ವಿಡಂಬನ ಕವನ: ನಾಟಕ ಕರ್ನಾಟಕ

Upayuktha
0



ದೃಶ್ಯ 1 


ಐದು ವರ್ಷವೂ ನಾನೇ,

ಮತ್ತೈದು ನಾನೇ !

ತೆರವಾದರೇ ತಾನೇ ಬೇರೊಬ್ಬ ಪ್ರಶ್ನೆ?

'ಟಗರು' ಮೈಯುಜ್ಜಲಿಕೆ 

ಮಾತ್ರ

ಬೇಕೊಂದು    

'ಬಂಡೆ'

ಜಜ್ಜಿಕೊಳ ಲಿಕ್ಕಲ್ಲ

ಅದರ ಮಂಡೆ !


ದೃಶ್ಯ 2 


ಏನೇ ಮಾಡಲಿ ಬಿಡಲಿ

'ಐ' ಕಮಾಂಡ್

ದೆಹಲಿ...

ಆಗಾಗ

ಕೇಳುವುದೇ ನಮ್ಮ ಚಾಳಿ.

ನಮ್ಮನಮ್ಮೊಳಗಿಲ್ಲ ಬಿರುಕು ಬಂಡಾಯ

ಕಟ್ಟಲಿಲ್ಲವೇ ಸೇರಿ

ದಳ ಇನ್.ಡಿ. ಯ.


ದೃಶ್ಯ 3 


ಕುಟುಂಬ ಒಂದನೇ ನಂಬಿ

ಕುಂಟುತಿದೆ ಪಕ್ಷ.

ತಿಂದು ತೇಗಿದರೆಲ್ಲ

ಲಕ್ಷ ಲಕ್ಷ !

ಬಿಡುವುದುಂಟೇ 

'ಯತ್ನ- ಆಳ' ತಲುಪದಲೇ?

ಕಾಣಿಸದೇ ಅಳಿಯನ

ಕುರುಡು ಬೆಳಗಾದರೆ !


ದೃಶ್ಯ 4 


ತಾನೇ ಬಿದ್ದರೂ ಅಷ್ಟೇ,

ತಾಗಿ ಒಡೆದರೂ ಅಷ್ಟೇ,

'ಜೇಡಿ' ಮಣ್ಣಿನ ಮಡಕೆ

ಆದರೂ

ಕುತ್ತಿಲ್ಲ ಜೀವಕೆ.!

ಸದಾ ಆಳುವ  ಹೆಬ್ಬಯಕೆ.

ಸುಟ್ಟ ಬೂದಿಯಲೇ ಎದ್ದು ಬರುವ

ಫೀನಿಕ್ಸ್ ಹಕ್ಕಿ ರೆಕ್ಕೆ..!


- ಡಾ. ಹೆಚ್. ಎಸ್ ಸುರೇಶ್ 

9448027400


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Tags

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top