ಪ್ರವೀಣ ಕುಮಾರಿ ಎಂ.ಕೆ. ಅವರಿಗೆ ಪಿ.ಎಚ್.ಡಿ.

Chandrashekhara Kulamarva
0



ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಮ್.ಸಿ.ಎ. ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾಗಿರುವ ಪ್ರವೀಣ ಕುಮಾರಿ ಎಂ .ಕೆ. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಚೇರ್ಮನ್ ಹಾಗೂ ಸೀನಿಯರ್ ಪ್ರೊಫೆಸರ್ ಡಾ| ಮಂಜಯ್ಯ ಡಿ. ಎಚ್. ಅವರ ಮಾರ್ಗದರ್ಶನದಲ್ಲಿ ಮಂಡಿಸಿರುವ "Advanced Data Analytics Model for Intelligent Transport System in Smart City" ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿ.ಎಚ್.ಡಿ. ನೀಡಿದೆ. 


ಪ್ರವೀಣ ಕುಮಾರಿ ಎಂ. ಕೆ. ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೃಷ್ಣನಗರದ ನಿವೃತ್ತ PSI ಪಿ. ಎಮ್. ಕೃಷ್ಣ ನಾಯ್ಕ್ ಹಾಗೂ ಯಶೋದಾ ಕೃಷ್ಣ ಇವರ ಪುತ್ರಿ ಮತ್ತು ಉಡುಪಿ ಕೋ ಆಪರೇಟಿವ್ ಟೌನ್ ಬ್ಯಾಂಕಿನ ಪ್ರಧಾನ ಕಛೇರಿಯ ವ್ಯವಸ್ಥಾಪಕರಾಗಿರುವ ನಾರಾಯಣ ಬಡೆಕ್ಕಿಲ ಅವರ ಪತ್ನಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top