ಬೆಂಗಳೂರು: ‘ನಮ್ಮ ವಿದ್ಯಾರ್ಥಿಗಳನ್ನು, ಅದರಲ್ಲೂ ತಂತ್ರಜ್ಞಾನದ ವಿದ್ಯಾರ್ಥಿಗಳನ್ನು ಆತ್ಮನಿರ್ಭರ ಭಾರತದ ನಿರ್ಮಾಣಕ್ಕೆ ಸಜ್ಜುಗೊಳಿಸಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ. ಬಹುಮುಖ್ಯವಾಗಿ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳನ್ನೊಳಗೊಂಡ ಪ್ರಾತ್ಯಕ್ಷಿಕೆಗಳಿಗೆ ಸೂಕ್ತ ವೇದಿಕೆ ನಿರ್ಮಿಸಬೇಕು. ತದನಂತರ ವಿದ್ಯಾರ್ಥಿಗಳೇ ಸಣ್ಣಪುಟ್ಟ ಉಪಗ್ರಹಗಳನ್ನು ತಯಾರಿಸಲು ಹಾಗೂ ಉಡಾವಣೆ ಮಾಡಲು ನಮ್ಮ ವಿದ್ಯಾಸಂಸ್ಥೆಗಳು ಅವಕಾಶಗಳನ್ನು ಕಲ್ಪಿಸಲು ಕಂಕಣ ತೊಡಬೇಕು. ಹಾಗೆಯೇ ರಾಕೆಟ್ ತಂತ್ರಜ್ಞಾನ ಕ್ಷೇತ್ರದಲ್ಲೂ ನಮ್ಮ ವಿದ್ಯಾರ್ಥಿಗಳು ಪಳಗಬೇಕು’, ಎಂದು ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆಯ ಇಂಡಿಯನ್ ನ್ಯಾಶನಲ್ ಸ್ಪೇಸ್ ಪ್ರಮೋಶನ್ ಆಂಡ್ ಆಥರೈಸೇಶನ್ ಕೇಂದ್ರದ (ಇನ್-ಸ್ಪೇಸ್) ನಿರ್ದೇಶಕ ಡಾ. ವಿನೋದ್ ಕುಮಾರ್ ನುಡಿದರು.
ಅವರು ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ, ಡಸಾಲ್ಟ್ ಸಿಸ್ಟಮ್ಸ್ ಫೌಂಡೇಶನ್ ಇಂಡಿಯಾ ಸಹಯೋಗದಲ್ಲಿ ಆಯೋಜಿಸಿದ್ದ ಬಾಹ್ಯಾಕಾಶ ಪರಿಶೋಧನೆ ಕುರಿತ ಮೂರು ದಿನಗಳ ತಂತ್ರಜ್ಞಾನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿಶ್ವ ಯುವ ಕೌಶಲ್ಯ ದಿನಾಚರಣೆಯ ಅಂಗವಾಗಿ ನಡೆದ ಈ ಕರ‍್ಯಾಗಾರದಲ್ಲಿ ರಾಜ್ಯಾದ್ಯಂತ ಇರುವ ವಿದ್ಯಾಸಂಸ್ಥೆಗಳಿAದ ತಂತ್ರಜ್ಞಾನದ ವಿದ್ಯಾರ್ಥಿಗಳು ಬಹು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ‘ಪ್ರಸ್ತುತ ಕರ‍್ಯಾಗಾರ ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಸಮಗ್ರ ತಿಳುವಳಿಕೆ ನೀಡುವುದರಲ್ಲಿ ಮಹತ್ವದ ಪಾತ್ರ ವಹಿಸಲಿದೆ. ನಾವು ಈ ಮೂಲಕ ಭವಿಷ್ಯದ ಬಾಹ್ಯಾಕಾಶ ವಿಜ್ಞಾನಿಗಳನ್ನು ಸೃಷ್ಟಿಸುತ್ತಿದ್ದೇವೆ’ ಎಂದರು.
ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದ ಡಸಾಲ್ಟ್ ಸಿಸ್ಟಮ್ಸ್ ಫೌಂಡೇಶನ್-ಇAಡಿಯಾದ ಕರ‍್ಯನಿರ್ವಾಹಕ ನಿರ್ದೇಶಕ ಹುಜೇಫ ಸಲೀಂ ಅವರು ಈ ಕರ‍್ಯಾಗಾರದಲ್ಲಿ ಅಳವಡಿಸಿದ್ದ ಬಹುಶಿಸ್ತೀಯ ಪರಿಕ್ರಮವನ್ನು ಶ್ಲಾಘಿಸಿದರು. ಅಲ್ಲದೆ ವಿವಿಧ ತಂತ್ರಜ್ಞಾನದ ಶಾಖೆಗಳು ಇಲ್ಲಿ ಒಗ್ಗೂಡಿ ಪರಸ್ಪರ ಸಹಯೋಗದೊಂದಿಗೆ ಬಾಹ್ಯಾಕಾಶದ ಪರಿಶೋಧನೆ ಹಾಗೂ ಅನ್ವೇಷಣೆಗಳಲ್ಲಿ ತೊಡಗುವ ಅಗತ್ಯತೆ ಬಗ್ಗೆ ವಿಶ್ಲೇಷಿಸಿದರು.
ಕಾರ್ಯಾಗಾರದಲ್ಲಿ ಡಸಾಲ್ಟ್ ಸಿಸ್ಟಮ್ಸ್-ಇಂಡಿಯಾದ ಹಿರಿಯ ತಂತ್ರಜ್ಞಾನ ಅಧಿಕಾರಿಗಳಾದ ಶ್ರೀಕೃಷ್ಣ ಚಿತ್ತೂರು ಹಾಗೂ ಪ್ರವೀಣ್ ಭಗೋಜಿ ಮತ್ತು ಸ್ಟಾರ್‌ಲ್ಯಾಬ್ಸ್ ಸಂಸ್ಥೆಯ ಸಂಸ್ಥಾಪಕ ಸನ್ನಿ ಕಬ್ರವಾಲ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕರ‍್ಯಾಗಾರದಲ್ಲಿ ರಾಕೆಟ್ ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇದುವರೆಗೆ ನಡೆದಿರುವ ಸಂಶೋಧನೆಗಳ ಪ್ರಾತ್ಯಕ್ಷಿಕೆಗಳೂ ಜರುಗಿದವು.
ಸಮಾರಂಭದಲ್ಲಿ ಸಂಸ್ಥೆಯ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್, ಗೌರವ ಪ್ರಾಧ್ಯಾಪಕ ಡಾ. ವಿ. ಶೀಧರ್, ಸಂಸ್ಥೆಯ ವೈಮಾನಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಶ್ರೀಕಾಂತ್ ಎಸ್.ವಿ, ಪ್ರಾಧ್ಯಾಪಕರಾದ ಡಾ. ಪ್ರಹ್ಲಾದ್ ಎನ್. ತೆಂಗಳಿ, ಡಾ. ಜಿ. ನರಹರಿ ದತ್ತ, ಕಾರ್ಯಾಗಾರದ ಸಂಯೋಜಕರಾದ ಡಾ. ಜಿನಿ ರಾಜ್, ಪ್ರವೀಣ್ ಎನ್ ಹಾಗೂ ಇತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ