ಮುಜುಂಗಾವು: ಶ್ರೀ ಭಾರತಿ ವಿದ್ಯಾಪೀಠದಲ್ಲಿ ಪ್ರತಿಭಾ ಭಾರತಿ ಕಾರ್ಯಕ್ರಮ ಬುಧವಾರ (ಜುಲೈ 30) ನಡೆಯಿತು. ಅತಿಥಿಗಳಾಗಿ ಆಗಮಿಸಿದ ಎಡನಾಡು ಕಣ್ಣೂರು ಸೇವಾಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಶ್ಯಾಮರಾಜ ದೊಡ್ಡಮಾಣಿ 'ಮಕ್ಕಳು ಪುಸ್ತಕ ಹುಳಗಳಾಗಿರದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಬೇಕು. ಎಲ್ಲಾ ವಿದ್ಯಾರ್ಥಿಗಳಲ್ಲಿಯೂ ಪ್ರತಿಭೆಯಿದೆ ಅದನ್ನು ಹೊರ ತರುವ ವೇದಿಕೆಯೇ ಪ್ರತಿಭಾ ಭಾರತಿ' ಎಂದು ಅಭಿಪ್ರಾಯ ಪಟ್ಟರು.
ವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳಿಂದಲೂ ಪ್ರತಿಭಾ ಪ್ರದರ್ಶನ ನಡೆಯಿತು. ಕು|ದೀಕ್ಷಾ ಸಭಾಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದಳು. ಶಾಲಾ ಆಡಳಿತ ಸಮಿತಿಯ ಜೊತೆ ಕಾರ್ಯದರ್ಶಿ ಹಾಗೂ ಸಂಸ್ಕೃತ ಅಧ್ಯಾಪಕರೂ ಆದ ಬಾಲಕೃಷ್ಣ ಶರ್ಮ ಅನಂತಪುರ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ್ ಭಟ್ ದರ್ಬೆಮಾರ್ಗ, ಸಹ ಮುಖ್ಯ ಶಿಕ್ಷಕಿ ಶ್ರೀಮತಿ ಚಿತ್ರಾ ಸರಸ್ವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ, ಶಾಶ್ವತ್ ಸ್ವಾಗತಿಸಿ, ಕು|ಧನ್ವಿ ಎಂ ವಂದಿಸಿದಳು. ಕು|ಕನಿಹ ಹಾಗೂ ಕು|ಪೃಥ್ವಿ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ