ವಿವೇಕಾನಂದ PU ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗದ ಕಾರ್ಯಾಗಾರ

Chandrashekhara Kulamarva
0



ಪುತ್ತೂರು: ವಿವೇಕಾನಂದ ಪದವಿಪೂರ್ವ  ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ರಸಾಯನ ಶಾಸ್ತ್ರ ವಿಭಾಗದ ಕಾರ್ಯಗಾರ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ದೇವಿ ಚರಣ್ ರೈ. ಎಂ ಕಾರ್ಯಾಗಾರವನ್ನು ಉದ್ಘಾಟಿಸಿದರು.   ಡಾ. ರಾಜೇಶ್, ವಿಭಾಗ ಮುಖ್ಯಸ್ಥರು ರಸಾಯನ ಶಾಸ್ತ್ರ ವಿಭಾಗ, ಯೇನಪೋಯ ಪದವಿ ಪೂರ್ವ ಕಾಲೇಜು, ಮಂಗಳೂರು ಇವರು  ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಕಾರ್ಯಾಗಾರ  ನಡೆಸಿಕೊಟ್ಟರು.


ಕಾರ್ಯಾಗಾರದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜು, ನರೇಂದ್ರ ಪದವಿಪೂರ್ವ ಕಾಲೇಜು, ಹಾಗೂ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕರು  ಪಾಲ್ಗೊಂಡರು. ಉಪನ್ಯಾಸಕಿ ಡಾ.ಸ್ನೇಹ ಬಿ. ಎಸ್ ಪ್ರಾರ್ಥಿಸಿದರು. ಉಪನ್ಯಾಸಕಿ ಶೈಲಜಾ ಭಟ್ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.



Post a Comment

0 Comments
Post a Comment (0)
To Top