ಮಂಗಳೂರು: ದೇರೆಬೈಲು ಕೊಂಚಾಡಿಯ ವಿದ್ಯಾ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ TALESSEMIA ಮತ್ತು SICKLE CELL ದಿವ್ಯಾಂಗರಿಗಾಗಿ ಸ್ವಪ್ರೇರಿತ ರಕ್ತ ದಾನ ಶಿಬಿರ ಭಾನುವಾರ ನಡೆಯಿತು.
TALASSEMIA ಮತ್ತು SICKLE CELL ಕಾಯಿಲೆ- ಎರಡು ತರದ ರಕ್ತಕ್ಕೆ ಸಂಬಂಧ ಪಟ್ಟ ದಿವ್ಯಾಂಗತೆ. ಈ ದಿವ್ಯಾಂಗತೆ ಇರುವವರಿಗೆ ನಿರಂತರ ರಕ್ತದ ಅವಶ್ಯಕತೆ ಇರುತ್ತದೆ. ಅಲ್ಲದೆ ಬೇರೆ ಬೇರೆ ತುರ್ತು ಸಂದರ್ಭಗಳಿಗೆ ರಕ್ತ ಬೇಕಾಗುವುದು ಎಲ್ಲರಿಗೂ ತಿಳಿದ ವಿಷಯ.
ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಜೈ ತುಲುನಾಡ್ (ರಿ.) ಮಂಗಳೂರು ಘಟಕ ಮತ್ತು ಸೇವಾ ಭಾರತಿ(ರಿ) ಮಂಗಳೂರು, ವೆನ್ಲಾಕ್ ಆಸ್ಪತ್ರೆಯ ಸಹಯೋಗದೊಂದಿಗೆ ಜುಲೈ 6ರಂದು ಬೆಳಿಗ್ಗೆ ಘಂಟೆ 9:30ರಿಂದ ಮಧ್ಯಾಹ್ನ 1:00 ಘಂಟೆ ವರೆಗೆ, ಕೊಂಚಾಡಿಯ ವಿದ್ಯಾ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಸ್ವಪ್ರೇರಿತ ರಕ್ತ ದಾನ ಶಿಬಿರವನ್ನು ಏರ್ಪಡಿಸಿತ್ತು.
ಸುಮಾರು 70 ಕ್ಕಿಂತ ಅಧಿಕ ಸಂಖ್ಯೆಯಲ್ಲಿ ದೇಶಪ್ರೇಮಿ ಸಮಾಜ ಬಾಂಧವರು ಸ್ವಯಂಪ್ರೇರಿತರಾಗಿ ನೋಂದಣಿ ಮಾಡಿಸಿ ಕಾರ್ಯಕ್ರಮ ಯಶಸ್ಸು ಮಾಡಿದರು. ಅಲ್ಲದೆ 100ಕ್ಕೂ ಮಿಕ್ಕಿ ಹಿತೈಷಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಸೇವಭಾರತಿ ಮಂಗಳೂರು (ರಿ) ಇದರ ವಿಶ್ವಸ್ಥರಾದ ಹಿರಿಯ ಸಮಾಜ ಸೇವಕ ವಿನೋದ್ ಶೆಣೈ, ಸಕ್ಷಮದ ಜಿಲ್ಲಾಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ, ಜಿಲ್ಲಾ ಕಾರ್ಯದರ್ಶಿ ಹರೀಶ್ ಪ್ರಭು, ಜೈ ತುಲುನಾಡು ಸಂಘದ ಅಧ್ಯಕ್ಷ ಮನೀಶ್, ಆಶಾ ಜ್ಯೋತಿ ಮಂಗಳೂರು ಅಧ್ಯಕ್ಷೆ ಗೀತಾ ಲಕ್ಷ್ಮೀಶ, ವೆನ್ಲಾಕ್ ಆಸ್ಪತ್ರೆಯ ರಕ್ತ ಬ್ಯಾಂಕಿನ ಮುಖ್ಯಸ್ಥ ಅಶೋಕ್ ಮತ್ತು ಸುಪ್ರೀಮ್ ಮೋಟಾರ್ GM ಗುರುಪ್ರಸಾದ್ ಅವರು ಸೇರಿ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.
ಅಶೋಕ್ ಅವರು ತಲಸ್ಸೇಮಿಯ ಮತ್ತು sickle cell ದಿವ್ಯಾಂಗತೆ ಮತ್ತು ರಕ್ತದ ಅಗತ್ಯತೆ ಬಗ್ಗೆ ತಿಳಿಹೇಳಿದರು. ಮೊದಲಿಗನಾಗಿ ರಕ್ತದಾನ ಮಾಡಿದ ವಿಷ್ಣುವರ್ಧನ್ ಯುವಕ ಸಂಘದ ಅಕ್ಬರ್ ಕೊಂಚಾಡಿಯವರು ಎಲ್ಲಾ ಆರೋಗ್ಯವಂತ ಸಮಾಜ ಬಾಂಧವರು ಮೂರು ತಿಂಗಳಿಗೊಮ್ಮೆ ರಕ್ತ ದಾನ ಮಾಡಿ ಜೀವ ರಕ್ಷಕರಾಗಬೇಕು ಎಂದು ಶುಭ ನುಡಿದರು.
ಜೈ ತುಲುನಾಡು(ರಿ) ಸಂಘಟನೆಯ ಕೇಂದ್ರ ಸಮಿತಿ ಅಧ್ಯಕ್ಷ ಉದಯ್ ಪೂಂಜಾ ತಾರಿಪಾಡಿ ಗುತ್ತು ಎಲ್ಲ ಯುವಕರಿಗೂ ಹುರಿತುಂಬಿಸುತ್ತಾ ಕೊನೆಯ ತನಕ ಇದ್ದು ಕಾರ್ಯಕ್ರಮದ ಯಶಸ್ಸಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದರು.
ವೆನ್ಲಾಕ್ ಆಸ್ಪತ್ರೆಯ ಅಶೋಕ್ ಅವರು ಸಮಾಜದ ಕೊಡುಗೆಗಾಗಿ ಪ್ರತಿಯೊಬ್ಬರನ್ನೂ ಶ್ಲಾಘಿಸಿದರು. ವಿನೋದ್ ಶೆಣೈ ಅವರು ತಮ್ಮ ರಕ್ತದಾನ ಶಿಬಿರಗಳ ಸುದೀರ್ಘ ಅನುಭವವನ್ನು ಇಂದಿನ ಯುವಕರಿಗೆ ಹಂಚಿದರು.
ಜೈ ತುಳುನಾಡ್ ಸಂಘಟನೆಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನದಲ್ಲಿ ಭಾಗವಹಿಸಿದ್ದರು. ಮನೀಷ್, ಜೈ ತುಲುನಾಡ್ (ರಿ.) ಮಂಗಳೂರು ಘಟಕದ ಅಧ್ಯಕ್ಷರು, ಅಶ್ವಥ್ ತುಳುವೆ ಜೈ ತುಲುನಾಡ್ (ರಿ.) ಮಾಜಿ ಅಧ್ಯಕ್ಷರು ಮತ್ತು ಸಂಘಟನೆಯ ಸದಸ್ಯರು, ರೋಷನ್ ರೋನಾಲ್ಡ್ ತುಳುಪರ ಹೋರಾಟಗಾರರು, ಅಲ್ಲದೆ ಸ್ಥಳೀಯ ಕಾರ್ಪೊರೇಟರ್ ರಂಜಿನಿ ಕೋಟ್ಯಾನ್, ಸಮಾಜ ಸೇವಕಿ ಜ್ಯೋತಿ, ರಾಘವೇಂದ್ರ ಉಡುಪ, ಜಿತೇಶ್, ನಾರಾಯಣ ಕಂಜರ್ಪಣೆ, ಭಾಸ್ಕರ್ ಸಾಲಿಯಾನ್, ಮಾಂಡೋವಿ ಮೋಟರ್ಸ್ AGM ಅಶೋಕ್ ರಾವ್ ಮತ್ತು ಇತರೆ ಸಮಾಜ ಗಣ್ಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಸಕ್ಷಮದ ಖಜಾಂಜಿ ಸತೀಶ್ ರಾವ್, ಮತ್ತು ಜೊತೆ ಕಾರ್ಯದರ್ಶಿ ಭಾಸ್ಕರ್ ಹೊಸಮನೆ ಬೇಕಾದ ವ್ಯವಸ್ಥೆ ಮತ್ತು ಮಾರ್ಗದರ್ಶನ ಮಾಡಿದರು. ವಿಕಾಸಂ ಸೇವಾ ಫೌಂಡೇಶನ್, ಬಂಟ್ವಾಳದ ಆಡಳಿತ ನಿರ್ದೇಶಕ ಗಣೇಶ್ ಭಟ್ ವಾರಣಾಸಿಯವರು ಸಕುಟುಂಬಸ್ಥರಾಗಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಕೊನೆಯಲ್ಲಿ ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ರಾಜಶೇಖರ ಭಟ್ ಕಾಕುಂಜೆಯವರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲಾ ದೇಶಪ್ರೇಮಿ ಸಮಾಜ ಬಂಧುಗಳಿಗೆ ಧನ್ಯವಾದ ಸಮರ್ಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ