ಉಡುಪಿ: ರಾಗ ಧನ ಉಡುಪಿ ಸಂಸ್ಥೆಯ ಸರಣಿ ಸಂಗೀತ ಕಛೇರಿಗಳು ಜು.27ರಂದು (ಭಾನುವಾರ) ಅಪರಾಹ್ನ 3.00ರಿಂದ ಬ್ರಹ್ಮಾವರದ ಕುಂಜಾಲಿನ ಶ್ರೀರಾಮ ಮಂದಿರದಲ್ಲಿ ನಡೆಯಲಿದೆ. ಮೊದಲಿಗೆ ಕಾರ್ತಿಕ್ ಶ್ಯಾಮ್ ಮುಂಡೋಳುಮೂಲೆ ಅವರ ಹಾಡುಗಾರಿಕೆ ನಂತರ 4.45ರಿಂದ ವಿದುಷಿ ಶ್ರೀಮತಿ ಧನ್ಯಾದಿನೇಶ್ ರುದ್ರಪಟ್ಣಂ ಅವರ ಹಾಡುಗಾರಿಕೆಗೆ ನಡೆಯಲಿದೆ.
ಇಬ್ಬರಿಗೂ ಪಕ್ಕವಾದ್ಯ- ವಯೊಲಿನ್ ನಲ್ಲಿ ಜನಾರ್ದನ ಎಸ್. ಬೆಂಗಳೂರು ಹಾಗೂ ಮೃದಂಗದಲ್ಲಿ ಸುನಾದ ಕೃಷ್ಣ ಅಮೈ ಸಹಕರಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ