ಕುಂದಾಪುರ: ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಪ್ರೇರಣಾ ಕಾರ್ಯಕ್ರಮ

Chandrashekhara Kulamarva
0


ಕುಂದಾಪುರ: "ಸತ್ತ್ವಾತ್ ಸಂಜಾಯತೆ ಜ್ಞಾನಂ" ಅಂತರ್ಯ ಶಕ್ತಿಯನ್ನು ಉದ್ದೀಪನಗೊಳಿಸುವುದೇ ನಿಜವಾದ ನಿಜವಾದ ಶಿಕ್ಷಣ. ಇಂತಹ ಪರಿಪೂರ್ಣವಾದ ಶಿಕ್ಷಣ ಕೇವಲ ತರಗತಿಯ ನಾಲ್ಕು ಗೇೂಡೆಗಳೊಳಗೆ ಪಡೆಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳಿಗೆ ವಾಸ್ತವಿಕ ಪ್ರಪಂಚದ ಅರಿವು ಮೂಡಿಸುವಲ್ಲಿ ವಿದ್ಯಾರ್ಥಿಗಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ಕೂಡಾ ಸಕ್ರಿಯವಾಗಿ ಭಾಗಿಸುವಂತೆ ಪ್ರೇರಣೆ ನೀಡಬೇಕಾದ ಜವಾಬ್ದಾರಿ ಶಿಕ್ಷಕರಿಗೂ ಹೆತ್ತವರಿಗೂ ಇದೆ. ಅನುಭವ ಕಲಿಕಾ ಪದ್ದತಿಯನ್ನು ಪದವಿಹಂತದಲ್ಲಿ ವಿದ್ಯಾರ್ಥಿಗಳಿಗೆ ಅಳವಡಿಕೆ ಇಂದಿನ ಅಗತ್ಯತೆಯೂ ಹೌದು. ಈ ನಿಟ್ಟಿನಲ್ಲಿ ಕುಂದಾಪುರ ಡಾ.ಬಿ.ಬಿ. ಹೆಗ್ಡೆ ಕಾಲೇಜು ಮುಂಚೂಣಿಯಲ್ಲಿರುವ ವಿದ್ಯಾ ಸಂಸ್ಥೆ" ಎಂದು ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿಯವರು ಅಭಿಪ್ರಾಯಿಸಿದರು.


ಕುಂದಾಪುರದ ಡಾ.ಬಿ.ಬಿ. ಹೆಗ್ಡೆ ಪ್ರಥಮ ದಜೆ೯ ಕಾಲೇಜಿನಲ್ಲಿ ಪ್ರಥಮ ವರುಷದ ಪದವಿ ತರಗತಿಗಳಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರೇರಣಾ ಕಾರ್ಯಕ್ರಮ ಉದ್ಘಾಟಿಸಿ ದಿಕ್ಸೂಚಿ ಉಪನ್ಯಾಸ ನೀಡಿದರು.


ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಉಮೇಶ್ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಡಾ. ಚೇತನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.  ಆಡಳಿತ ವಿಭಾಗದ ಡೀನ್ ರಕ್ಷಿತ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣಕ ವಿಭಾಗದ ಹಿರಿಯ ಉಪನ್ಯಾಸಕ ಗಿರಿರಾಜ್ ಭಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಸತೀಶ್ ಶೆಟ್ಟಿ ಅತಿಥಿ ಪರಿಚಯ ನೀಡಿದರು. ಕಾಲೇಜಿನ ಐ.ಕ್ಯೂ.ಎ.ಸಿ. ಸಂಯೇೂಜಕಿ ದೀಪಿಕಾ. ಜಿ. ವಂದಿಸಿದರು. ರೇಷ್ಮಾ ಶೆಟ್ಟಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಕಾರ್ಯಕ್ರಮ ನಿರೂಪಿಸಿದರು.


إرسال تعليق

0 تعليقات
إرسال تعليق (0)
To Top