ಉಡುಪಿ: ಶ್ರೀಪುತ್ತಿಗೆ ಶ್ರೀ ಕೃಷ್ಣ ಮಠ, ಇವರ ಆಶ್ರಯದಲ್ಲಿ ಉಡುಪಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕೇಂದ್ರ ಸಮಿತಿ, ಧರ್ಮಸ್ಥಳ ಇವರ ಸಹಯೋಗದಲ್ಲಿ ಗುರುಪೂರ್ಣಿಮಾ ಪ್ರಯುಕ್ತ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿವರ್ಯರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರಿಗೆ ಗುರುವಂದನೆ ಕಾರ್ಯಕ್ರಮವು ನಡೆಯಿತು.
ಇದರ ಪ್ರಯುಕ್ತ ವೇದಿಕೆಯಲ್ಲಿ ವಿಶೇಷ ಆಸೀನ ರಚಿಸಿ ಅದರ ಮೇಲೆ ಶ್ರೀಪಾದ್ವಯರನ್ನು ಕುಳ್ಳಿರಿಸಿ ಪೇಟ ತೊಡಿಸಿ, ಪುಷ್ಪಾರ್ಚನೆ ಸಹಿತವಾಗಿ ವಂದಿಸಲಾಯಿತು. ಈ ಸಂದರ್ಭದಲ್ಲಿ ವಿದುಷಿ ಪರಿಮಳ ಅವರಿಂದ ಭಜನಾ ಕಮ್ಮಟ, ಹಾಗೂ ವಿದುಷಿ ಉಷಾ ಹೆಬ್ಬಾರ್ ಅವರ ನೇತೃತ್ವದಲ್ಲಿ ಭಜನಾನೃತ ಕಾರ್ಯಕ್ರಮ ಮತ್ತು ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು ನಂತರ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ