರಾಜ್ ಗೌರವ ಕಾಯ೯ದರ್ಶಿ, ನವೀನ್ (ಗೌರವ ಸಲಹೆಗಾರರು), ಬಿ.ಆರ್. ವಿಜಯ್ ಕುಮಾರ್ಮ ಸಿ.ಆರ್. ಗೌರವ (ಕಾರ್ಯದರ್ಶಿ), ರವಿ ಕುನ್ನಳ್ಳಿ ಗೌರವ ಸಲಹೆಗಾರರು ಭಾಗವಹಿಸುವರು.
ಸಾಧಕರಿಗೆ ಸನ್ಮಾನವನ್ನು ಮಧುಚಂದ್ರ, ಮಜಾ ಭಾರತ ಕಲಾವಿದರು ಹಾಗೂ ರಮೇಶ ಯಾದವ್ ಕಾಮಿಡಿ ಕಿಲಾಡಿಗಳು ಕಲಾವಿದರು ರಾಜ್ಯ ಮಟ್ಟದ ಕನ್ನಡ ಕೋಗಿಲೆ ಪ್ರಶಸ್ತಿ ವಿತರಿಸುವರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ