ಮಳೆಗಾಲದಲ್ಲಿ ಕಳ್ಳರ ಹಾಗೂ ದರೋಡೆಕಾರರ ಹಾವಳಿ ಹೆಚ್ಚಾಗುವುದರಿಂದ ಕೈಗೊಳ್ಳಬೇಕಾದ ಕೆಲವು ಸುರಕ್ಷಾ ಸಲಹೆಗಳು
* ಮನೆಯ ಎದುರು ಬಾಗಿಲಿಗೆ ಸೆಂಟರ್ ಲಾಕ್ ಹಾಕಿ ಭದ್ರ ಪಡಿಸಿಕೊಳ್ಳುವುದು.
* ಮನೆಯ ಮುಂಭಾಗ ಹಾಗೂ ಹಿಂಬದಿ ಬಾಗಿಲಿಗೆ ಒಳಗಡೆಯಿಂದ ಕಬ್ಬಿಣದ ಅಡ್ಡ ಪಟ್ಟಿಯನ್ನು ಅಳವಡಿಸುವುದು.
*ಮನೆಯಿಂದ ಕಾರ್ಯಕ್ರಮ, ಜಾತ್ರೆ,ಗಳಿಗೆ ಹೋಗುವಾಗ ಮನೆಯಲ್ಲಿ ಕನಿಷ್ಟ ಪಕ್ಷ ಒಬ್ಬರಾದರೂ ಮನೆಯಲ್ಲಿ ಉಳಿದುಕೊಳ್ಳುವುದು.
*ಗುಜರಿ ಹೆಕ್ಕುವವರು,ಹಾಸಿಗೆ ಮಾರಾಟ, ಬೆಡ್ ಸಿಟ್ ಮಾರಾಟ,ಸ್ಟವ್ ರಿಪೇರಿ ಬಂದಲ್ಲಿ ಅವರ ಆದಾರ್ ಕಾರ್ಡ್ ನ ಪೋಟೋ ಹಾಗೂ ಅವರ ಪೋಟೊ ಮೊಬೈಲ್ ನಲ್ಲಿ ತೆಗೆದಿಡುವುದು.
* ಗ್ಯಾಸ್ ಸಿಲಿಂಡರ್ ಬದಲಿಸುವ ಸಮಯ ಗ್ಯಾಸ್ ಸಿಲಿಂಡರ್ ಗಳನ್ನು ರಸ್ತೆ ಬದಿಯಲ್ಲಿ ಇಟ್ಟು ಹೋಗಬಾರದು.
* ಹಗಲು/ರಾತ್ರಿ ಹೊತ್ತಿನಲ್ಲಿ ಸಂಶಯಾಸ್ಪದವಾಗಿ ಯಾವುದೇ ವಾಹನ ರಸ್ರೆಯಲ್ಲಿ ನಿಂತಿದ್ದರೆ ನೋಂದಣಿ ನಂಬ್ರ ಬರುವಂತೆ ಪೊಟೋ ತೆಗೆದಿಟ್ಟುಕೊಳ್ಳುವುದು.
* ರಸ್ತೆಗೆ ಕಾಣುವಂತೆ ಬಾಗಿಲಿಗೆ, ಗೇಟಿಗೆ ಬೀಗ ಹಾಕಬಾರದು.
* ಮನೆಯಲ್ಲಿ ಒಂಟಿಯಾಗಿರುವಾಗ ಮುಂಬಾಗಿಲು ಹಾಕಿಕೊಂಡು ಕೆಲಸ ಮಾಡುವುದು.
* ಮುಂಬಾಗಿಲು ಮತ್ತು ಹಿಂಬಾಗಿಲಿಗೆ ಸಮಾನ ಪ್ರಾಮುಖ್ಯತೆ ನೀಡುವುದು.
* ಮನೆಯ ಬಾಗಿಲು ತಟ್ಟಿದಾಗ, ಬೆಲ್ ಮಾಡಿದಾಗ ತಕ್ಷಣ ಬಾಗಿಲು ತೆರೆಯದೆ ಕಿಟಕಿಯಿಂದ ನೋಡಿ ಖಚಿತಪಡಿಸಿಕೊಂಡು ವ್ಯವಹರಿಸುವುದು.
* ಅಪರಿಚಿತರು ಮನೆ ಬಳಿ ಬಂದು ನೀರು ವಿಳಾಸ ಇತ್ಯಾದಿ ಕೇಳಲು ಬಂದಾಗ ಅವರಲ್ಲಿ ಜಾಗೃತೆಯಿಂದ ವ್ಯವಹರಿಸುವುದು.
* ನೆರೆಹೊರೆಯವರೊಂದಿಗೆ ಸಂಬಾಷಣೆಯಲ್ಲಿ ತೊಡಗಲು ಅಥವಾ ಸಮಯ ಕಳೆಯಲು ತೆರಳುವಾಗ ಮನೆಗೆ ಮತ್ತು ಗೇಟಿಗೆ ಬೀಗ ಹಾಕುವುದನ್ನು ಮರೆಯಬೇಡಿ.
* ಮನೆಗಳಲ್ಲಿ ಅಪ್ರಾಪ್ತ ವಯಸ್ಸಿನವರನ್ನು, ವಯೋವೃದ್ದರನ್ನು ಬಿಟ್ಟು ಹೋಗುವುದನ್ನು ತಪ್ಪಿಸಿ.
* .ಅಂಚೆ ಕೊರಿಯರ್ ಪಾರ್ಸೆಲ್ ಉಡುಗೊರೆಗಳನ್ನು ಪಡೆದು ಕೊಳ್ಳುವಾಗ ಖಚಿತಪಡಿಸಿಕೊಂಡು ವ್ಯವಹರಿಸಿಕೊಳ್ಳುವುದು.
* ಕಿಟಕಿಯ ಪಕ್ಕ ಬೆಲೆ ಬಾಳುವ ವಸ್ತುಗಳು ಮೊಬೈಲ್ ಫೋನ್ ಇಡುವುದು ತಪ್ಪಿಸಿ.
* ಬೆಲೆ ಬಾಳುವ ವಸ್ತುಗಳನ್ನು ಆದಷ್ಟು ಬ್ಯಾಂಕ್ ಲಾಕರ್ ಗಳಲ್ಲಿ ಇಡುವುದು ಉತ್ತಮ.
* ಮನೆ ಬಾಗಿಲುಗಳಿಗೆ ಮ್ಯಾಜಿಕ್ ಅಲಾರ್ಮ್ ಸಿಸ್ಟಮ್ ಗಳಂತಹ ಸುರಕ್ಷಾ ಸಾಮಗ್ರಿಗಳ ಬಗ್ಗೆ ಒತ್ತು ಕೊಡಿ.
* ನೀವು ಮನೆಯಲ್ಲಿ ಮಲಗುವ ಸಮಯದಲ್ಲಿ ಬಾಗಿಲು, ಕಿಟಕಿ ಬೀಗ ಹಾಕಿ ಭದ್ರಪಡಿಸಿರುವುದನ್ನು ಪುನ; ಖಚಿತ ಪಡಿಸಿಕೊಳ್ಳುವುದು.
* ಮನೆಗೆ ಬೀಗ ಹಾಕಿ ಪರ ಊರಿಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಅಕ್ಕ ಪಕ್ಕದವರಿಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು.
* ಹೊಸದಾಗಿ ಬಾಡಿಗೆ ಬರುವ ವ್ಯಕ್ತಿಗಳ ಬಗ್ಗೆ ಮನೆ ಕೆಲಸದವರ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಭಾವ ಚಿತ್ರವನ್ನು ಅದಾರ್ ಕಾರ್ಡ್ ,ಅವರ ರಕ್ತ ಸಂಬಂದಿಗಳ ಮೊಬೈಲ್ ನಂ ಪಡೆಯಲು ಮರೆಯಬೇಡಿ.
* ಅನುಮಾನಾಸ್ಪದ ವ್ಯಕ್ತಿ ವಸ್ತು ವಾಹನಗಳ ಬಗ್ಗೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.
* ಚಿನ್ನದ ಒಡವೆಗಳನ್ನು ಪಾಲೀಶ್ ಮಾಡುತ್ತೆನೆಂದು ಚಿನ್ನದ ಒಡವೆ ಮಾರಾಟ ಮಾಡಲು ಮನೆಯ ಬಳಿ ಬರುವವರ ಬಗ್ಗೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ.
* ಜನರಿಲ್ಲದ ಪ್ರದೇಶದಲ್ಲಿ ಒಂಟಿಯಾಗಿ ಹೆಂಗಸರು ಓಡಾಡುವುದನ್ನು ಆದಷ್ಟು ತಪ್ಪಿಸುವುದು.
* ಒಂಟಿಯಾಗಿ ಓಡಾಡುವಾಗ ಅಪರಿಚಿತ ವ್ಯಕ್ತಿಗಳು ನಿಮ್ಮ ಬಳಿ ಬಂದು ವಿಳಾಸ ಕೇಳುವುದು,ಮಾತನಾಡಿಸುವುದು ಪ್ರಯತ್ನ ಮಾಡಿದಾಗ ಎಚ್ಚರದಿಂದ ವ್ಯವಹರಿಸುವುದು.
* ಬ್ಯಾಂಕ್ ಅಂಗಡಿ ಪೊಸ್ಟ್ ಆಫಿಸ್ ಬಳಿ ಅಪರಿಚಿತರು ನಿಮ್ಮ ಹಣ ಕೆಳಗೆ ಬಿದ್ದಿದೆ ಎಂದು ತಿಳಿಸಿದಾಗ ಮೊದಲು ನಿಮ್ಮ ಬಳಿಯಿರುವ ಹಣ ಸುಭದ್ರವಾಗಿದೇಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
* ಮೋಹಕ್ಕೆ ಬಲಿಯಾಗಿ ಸುಲಿಗೆಗೆ ಒಳಗಾಗಬೇಡಿ, ಒಂಟಿಯಾಗಿ ಓಡಾಡಿವಾಗ ಅಪರಿಚಿತ ವ್ಯಕ್ತಿಗಳು ನಿಮ್ಮ ಬಳಿ ನಿಧಾನವಾಗಿ ದ್ವಿಚಕ್ರದ ವಾಹನ ಚಾಲನೆ ಮಾಡಿಕೊಂಡು ಬಂದಾಗ ಅವರ ಕೈ ಗೆಟುಕುವ ಅಂತರದಲ್ಲಿ ನಿಲ್ಲಬೇಡಿ.
* ಜನನಿಬಿಡ ಪ್ರದೇಶದಲ್ಲಿ ಪಾರ್ಕ್, ಕತ್ತಲೆಯಲ್ಲಿ ಕುಳಿತುಕೊಳ್ಳುವ ಹವ್ಯಾಸ ತಪ್ಪಿಸಿ.
* ಅಪರಿಚಿತರು ನಂಬಿಸುವ ಅತೀಂದ್ರಿಯ ಶಕ್ತಿಗಳು, ಮಹಾನ್ ಪುರುಷರೆಂದು ಹೇಳಿದಾಗ ನಿಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಂಡು ಅವರ ನಿಯಂತ್ರಣಕ್ಕೆ ಒಳಗಾಗಿ ಮೋಸ ಹೋಗಬೇಡಿ.
* ನಿಮ್ಮ ಬಳಿ ಅನುಮಾನಾಸ್ಪದ ವ್ಯಕ್ತಿ ಬಂದರೆ ತಕ್ಷಣ ಜೋರಾಗಿ ಕೂಗಿಕೊಂಡು ಅಕ್ಕಪಕ್ಕದವರನ್ನು ಸೇರಿಸಿ.
* ವಾಯು ವಿಹಾರಕ್ಕೆ ಹೋಗುವ ಸಂದರ್ಭದಲ್ಲಿ ಚಿನ್ನದ ಸರಗಳನ್ನು ಬಟ್ಟೆಯಿಂದ ಮರೆಮಾಡಿಕೊಳ್ಳಿ.
* ಅನಾವಶ್ಯವಾಗಿ ಅಧಿಕ ಆಭರಣಗಳನ್ನು ಧರಿಸಿ ಪ್ರದರ್ಶಿಸಬೇಡಿ ಕಳ್ಳರನ್ನು ಆಕರ್ಷಿಸಬೇಡಿ.
* ಆನ್‌ಲೈನ್ ವಂಚನೆ ಬಗ್ಗೆ ಎಚ್ಚರಿಕೆಯಿಂದ ಇರಿ.
* ಅಗತ್ಯ ಸಮಯದಲ್ಲಿ 112 ಗೆ ಕರೆ ಮಾಡಿ ನಿಮ್ಮ ಸಮಸ್ಯೆ ಯನ್ನು ತಿಳಿಸಿ.
-ಸತೀಶ್ ನಾಯ್ಕ್, ಹೆಗಡೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ