ಪುತ್ತೂರು : ಪಠ್ಯ ಪುಸ್ತಕದಲ್ಲಿ ಉತ್ತಮ ವಿಚಾರಗಳು ಮಾತ್ರ ಇರುತ್ತವೆ. ಆದರೆ ಸಮಾಜದಲ್ಲಿ ಋಣಾತ್ಮಕ ಸಂಗತಿಗಳು ಬೇಗ ಪ್ರಚಾರ ಪಡೆಯುತ್ತವೆ. ನಾವು ಯಾವಾಗಲೂ ಒಳ್ಳೆ ವಿಚಾರಗಳನ್ನು ಚಿಂತನೆ ಮಾಡುತ್ತಿರಬೇಕು. ನಮ್ಮ ಜೀವನದ ಕಾನೂನು ಗಟ್ಟಿಯಾಗಿದ್ದರೆ ಹೊರಗಿನ ಕಾನೂನಿನ ಅವಶ್ಯಕತೆ ಇಲ್ಲ ಎಂದು ಪುತ್ತೂರಿನ ಸಬ್ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದಲ್ಲಿ ಬುಧವಾರ ಆಯೋಜಿಸಲಾದ ಕಾನೂನು ಮಾಹಿತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಿಧ ಕಾನೂನು ಮತ್ತು ಪೋಸ್ಕೋದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಒಬ್ಬ ವಿದ್ಯಾರ್ಥಿಯಾದವನು ಶಿಕ್ಷಕರಿಗೆ ಗೌರವವನ್ನು ಕೊಡಬೇಕು. ಜ್ಞಾನ ಮತ್ತು ಶಿಕ್ಷಣ ಎಂಬುದು ಬೇರೆ ಬೇರೆ. ಒಳ್ಳೆಯ ನಡವಳಿಕೆ ಇಲ್ಲದಿದ್ದರೆ ಶಿಕ್ಷಣ ಕಲಿತರೂ ವ್ಯರ್ಥ. ಭಗವದ್ಗೀತೆಯು ನಮ್ಮ ಜೀವನದ ಗುರು ಇದ್ದ ಹಾಗೆ. ಅದು ನಮ್ಮ ಆತ್ಮ ರಕ್ಷಣೆಯಾಗಿ ಕಾಯುವ ಗ್ರಂಥವೂ ಕೂಡ ಆಗಿದೆ. ಆದ್ದರಿಂದ ವಿದ್ಯಾರ್ಥಿಗಳಾದವರು ಭಗವದ್ಗೀತೆಯನ್ನು ಪ್ರತಿನಿತ್ಯ ಓದಬೇಕು. ಆಗ ಜೀವನದಲ್ಲಿ ಯಾವುದೇ ಸಮಸ್ಯೆಗಳು ಬರುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಶಾಲಾ ಪ್ರಾಂಶುಪಾಲರಾದ ಮಾಲತಿ ಡಿ. ಮಾತನಾಡಿ ನಾವು ಹೊರಗಿನಿಂದ ಎಷ್ಟೋ ವಿಚಾರಗಳನ್ನು ತಿಳಿದುಕೊಳ್ಳಬಹುದು. ಆದರೆ ನಮ್ಮೊಳಗೆ ನಡೆಯುವ ಪರಿವರ್ತನೆ, ನಮ್ಮಿಂದಲೇ ಸಾಧಿತವಾಗಬೇಕು. ಜೀವನ ಎಂದರೆ ಶಕ್ತಿ ಎಂದು ತಿಳಿಸಿದರು.
ವೇದಿಕೆಯಲ್ಲಿ ಪುತ್ತೂರಿನ ಪೋಲೀಸ್ ಕಾನ್‌ಸ್ಟೇಬಲ್ ನವೀನ್, ಶಾಲಾ ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರಿಯಾಂಶು ನ್ಯಾಯ ಮತ್ತು ಕಾನೂನಿನ ಪ್ರಸ್ತಾವನೆಗೈದರು. ವಿದ್ಯಾರ್ಥಿನಿ ತನ್ವಿ ಎ. ರೈ ಸ್ವಾಗತಿಸಿ, ಮಂದಿರಾ ಕಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ