ಮಂಗಳೂರು: ಕವಿತೆ ಮನಸ್ಸಿನ ಭಾವನೆಗಳ ಅಭಿವ್ಯಕ್ತಿಯಾಗಿದೆ. ಭಾವನೆಗಳನ್ನು ವ್ಯಕ್ತಪಡಿಸಲು ಕವಿತೆ ಶಕ್ತಿಯುತ ಸಾಧನವಾಗಿದ್ದು, ಕವಿ ಯುಗದ ಧ್ವನಿಯಾಗಬೇಕು ಎಂದು ಹಿರಿಯ ಕವಿ, ಸಾಹಿತಿ ಡಾ. ವಸಂತ ಕುಮಾರ್ ಪೆರ್ಲ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ದ.ಕ. ಜಿಲ್ಲಾ ಸಮಿತಿ ವತಿಯಿಂದ ನಗರದ ಲಾಲ್‌ಬಾಗ್‌ನ ಇಂದಿರಾ ಪ್ರಿಯದರ್ಶಿನಿ ಪಾರ್ಕ್‌ನಲ್ಲಿ ನಡೆದ ಹನಿ ಇಬ್ಬನಿ- ಸಿಹಿ ಸಿಂಚನ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕವಿತೆ ಹಾಗೂ ಪ್ರಕೃತಿಗೆ ಅವಿನಾಭಾವ ಸಂಬಂಧವಿದೆ. ಅನುಭವ, ಅಧ್ಯಯನ, ಆಸಕ್ತಿಯ ಫಲವಾಗಿ ಮೂಡುವ ಕವಿತೆ ಓದುಗರಿಗೆ ತಟ್ಟುತ್ತದೆ ಎಂದು ಅವರು ಹೇಳಿದರು.
ಅಭಾಸಾಪ ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ಪಿ.ಬಿ.ಹರೀಶ್ ರೈ ಕವಿಗಳಿಗೆ ಅಭಿನಂದನಾ ಪತ್ರ ವಿತರಿಸಿದರು. ಜತೆ ಕಾರ್ಯದರ್ಶಿ ಲತೇಶ್ ಬಾಕ್ರಬೈಲ್ ಉಪಸ್ಥಿತರಿದ್ದರು. ಕವಿಗೋಷ್ಠಿಯ ಸಂಘಟಕಿ ಗೀತಾ ಲಕ್ಷ್ಮೀಶ್ ಕಾರ್ಯಕ್ರಮ ನಿರೂಪಿಸಿದರು.
ಬಹುಭಾಷೆಗಳ ಕವನ:
ಕನ್ನಡ, ಹಿಂದಿ, ತುಳು, ಕೊಂಕಣಿ, ಹವ್ಯಕ ಕನ್ನಡ, ಅರೆಭಾಸೆಯ ಕವನಗಳನ್ನು ವಾಚಿಸಿದರು. ಗುಣಾಜೆ ರಾಮಚಂದ್ರ ಭಟ್, ಡಾ. ಸುರೇಶ ನೆಗಳಗುಳಿ, ರೇಮಂಡ್ ಡಿಕೂನ ತಾಕೊಡೆ, ಡಾ. ಕೊಳ್ಚಪ್ಪೆ ಗೋವಿಂದ ಭಟ್, ಎಂ. ಎಸ್. ವೆಂಕಟೇಶ ಗಟ್ಟಿ, ಚೇತನ್, ವೈಭವ್ ಡಿ. ಶೆಟ್ಟಿಗಾರ್, ಪ್ರೇಮ ಆರ್.ಶೆಟ್ಟಿ, ಡಾ. ಕವಿತಾ, ಪದ್ಮನಾಭ ಪೂಜಾರಿ ಬಂಟ್ವಾಳ, ಪ್ಲಾವಿಯಾ ಅಲ್ಬುಕರ್ಕ್, ಅಶ್ವಿನಿ ತೆಕ್ಕುಂಜ, ನಿಶಾನ್ ಅಂಚನ್, ಸಲೀಂ ಪಾಶಾ, ಮನ್ಸೂರ್ ಮೂಲ್ಕಿ, ಆಕೃತಿ ಭಟ್, ಪ್ರಶಾಂತ್ ಎನ್ ಆಚಾರ್ಯ, ಭವ್ಯಜ್ಯೋತಿ ಕೆ., ಅನಿತಾ ಶೆಣೈ, ಮರ್ಲಿನ್ ಮೇಬಲ್ ಮಸ್ಕರೇನಸ್, ಲಕ್ಷ್ಮೀ ವಿ. ಭಟ್, ಸುಲೋಚನ ನವೀನ್, ಆರ್.ಎಂ.ಗೋಗೆರಿ, ಅನನ್ಯ ಎಚ್.ಸುಬ್ರಹ್ಮಣ್ಯ,ಲಾವಣ್ಯ, ದಿವ್ಯ ಗಿರೀಶ್, ಗೀತಾ ಲಕ್ಷ್ಮಿಶ್, ಆಕಾಶ್ ಗೇರುಕಟ್ಟೆ, ಅನನ್ಯ ಕರ್ಕೇರ, ಡಾ. ಫ್ಲಾವಿಯ ಕ್ಯಾಸ್ಟಲಿನೊ ಸ್ವರಚಿತ ಕವನಗಳನ್ನು ವಾಚಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ