ಸ್ಫೂರ್ತಿ ಸೆಲೆ: ಜೀವನದ ದಾರಿ ಸುಗಮವೊ ಅಥವಾ ದುರ್ಗಮವೋ

Upayuktha
0


ಹಲೋ, ಹೇಗಿದ್ದೀರಾ?

ಬದುಕು ತನ್ನದೇ ಆದ ಹಾದಿಯನ್ನು ಹೊಂದಿರುತ್ತದೆ. ಆದರೆ ಕೆಲವರಿಗೆ ಬದುಕಿನ ಹಾದಿ ಹೈವೇ ಆದರೆ, ಕೆಲವರಿಗೆ ಆಗುಂಬೆ ಘಾಟ್ ಹಾದಿ ಇದ್ದ ಹಾಗೆ, ಬದುಕು ಕೆಲವೊಂದು ಸಾರೆ ಕವಲು ಹಾದಿ ಹಿಡಿಯುವುದುಂಟು.


ಒಂದೊಂದು ಸಾರಿ ನಮ್ಮ ಬದುಕು ಟ್ರಾಫಿಕ್ ಜಾಮ್ ಇದ್ದ ಹಾಗೆ ಅನಿಸುವುದುಂಟು. ಅವಕಾಶಗಳು ಸಿಕ್ಕಿದರೂ ಕೆಲವೊಂದು ಸಾರೆ ಟ್ರಾಫಿಕ್ ಜಾಮ್ ನಲ್ಲಿ ವೆಹಿಕಲ್ ಸಿಕ್ಕಿದ ಹಾಗೆ ನಮ್ಮ ಅವಕಾಶಗಳನ್ನು ಸಿಕ್ಕಿದರೂ ಉಪಯೋಗಿಸಿಕೊಳ್ಳದಂತಹ ಪರಿಸ್ಥಿತಿ ಸೃಷ್ಟಿ ಆಗುವುದುಂಟು. ಟ್ರಾಫಿಕ್ ಜಾಂನಲ್ಲಿ  ಓವರ್ಟೇಕ್ ಮಾಡಿದ ಹಾಗೆ ನಮ್ಮ ಅವಕಾಶಗಳನ್ನು ಬಳಸಿಕೊಳ್ಳಲು ಹೊಂಚು ಹಾಕಿಕೊಂಡು ಕಾಯುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ತಾಳ್ಮೆ ಪ್ರಮುಖ ಪಾತ್ರ ವಹಿಸುತ್ತದೆ.


ಅದಕ್ಕೆ ಇಂಗ್ಲೀಷಿನಲ್ಲಿ ಹೇಳುತ್ತಾರೆ. Difficult roads leads to beautiful destinations. ಬದುಕು ಕೆಲವರಿಗೆ ಯಶಸ್ಸಿನ ಹೆದ್ದಾರಿ ಯಾದರೆ ಕೆಲವರಿಗೆ ದುರ್ಗಮದ ಹಾದಿ. ಕೆಲವರಿಗಂತೂ ಕಲ್ಲು ಕಡಿದು ಹಾದಿ ಮಾಡಿ ಕೊಳ್ಳುವ ಸ್ಥಿತಿ. ಬದುಕು ನಮಗೆ ಜೀವನದಲ್ಲಿ ಕಲಿಸುವ ಪಾಠಗಳಲ್ಲಿ ಇದೂ ಒಂದು.

 

ಆದರೆ ನನ್ನ ಜೀವನವೆಂಬ ವಾಹನ ರೆಸ್ಟ್ ಹೌಸಿನ ಮುಂದೆ. ನಿಲ್ಲದಂತೆ ನೋಡಿಕೊಂಡರೆ ಯಶಸ್ಸು ನಮ್ಮನ್ನು ಹುಡುಕಿ ಕೊಂಡು ಬಂದೇ ಬರುತ್ತದೆ.

ನಾವು ಬದುಕನ್ನು ನೋಡುವ ದೃಷ್ಟಿ ಬದಲಾದಾಗ ಮಾತ್ರ ಕಡಿದಾದ ದಾರಿಯನ್ನು ಸುಗಮ ಮಾಡಿಕೊಳ್ಳುವ ಜಾಣ್ಮೆ ಕಲಿಯುತ್ತೇವೆ. ನಮ್ಮ ಬದುಕು ಎಂಬ ವಾಹನ ಯಾವುದೇ ಅಪಘಾತಕ್ಕೆ  ಒಳಗಾಗದೇ ಸರಾಗವಾಗಿ ಚಲಿಸಿ ತನ್ನ ಗಮ್ಯ ಸ್ಥಾನಕ್ಕೆ ತಲುಪಿದರೆ ಅದೇ ಸಾರ್ಥಕ ಬದುಕು.

ಕೊನೆಗೊಂದು ಮಾತು: ಯಾವುದೇ ಇಳಿಜಾರು, ಅಡ್ಡಾದಿಡ್ಡಿ ದಾರಿ ಇದ್ದರೂ ಬದುಕು ಸಾಗಬೇಕಷ್ಟೇ. ಏನಂತೀರಾ?


- ಗಾಯತ್ರಿ ಸುಂಕದ, ಬದಾಮಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top