ವಿವೇಕಾನಂದ PU ಕಾಲೇಜಿನಲ್ಲಿ ಇಕೋ ಹಾಗೂ ಹೆಲ್ತ್ ಕ್ಲಬ್ ಉದ್ಘಾಟನೆ

Upayuktha
0



ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಇಕೋ ಹಾಗೂ ಹೆಲ್ತ್ ಕ್ಲಬ್ ನ ಉದ್ಘಾಟನೆಯು ನೆರವೇರಿತು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರಾದ ಡಾ. ಕೆ.ಎನ್ ಸುಬ್ರಹ್ಮಣ್ಯ ವಿನೂತನ ರೀತಿಯಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. 


ಬಳಿಕ ಮಾತನಾಡಿದ ಅವರು, “ಆಧುನಿಕ ಜಗತ್ತಿನಲ್ಲಿ ಪರಿಸರದ ಬಗೆಗಿನ ಕಾಳಜಿ ಅತೀ ಅಮೂಲ್ಯವಾದದ್ದು. ಪರಿಸರದಲ್ಲಿನ ಜೀವವೈವಿಧ್ಯತೆಯನ್ನು ಕಾಪಾಡದೇ ಇದ್ದಲ್ಲಿ ಪರಿಸರ ಅಸಮತೋಲನ ಹೊಂದಿ ಮನುಕುಲ ಸರ್ವನಾಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಪರಿಸರ ಸ್ವಚ್ಛವಾಗಿ ಇರಬೇಕಾದರೆ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಬೇಕು. 


ಯಾವುದೇ ಸರಕಾರ ಈ ಕಾರ್ಯ ಮಾಡುತ್ತದೆ ಎಂದು ನಿರೀಕ್ಷಿಸದೆ ವೈಯಕ್ತಿಕವಾಗಿ ಈ ಬಗ್ಗೆ ಆಸಕ್ತಿ ವಹಿಸಿ ಜವಾಬ್ದಾರಿ ನಿರ್ವಹಿಸುವ ಬದ್ಧತೆ ಬೆಳೆಸಿಕೊಂಡರೆ ಮುಂದಿನ ಪೀಳಿಗೆ ಸ್ವಚ್ಛ ಸಮಾಜವನ್ನು ಕಾಣುವುದಕ್ಕೆ ಸಾಧ್ಯ” ಎಂದು ನುಡಿದರು. 


ಕಾರ್ಯಕ್ರಮದಲ್ಲಿ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು,  ದ್ವಿತೀಯ ಪಿಯುಸಿ ಪಿಸಿಎಂಬಿ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿನಿ ಪ್ರಾರ್ಥಿಸಿ, ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಹಾಗೂ ಇಕೋ ಹಾಗೂ ಹೆಲ್ತ್‌ ಕ್ಲಬ್‌ ನ ಸಂಯೋಜಕರಾದ ಅನುಪಮಾ ಶೇಟ್ ಸ್ವಾಗತಿಸಿ, ವಂದಿಸಿದರು. ಉಪನ್ಯಾಸಕಿ ಸುಮಾ ಎ ಕಾರ್ಯಕ್ರಮವನ್ನು ನಿರೂಪಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top