ಪುತ್ತೂರು: ದೇಶದ ಆರ್ಥಿಕತೆಗೆ ಹೆಚ್ಚಿನ ಆದಾಯವನ್ನು ಸಣ್ಣ ಕೈಗಾರಿಕೆಯು ನೀಡುತ್ತಿದ್ದು ಇದರ ಬೆಳವಣಿಗೆಯಲ್ಲಿ ಯುವಜನತೆಯ ಪಾತ್ರವು ಮುಖ್ಯವಾಗಿದೆ. ಈ ಸಣ್ಣ ಕೈಗಾರಿಕೆಯು ಹೆಚ್ಚು ಉದ್ಯೋಗಾವಕಾಶವನ್ನು ಸೃಷ್ಟಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಅರಿವು ಮೂಡಿಸುವುದರಲ್ಲಿ ಈ ರೀತಿಯ ಸಂಸ್ಥೆಗಳ ನಡುವಿನ ಒಪ್ಪಂದ ಬಹುಮುಖ್ಯ ಪಾತ್ರವಹಿಸುತ್ತದೆ. ಅಲ್ಲದೇ ಇದು ಗ್ರಾಮೀಣ ಮಟ್ಟದಲ್ಲಿ ಉದ್ಯಮವನ್ನು ಸ್ಥಾಪಿಸಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಲು ಲಘು ಉದ್ಯೋಗ ಭಾರತಿ ಹೆಚ್ಚು ಅವಕಾಶ ನೀಡುತ್ತಿದೆ ಎಂದು ಲಘು ಉದ್ಯೋಗ ಭಾರತಿ-ಕರ್ನಾಟಕ ಇದರ ಅಧ್ಯಕ್ಷ ನಾರಾಯಣ್ ಪ್ರಸನ್ನ.ಕೆ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ ಪುತ್ತೂರು, ಇಲ್ಲಿನ ಐಕ್ಯೂಎಸಿ ಘಟಕದ ವತಿಯಿಂದ ನಡೆದ ಲಘು ಉದ್ಯೋಗ ಭಾರತಿ-ಕರ್ನಾಟಕ ಇದರೊಂದಿಗೆ ಆಯೋಜಿಸಲಾದ ಒಡಂಬಡಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಬಿಬಿಎ ವಿಭಾಗದ ಮುಖ್ಯಸ್ಥೆ ಹಾಗೂ ವಾಣಿಜ್ಯ ವಿಭಾಗದ ಡೀನ್ ರೇಖಾ.ಪಿ. ಮಾತನಾಡಿ, ಲಘು ಉದ್ಯೋಗ ಭಾರತಿ ರಾಷ್ಟ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದ್ದು ಈ ಸಂಸ್ಥೆಯು ದೇಶಾದ್ಯಂತ ವಿಸ್ತಾರಗೊಂಡಿದೆ. ವಿದ್ಯಾರ್ಥಿಗಳಿಗೆ ಅವಕಾಶ ನೀಡಲು ಮತ್ತು ಉದ್ಯಮ ಶೀಲತೆಯ ಬಗ್ಗೆ ತಿಳಿದುಕೊಳ್ಳಲು ಇದೊಂದು ಸೂಕ್ತ ಸಂಸ್ಥೆಯಾಗಿದೆ ಎಂದು ಹೇಳಿದರು.
ಲಘು ಉದ್ಯೋಗ ಭಾರತಿ- ಕರ್ನಾಟಕದೊಂದಿಗೆ ಕಾಲೇಜಿನ ಒಪ್ಪಂದದ ಪ್ರತಿಯನ್ನು ಅಧ್ಯಕ್ಷರಾದ ನಾರಾಯಣ್ ಪ್ರಸನ್ನ.ಕೆ ಇವರು ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಧರ ನಾಯಕ್ ಇವರಿಗೆ ಹಸ್ತಾಂತರಿಸಲಾಯಿತು. ವೇದಿಕೆಯಲ್ಲಿ ಲಘು ಉದ್ಯೋಗ ಭಾರತಿ-ಕರ್ನಾಟಕ ಪುತ್ತೂರು ಘಟಕ ಇದರ ಕಾರ್ಯದರ್ಶಿ ಮಹೇಶ್ ಕುಮಾರ್, ಲಘು ಉದ್ಯೋಗ ಭಾರತಿ-ಕರ್ನಾಟಕ ಪುತ್ತೂರು ಘಟಕ ಇದರ ಸಂಚಾಲಕ ಮುರಳೀಧರ.ಕೆ, ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ. ಎನ್, ಐಕ್ಯೂಎಸಿ ಘಟಕದ ಮುಖ್ಯಸ್ಥೆ ಡಾ. ರವಿಕಲಾ, ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ದುರ್ಗಾರತ್ನ. ಸಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಶಿವಪ್ರಸಾದ್ ಕೆ.ಎಸ್, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ಲಕ್ಷ್ಮಿ.ಎನ್ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರದಲ್ಲಿ ಕಾಲೇಜಿನ ಉಪಪ್ರಾಂಶುಪಾಲ ಶ್ರೀಕೃಷ್ಣ ಗಣರಾಜ್ ಭಟ್ ಸ್ವಾಗತಿಸಿ , ಸ್ನಾತಕೋತ್ತರ ವಿಭಾಗದ ಡೀನ್ ಡಾ.ವಿಜಯಸರಸ್ವತಿ ವಂದಿಸಿ, ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ರೇಖಾ.ಪಿ. ನಿರೂಪಿಸಿದರು.
ಲಘು ಉದ್ಯೋಗ ಭಾರತಿ ಇದೊಂದು ದೇಶದಾದ್ಯಂತ ವಿಸ್ತರಿಸಿಕೊಂಡಿರುವ ಸಂಸ್ಥೆಯಾಗಿದ್ದು ಈ ಮುಖೇನ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶ, ಪ್ರಾಯೋಗಿಕ ತರಬೇತಿ, ಉದ್ಯೋಗಕ್ಕೆ ಬೇಕಾದ ಕೌಶಲ್ಯಾಧಾರಿತ ಕಾರ್ಯಕ್ರಮ, ವಿವಿಧ ಕಾರ್ಯಾಗಾರಗಳು ಹಾಗೂ ಉದ್ಯಮಶೀಲತೆಗೆ ಪೂರಕವಾಗುವಂತಹ ಮಾಹಿತಿಗಳನ್ನು ಒದಗಿಸಿಕೊಡುವುದು ಲಘು ಉದ್ಯೋಗ ಭಾರತಿ ಇದರ ಮೂಲ ಆಶಯವಾಗಿದೆ. ಆದುದರಿಂದ ಕಾಲೇಜು ವಿವಿಧ ಸಂಸ್ಥೆಗಳ ಜೊತೆಗೆ ಈ ರೀತಿಯ ಒಡಂಬಡಿಕೆಯನ್ನು ಮಾಡುವುದರಿಂದ ಪದವಿ ಮುಗಿಸಿ ಉದ್ಯೋಗದತ್ತ ತೆರಳುವ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ ಎಂದು ಕಾಲೇಜಿನ ವ್ಯವಹಾರ ನಿರ್ವಹಣಾ ವಿಭಾಗದ ಮುಖ್ಯಸ್ಥೆ ರೇಖಾ.ಪಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ