ಗೋವಿನ ಮೇಲೆ ಚಿತ್ರಹಿಂಸೆಯ ಸರಣಿ ಪ್ರಕರಣಗಳು; ಕೆಎಂಎಫ್ ಮೌನ ಖಂಡನೀಯ

Chandrashekhara Kulamarva
0


ಮೃತ ಸದೃಶವಾದ ಹಾಲು ನೀಡಿ ಕೋಟ್ಯಂತರ ಜನರ ಬದುಕಿಗೆ ಆಸರೆಯಾಗಿರುವ ಗೋವುಗಳ ಕೆಚ್ಚಲನ್ನೇ ಕೊಯ್ದು ಗೋವಿಗೆ ಚಿತ್ರಹಿಂಸೆ ಹಾಗೂ ಗೋವಿನ ಬಗ್ಗೆ ಪವಿತ್ರ ಭಾವನೆ ಹೊಂದಿರುವ ಜನಸಮುದಾಯಕ್ಕೆ ಇನ್ನಿಲ್ಲದ ಮಾನಸಿಕ ಹಿಂಸೆ ನೀಡುತ್ತಿರುವ ಕಂಡು ಕೇಳರಿಯದ ವಿದ್ಯಮಾನಗಳು ರಾಜ್ಯದಲ್ಲಿ ನಡೆಯುತ್ತಿದೆ. ಆದರೆ ಗೋವಿನ ಹಾಲೇ ತಮ್ಮ‌ ಅಸ್ತಿತ್ವದ ಜೀವಾಳವಾಗಿರುವ ಕೆಎಂಎಫ್‌ಗಳು ಈ ವಿಚಾರದಲ್ಲಿ ಜಾಣ ಮೌನ ವಹಿಸಿರುವುದು ಅತ್ಯಂತ ಖಂಡನೀಯ. 


ಗೋವಿನ ಹಾಲು ಮಾತ್ರ ಬೇಕು ಗೋವಿನ ಆಕ್ರಂದನಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬ ಧೋರಣೆ ಸರಿಯಲ್ಲ. ಗೋವುಗಳಿಗೆ ಈ ರೀತಿಯ ಮಾರಣಾಂತಿಕ ಚಿತ್ರ ಹಿಂಸೆ ಕೊಟ್ಟು ಗೋವನ್ನು ಸಲಹಿಕೊಂಡು ಹಾಲು ಮಾರಿ ಜೀವನ ಸಾಗಿಸುತ್ತಿರುವ ಮಂದಿಯ ನೈತಿಕ ಸ್ಥೈರ್ಯಕ್ಕೆ ಸವಾಲೆಸೆಯುವ ಇಂತಹ ದುಷ್ಕೃತ್ಯಗಳ ವಿರುದ್ಧ ಕೆಎಂಎಫ್ ಮೊದಲಾಗಿ ನಿಂತು ಧ್ವನಿ ಎತ್ತಬೇಕು.‌ ಹಸುಗಳು ಮತ್ತು ಹೈನುಗಾರರಿಲ್ಲದೆ ಕೆಎಂಎಫ್‌ ಅಸ್ತಿತ್ವವೇ ಸಾಧ್ಯವಿಲ್ಲ. ಹಾಗಿರುವಾಗ ಗೋವುಗಳ, ಗೋಪಾಲಕರ ನೋವಿನ ವಿಚಾರದಲ್ಲಿ ಶೂನ್ಯಸ್ಪಂದನದ ಕೆಎಂಎಫ್ ಧೋರಣೆ ಅಕ್ಷಮ್ಯ.‌


- ಜಿ. ವಾಸುದೇವ ಭಟ್ ಪೆರಂಪಳ್ಳಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top