ಕಟಪಾಡಿ: ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ಕಾಲಭೈರವ ದೇವಸ್ಥಾನ ದ್ವಾರಕಾಮಯಿ ಮಠ ಶಂಕರಪುರ ಇದರ ವತಿಯಿಂದ ಏಪ್ರಿಲ್ ತಿಂಗಳಲ್ಲಿ ನಡೆಯುವ 18 ಅಡಿ ಎತ್ತರದ ಶ್ರೀ ಮುಖ್ಯಪ್ರಾಣ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಮೂರ್ತಿಯ ಮಾದರಿ ಬಿಡುಗಡೆ ಸಮಾರಂಭ ಕ್ಷೇತ್ರದಲ್ಲಿ ಜುಲೈ 8ರಂದು ನಡೆಯಿತು.
ಶಿಲಾಮೂರ್ತಿಯ ಮಾದರಿಯನ್ನು ಬಿಡುಗಡೆ ಮಾಡಿದ ಗುರೂಜಿಯವರ ಪರಮ ಗುರುಗಳಾದ ಪ್ರವೀಣ್ ರಾಜ್ ಮಚೇಂದ್ರನಾಥ ಬಾಬಾ ಆಶೀರ್ವಾದ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರದ ಶ್ರೀ ಸಾಯಿ ಈಶ್ವರ್ ಗುರೂಜಿ ಏಪ್ರಿಲ್ 2 ರಂದು ಹನುಮಾನ್ ಜಯಂತಿಯ ಪರ್ವಕಾಲದಲ್ಲಿ 18 ಅಡಿ ಎತ್ತರದ ಶ್ರೀ ಮುಖ್ಯಪ್ರಾಣ ದೇವರ ಏಕಶಿಲಾ ಮೂರ್ತಿ ಪ್ರತಿಷ್ಠಾಪನೆಗೊಳಲಿದೆ, ಇದರ ಪೂರ್ವಭಾವಿಯಾಗಿ ಈ ಶಿಲಾಮೂರ್ತಿ ಮಾದರಿಯನ್ನು ಅಂಜನಾದ್ರಿಯಲ್ಲಿ ಪೂಜಿಸಿ ಹನುಮಜ್ಯೋತಿ ಮೂಲಕ ಕ್ಷೇತ್ರಕ್ಕೆ ತರಲಾಗುವುದು ಈ ಎಲ್ಲಾ ಕಾರ್ಯಕ್ರಮಗಳಿಗೆ ಕ್ಷೇತ್ರದ ಭಕ್ತರು ಸಹಕರಿಸುವಂತೆ ತಿಳಿಸಿದರು.
ಅಲ್ಲದೆ ಗುರುವಾರ ಜುಲೈ 10ರಂದು ಸಾಯಿ ದರ್ಬಾರ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಈ ಸಮಾರಂಭದಲ್ಲಿ ಈಶ್ವರ ಅನುಗ್ರಹ ಪ್ರಶಸ್ತಿ ನೀಡಿ ಸಾಧಕರನ್ನು ಗೌರವಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರದ ಟ್ರಸ್ಟಿ ಗೀತಾಂಜಲಿ ಸುವರ್ಣ ವೀಣಾ ಶೆಟ್ಟಿ, ಪ್ರತಿಷ್ಠಾಪನಾ ಸಮಿತಿಯ ಪದಾಧಿಕಾರಿಗಳಾದ ಅಭಿರಾಜ್ ಸುವರ್ಣ, ರಾಜೇಶ್ ಇನ್ನಂಜೆ, ರಾಮಪ್ಪ ಪೂಜಾರಿ, ಸಂತೆಕಟ್ಟೆ, ಕಿರಣ್ ಜೋಗಿ, ಜಯರಾಮ ಶೆಟ್ಟಿಗಾರ್, ವಿನೋದ್ ಕುಮಾರ್, ಸುರೇಶ್ ಪೂಜಾರಿ, ರಾಘವೇಂದ್ರ ಅಮೀನ್, ಶ್ರೀಧರ ಅಮೀನ್, ವಿಜಯ ಕುಂದರ್, ಸತೀಶ ದೇವಾಡಿಗ, ಅಖಿಲೇಶ್, ದಿನೇಶ ಶೆಟ್ಟಿ ಮತ್ತು ಕ್ಷೇತ್ರದ ಭಕ್ತರು ಮುಂತಾದವರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಶಿಲ್ಪಿ ಗಣೇಶ್ ಮತ್ತು ಶಿಲಾಮೂರ್ತಿಯ ಮಾದರಿಯನ್ನು ತಯಾರಿಸಿದ ಕೇಶವ ಆಚಾರ್ಯ ರವರನ್ನು ಗೌರವಿಸಲಾಯಿತು.
ರಾಘವೇಂದ್ರ ಕರ್ವಾಲು ನಿರೂಪಿಸಿ, ಗೀತಾಂಜಲಿ ಸುವರ್ಣ ವಂದಿಸಿದರು. ಅಖಂಡ ಶ್ರೀ ಸಾಯಿ ಸಚರಿತ್ರೆ ಪಾರಾಯಣ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ