ಉಡುಪಿ: ನಮ್ಮ ಭಾರತೀಯ ಸನಾತನ ಸಂಸ್ಜೃತಿಯ ಪ್ರಚಾರದ ಅಂಗವಾಗಿ ವಿಶ್ವಾದ್ಯಂತ ಶ್ರೀ ಕೃಷ್ಣ ಮಂದಿರಗಳನ್ನು ಸ್ಥಾಪಿಸಿದ ಪೂಜ್ಯ ಪುತ್ತಿಗೆ ಶ್ರೀಪಾದರ ಅಪೇಕ್ಷೆಯಂತೆ, ಅಮೆರಿಕಾದ ಡಲ್ಲಾಸ್ ಮಹಾನಗರದಲ್ಲಿರುವ ಶ್ರೀ ಪುತ್ತಿಗೆ ಮಠದಲ್ಲಿ ಪ್ರತಿಷ್ಠಾಪನೆಗಾಗಿ ಬಹು ಸುಂದರದ ಉಡುಪಿ ಶ್ರೀಕೃಷ್ಣನ ಮೂರ್ತಿ ಇದೀಗ ಸಿದ್ದಗೊಂಡಿದೆ.
ಕಡೂರಿನ ಶಿಲ್ಪಿ ತೀರ್ಥರಾಜ್ ತಂಡದವರು ಕೆತ್ತಿ ತಯಾರಿಸಿದ ಈ ಬೃಹತ್ ಮೂರ್ತಿಯನ್ನು ಮುಖ್ಯ ಪ್ರಾಣ ದೇವರ ಸಹಿತವಾಗಿ ಇಂದು ಗೀತಾ ಮಂದಿರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪೂಜ್ಯ ಶ್ರೀಪಾದರಿಗೆ ಹಸ್ತಾಂತರಿಸಿದರು.
ಪರ್ಯಾಯ ಶ್ರೀಪಾದರು ಶ್ರೀ ಕೃಷ್ಣ ಮೂರ್ತಿಗೆ ಮಂಗಳಾರತಿಯನ್ನು ಮಾಡಿ ಸ್ವಾಗತಿಸಿ ಬರಮಾಡಿಕೊಂಡರು. ಪೂಜ್ಯ ಶ್ರೀಪಾದರು ತಮ್ಮ ಈ ಬಾರಿಯ ಪೂಜಾ ಪರ್ಯಾಯ ಮುಗಿದ ಬಳಿಕ ಈ ಮೂರ್ತಿಯನ್ನು ಉದ್ದೇಶಿತ ಮಂದಿರದಲ್ಲಿ ವಿಧ್ಯುಕ್ತವಾಗಿ ಪ್ರತಿಷ್ಠಾಪನೆಗೈಯಲಿದ್ದಾರೆ. ಅಲ್ಲಿಯವರೆಗೆ ಈ ಕೃಷ್ಣ ಮುಖ್ಯಪ್ರಾಣನ ಜೊತೆಗೆ ಗೀತಾ ಮಂದಿರದಲ್ಲಿ ವಿರಾಜಮಾನನಾಗಲಿದ್ದಾನೆ.
ಶ್ರೀಪಾದರು ಶಿಲ್ಪಿಗಳಿಗೆ ಶ್ರೀ ಕೃಷ್ಣ ಪ್ರಸಾದವನ್ನು ನೀಡಿ ಹರಸಿದರು. ಶ್ರೀ ಮಠದ ಅಂತಾರಾಷ್ಟ್ರೀಯ ಕಾಯದರ್ಶಿ ಪ್ರಸನ್ನಾಚಾರ್ಯ ಸ್ವಾಗತಿಸಿದರು. ಅಮೆರಿಕದ ಡಲ್ಲಾಸ್ ನಗರದಲ್ಲಿರುವ ಶ್ರೀ ಪುತ್ತಿಗೆ ಶಾಖಾ ಮಠದ ಪ್ರಧಾನ ಅರ್ಚಕರಾದ ವಾದಿರಾಜ್ ಭಟ್ ಕುಕ್ಕೆಹಳ್ಳಿ ಧನ್ಯವಾದವಿತ್ತರು.
ದಿವಾನರಾದ ನಾಗರಾಜಾಚಾರ್ಯ ಕಾರ್ಯದರ್ಶಿ ರತೀಶ ತಂತ್ರಿ, ಮತ್ತಿತರ ಸಿಬ್ಬಂದಿಗಳು, ಅನೇಕ ಭಕ್ತರು ಉಪಸ್ಥಿತರಿದ್ದರು.
ಕಳೆದ ಪೇಜಾವರ ಶ್ರೀಪಾದರ ಪರ್ಯಾಯದಲ್ಲಿ ನ್ಯೂಜರ್ಸಿಯ ಶ್ರೀಕೃಷ್ಣ ಪೇಜಾವರ ಶ್ರೀಗಳಿಂದ ಸ್ವಾಗತವನ್ನು ಉಡುಪಿಯಲ್ಲಿ ಸ್ವೀಕರಿಸಿ ಪುತ್ತಿಗೆ ಶ್ರೀ ಪಾದರ ಮೂಲಕ ನ್ಯೂಜೆರ್ಸಿಯ ಶ್ರೀ ಪುತ್ತಿಗೆ ಮಠದಲ್ಲಿ ಪ್ರತಿಷ್ಠಾಪಿತವಾದದ್ದನ್ನು ಸ್ಮರಿಸಬಹುದಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ