ಬಾನು ಬಿರುಕು ಬಿಟ್ಟ ಹಾಗೆ
ನೀರ ಕಟ್ಟ ಕಡಿದ ಹಾಗೆ
ಸತತ ಸುರಿವ ಮಳೆಯು ಇದು ಏನು ಅಬ್ಬರ!!
ಬೀಸುತಿರುವ ಹಿಮದ ಗಾಳಿ
ಮನೆಯು ದೂರ ಹಾರಿ ಹೋಗಿ
ಈ ಹೊತ್ತಿಗೆ ಒದಗಿ ಬಂತು ಪರ್ಣ ಕುಟೀರ!
ಭೀತಿಯಿಂದ ಮಗುವದೊಂದು
ಅಮ್ಮನನ್ನು ಆತುಕೊಂಡು
ನೋವಿನಿಂದ ಕೇಳುತಿಹುದು ನಮಗೆ ಬದುಕು ಎಲ್ಲಿದೆ?
ಕಷ್ಟ ನಷ್ಟ ಸಹಿಸಿಕೊಂಡು
ಗಟ್ಟಿಗೊಂಡ ತಾಯಿ ಕರುಳು
ದಿಟ್ಟವಾಗಿ ನುಡಿದಳಿಂತು ದೇವನಿಟ್ಟ ಪರೀಕ್ಷೆಯಿದು ಅದಕೆ ಹೀಗಿದೆ
ಇಲ್ಲಿ ಈಗ ಗೆದ್ದರೇನೇ
ನಾಳೆಗಿಲ್ಲ ಎನಿತು ಬೇನೆ
ಪ್ರಕೃತಿ ತಾಯಿ ಜೊತೆಗೆ ಬಾಳು ಸದಾ ಧನ್ಯವೆನುವುದು.
ನೋವನೆಲ್ಲಾ ಆಚೆ ನೂಕಿ
ಕೊಂಬೆಯಲ್ಲಿ ಒಮ್ಮೆ ಜೀಕಿ
ಮಳೆಯ ಜೊತೆಗೆ ಆಟವಾಡೆ ಮನವು ಖುಷಿಯ ಪಡೆವುದು
- ವಿಶ್ವನಾಥ ಕುಲಾಲ್ ಮಿತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ