ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾಟ: ವಿವೇಕಾನಂದ PU ಕಾಲೇಜು ರಾಷ್ಟ್ರಮಟ್ಟಕ್ಕೆ ಆಯ್ಕೆ

Upayuktha
0

ಪುತ್ತೂರು: ಬೆಳಗಾವಿಯ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ  ನಡೆದ  ವಿದ್ಯಾಭಾರತಿ  ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟದ  ಫುಟ್ಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತದೆ. 


ತಂಡದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಅಗತ್ಯ ಡಿ., ಎನ್.ಆರ್.ವಿವೇಕ್ ಸುಬ್ಬಯ್ಯ, ಅಕ್ಷಣ್. ಎಚ್. ಎಮ್, ನಿಶಾಂತ್. ಕೆ , ಉಲ್ಲಾಸ್. ಡಿ.ಜಿ, ಮಾನಸ್. ಎಸ್.ಡಿ, ಎಚ್. ಎ ಚಿನ್ಮಯ್, ದರ್ಶನ್. ಎಚ್.ಕೆ, ಚಿರಾಗ್ ಹಾಗೂ ಪ್ರಥಮ ಪಿಯುಸಿಯ ಉಜ್ವಲ್ ಮನೋಜ್ ತಾರ, ನಿಹಾನ್ ಶೆಟ್ಟಿ ವಿ.ಆರ್, ಯೋಗೇಶ್. ಎನ್, ಪ್ರಣವ್. ವಿ.ವಿ , ಗಗನ್. ಸಿ.ಎನ್, ವಿ.ಜಿ ವಿಲಾಸ್  ಭಾಗವಹಿಸಿದರು. ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್ ವಿ. ಎಸ್., ಡಾ. ಜ್ಯೋತಿ ಕುಮಾರಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. 


ಇವರನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.





Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top