ಹಸಿರು ಗಾಜಿನ ಬಳೆಗಳೆ ಸ್ತ್ರೀ ಕುಲದ ಶುಭ ಸ್ವರಗಳೇ ಹೆಣ್ಣು ಮಕ್ಕಳಿಗೆ ಸೀರೆ, ಹಸಿರು ಬಳೆಗಳು ಅಂದರೆ ತುಂಬಾ ಇಷ್ಟ ಅಲ್ವಾ? ಅದಕ್ಕಾಗಿಯೇ ದಾವಣಗೆರೆ ತೋಟಗಾರಿಕೆ ಇಲಾಖೆಯ ವತಿಯಿಂದ ನಿರ್ಮಿಸಲಾದ ಸುಂದರ ಗಾಜಿನ ಮನೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಲ್ಲಿರುವ ವೃಕ್ಷಗಳು ಕಣ್ಮನ ತನೀಸುತ್ತಿವೆ. ಗಾಜಿನ ಮನೆ ಒಳಗೆ ವೃತ್ತಾಕಾರದಲ್ಲಿ ಬೆಂಚುಗಳನ್ನು ಜೋಡಿಸಲಾಗಿದ್ದು, ಕುಳಿತುಕೊಳ್ಳಲು ಅವಕಾಶವಿದೆ. ಒಳಗೆ ಹೊರಗೆ ಹಸಿರು ಸಮೃದ್ಧಿಯ ಗಿಡಗಳಿವೆ. ಅಲ್ಲದೆ ಮನೆಯಂತೆ ಭಾಸವಾಗುವ ವಿಶಾಲ ಕೋಣೆಗಳಿವೆ. ಫೋಟೋ ತೆಗೆಸಿಕೊಳ್ಳುವವರಿಗಾಗಿ ಸೆಲ್ಫಿ ಕಾರ್ನರ್ ಇದ್ದು, ಇದಕ್ಕೆ 20 ರೂ ಶುಲ್ಕವಿದೆ. ಚಿಕ್ಕ ಮಕ್ಕಳಿಗೆ ಶುಲ್ಕ ವಿನಾಯಿತಿ ಇದೆ.
ಬೇಸಿಗೆ ಕಾಲದಲ್ಲಿ ಬಿಸಿಲಿನ ಕಾವು ಹೆಚ್ಚಾಗಿರುತ್ತದೆ. ಬೆಂಗಳೂರಿನ ಲಾಲ್‌ಬಾಗ್ ಉದ್ಯಾನವನದಲ್ಲಿ ಗಾಜಿನ ಮನೆಯನ್ನು ನೋಡಿದ್ದೇವೆ. ಈಗ ಮಡಿಕೇರಿಯಲ್ಲಿ ಗಾಜಿನ ಸೇತುವೆ ಇದೆ. ಅಂತೆಯೇ ದಾವಣಗೆರೆಯಲ್ಲಿರುವ ಈ ಸುಂದರ ಗಾಜಿನ ಮನೆ ಕೂಡ ಪ್ರವಾಸಿಗರಿಗೆ ಆಕರ್ಷಕ ತಾಣವಾಗಿದೆ.
ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಏರ್ಪಡಿಸಿದ್ದ ಸಮಾರಂಭದಲ್ಲಿ ಸ್ವರ ಸಿಂಚನ ಕಲಾತಂಡವನ್ನು ಗೌರವಿಸಿ ಸನ್ಮಾನಿಸಿದ ಸಂದರ್ಭ ಇದನ್ನು ನೋಡುವ ಅವಕಾಶ ನಮಗೆಲ್ಲರಿಗೂ ಸಿಕ್ಕಿತು.
- ಕುಮಾರ್ ಪೆರ್ನಾಜೆ ಪುತ್ತೂರು
ಚಿತ್ರಗಳು: ನಂದನ್ ಕುಮಾರ್ ಪೆರ್ನಾಜೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ