ಕವನ: ಇಂದಿನ ಮಾನವ

Chandrashekhara Kulamarva
0


ಕಾಡು ನಾಶ ಮಾಡಬೇಡಿ!

ಕೊಳವೆ ಬಾವಿ ತೋಡಬೇಡಿ!!

ಸರಕಾರದಿಂದ ಬಂತು ಘೋಷಣೆ!

ಮಾಡಲಿಲ್ಲ ಯಾರು ಈಗ ಕಾಡಿನ ಪೋಷಣೆ!!


ಕಾಡು ಎಲ್ಲ ಕಡಿದರು ಕೊಳವೆ ಬಾವಿ ತೋಡಿದರು!

ನೀರು ಸಿಗದೆ ಇರುವಾಗ ಊರೆ ಬಿಟ್ಟು ಓಡಿದರು!!

ದೈವ ದೇವರಿಚ್ಛೆ ಬಲ್ಲವರು ಇಲ್ಲಿಯಾರು!

ಯಾರಲ್ಲಿ ಕೊಡಲಿ ಈ ವರ್ಷದ ಮಳೆಯ ದೂರು!!


ಒಂದು ದಿನವು ರಜೆಯ ಮಾಡಲಿಲ್ಲ ಸುರಿಯುತ್ತಿದ್ದ ಮಳೆ!

ನಾಶವಾಗುತಿದೆ ಭೂಮಿ ಮೇಲೆ ಕೃಷಿಯ ಬೆಳೆ!!

ಅಳಿದು ಉಳಿದ ಅಡಿಕೆ ಉದುರಿ ನೆಲವ ಸೇರುತಿದೆ!

ಗದ್ದೆಯ ಪೈರು ಎಲ್ಲ ಬಾಗಿ ನೀರನೊಳಗೆ ಕೂರುತಿದೆ!!


ಸರಕಾರ  ಸಾರುವರು ಶಾಲಾ ಕಾಲೇಜುಗಳಿಗೆ ರಜೆ!

ಮಕ್ಕಳಗೆ ದಿನನಿತ್ಯ ಇದು ಬಹಳ ದೊಡ್ಡ ಸಜೆ!!

ಪಶು ಪಕ್ಷಿಗಳಿಗೆ ಎಲ್ಲ ಆಗುತಿದೆ ಆಹಾರದ ಕೊರತೆ!

ಭೂಮಿ ಮೇಲೆ ಹೆಜ್ಜೆ ಹೆಜ್ಜೆಗು ನೀರಿನದ್ದೆ ಒರತೆ!!


ಬೆಟ್ಟಗುಡ್ಡ ಜರಿದು ತೋಡು ನದಿ ಸಾಗರವ ಸೇರುತಿದೆ!

ಮನೆಮಠ ಹಟ್ಟಿಕೊಟ್ಟಗೆ ಜಡಿಮಳೆಗೆ ಸೋರುತಿದೆ!!

ಒಂದಷ್ಟು ಬಿಸಿಲ ಕೊಡಲಾರೆ ಸೂರ್ಯ ಸೋತಿದ್ದಾನೆ!

ಏನೂ ಮಾಡಲಾರದೆ ಮಾನವ ಮನೆಯಲ್ಲೆ ಕೂತಿದ್ದಾನೆ!!


ಸರ್ವ ಶಕ್ತಿಗಳಿಗು ಮಾನವ ಮಾಡುವುದಿಲ್ಲ ವಂದನೆ!

ಪ್ರತಿನಿತ್ಯವು ಮಾನವನಿಂದ ಆಗುತ್ತಿದೆ ಎಲ್ಲದಕು ನಿಂದನೆ!!

ಮಳೆ ಗಾಳಿ ನೀರು ಬೆಳಕು ಇದು ಯಾವುದು ಹೊಸತಲ್ಲ!

ಅದುಮಾಡುವೆ ಇದುಮಾಡುವೆ ಕಂಡುಹಿಡಿಯುವೆ ಎನ್ನುವನು ವಿಜ್ಞಾನಿ!

ಪ್ರಕೃತಿ ಮುನಿಸಿನ ಮುಂದೆ ಏನೂ ಮಾಡಲಾರ ಈ ಸುಜ್ಞಾನಿ!!


ಮರ ಕಡಿಯಲಿ ಕೊಳವೆ ಬಾವಿ ತೋಡಲಿ ಮಳೆಗಿಲ್ಲ ಬರ!

ಎಷ್ಷೇ ಸುರಿಯಲಿ ಎಷ್ಟೇಹರಿಯಲಿ ಮಳೆಯ ನೀರಿಗಿಲ್ಲ ಭೂಮಿ ಮೇಲೆ ದರ!!

ಅತ್ಯಾಚಾರ ಅನಾಚಾರ ಮಾಡುವುದ ನಿಲ್ಲಿಸಲಿ ಮಾನವ!

ಎಲ್ಲರೊಂದಿಗೆ ಬೆರೆತು ಕೊಳ್ಳಲಿ ಬೆಳೆಸಿ ಕೊಳ್ಳಲಿ ಒಳ್ಳೆ ಜ್ಞಾನವ!!


- ನಾರಾಯಣ ನಾಯ್ಕ ಕುದುಕೋಳಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

إرسال تعليق

0 تعليقات
إرسال تعليق (0)
To Top