ಮಂಗಳೂರು ವಿವಿ 6ನೇ ಸೆಮಿಸ್ಟರ್ ಪದವಿ ಫಲಿತಾಂಶ ಪ್ರಕಟ

Upayuktha
0


ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯವು ಜೂನ್ ಜುಲೈ 2025 ರಲ್ಲಿ ಎಲ್ಲಾ ಪದವಿ ಕಾರ್ಯಕ್ರಮಗಳ ದ್ವಿತೀಯ ಚತುರ್ಥ ಮತ್ತು ಆರನೇ ಸೆಮಿಸ್ಟರ್ ನ ಪರೀಕ್ಷೆಗಳು ಇತ್ತೀಚೆಗೆ ಮುಗಿದಿದ್ದು, ಈ ಪರೀಕ್ಷೆಗಳ ವಿವಿದ ವಿಷಯಗಳ ಮೌಲ್ಯಮಾಪನ ಕಾರ್ಯವು ಜು.2 ರಂದು ಆರಂಭಗೊಂಡು ನಾಲ್ಕು ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯ ಮಾಪನ ಕಾರ್ಯವು ನಡೆಯುತ್ತಿದೆ. ಪದವಿಯ ಆರನೇ ಸೆಮಿಸ್ಟರ್ ನ ಮೌಲ್ಯಮಾಪನ ಕಾರ್ಯವು ಜು.19 ರಂದು ಪೂರ್ಣಗೊಂಡಿದ್ದು‌ ವಿದ್ಯಾರ್ಥಿಗಳಿಗೆ ಮುಂದಿನ ಉನ್ನತ ವ್ಯಾಸಂಗಕ್ಕಾಗಿ ಹಾಗೂ ಉದ್ಯೋಗದ ಹಿತದೃಷ್ಟಿಯಿಂದ ಮೌಲ್ಯಮಾಪನ ನಡೆದ ಮೂರೇ ದಿನಗಳಲ್ಲಿ 15,534 ವಿದ್ಯಾರ್ಥಿಗಳ ಫಲಿತಾಂಶವನ್ನು ಜು.22 ರಂದು ಮಂಗಳವಾರ ಮಂಗಳೂರು ವಿವಿಯ UUCMS (ಯುಯುಸಿಎಮ್ ಎಸ್) ನ ಅಧಿಕೃತ ವೆಬ್ಸೈಟ್ www.uucms.karnataka.gov.in ನಲ್ಲಿ ಪ್ರಕಟಿಸಿದೆ.


ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್ .ಧರ್ಮ ಅವರು ಮಂಗಳೂರು ವಿವಿ ಸಿಂಡಿಕೇಟ್ ಸಭಾಂಗಣದಲ್ಲಿ ಫಲಿತಾಂಶದ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದರು.


ಈ ಸಂದರ್ಭದಲ್ಲಿ ಮಂಗಳೂರು ವಿವಿ ಕುಲಸಚಿವ ಕೆ‌.ರಾಜು ಮೊಗವೀರ, ಪರೀಕ್ಷಾಂಗ ಕುಲಸಚಿವ ಪ್ರೊ. ದೇವೇಂದ್ರಪ್ಪ ಹೆಚ್, ಹಣಕಾಸು ಅಧಿಕಾರಿ ಪ್ರೊ.ವೈ. ಸಂಗಪ್ಪ, ಹಾಗೂ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.


ಮೌಲ್ಯಮಾಪನ ಪೂರ್ಣಗೊಳಿಸಿದ ಬಿಎಸ್ಸಿ, ಬಿಕಾಂ, ಬಿಎಸ್ ಡಬ್ಲೂ, ಬಿಸಿಎ, ಬಿಬಿಎ, ಬಿಎಸ್ಸಿ (ಎಫ್‌ಎನ್‌ಡಿ) ಬಿಎಸ್ಸಿ (ಎನ್ಯಿಮೇಶನ್ ಮತ್ತು ವಿಜ್ಯುವಲ್ ಇಫೆಕ್ಟ್, ಬಿಎಸ್ಸಿ (ಫುಡ್ ಟೆಕ್ನಾಲಜಿ), ಬಿಎಸ್ಸಿ (ಹೋಮ್ ಸೈಯನ್ಸ್), ಬಿ.ಎ (ಎಚ್ ಆರ್ ಡಿ) ಬಿಎಸ್ಸಿ (ಫ್ಯಾಶನ್ ಡಿಸೈನ್), ಬಿಎಸ್ಸಿ(ಐಡಿ&ಡಿ), ಬಿಹೆಚ್ ಎಂ, ಬಿವಿಎ ಕಾರ್ಯಕ್ರಮಗಳ 6 ನೆ ಸೆಮಿಸ್ಟರ್ ನ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಲಾಗಿದ್ದು, ಉಳಿದಂತೆ ಎಲ್ಲಾ ಪದವಿಗಳ ದ್ವಿತೀಯ ಮತ್ತು ಚತುರ್ಥ ಸೆಮಿಸ್ಟರ್ ಗಳ ಹಾಗೂ ಬಿಎಚ್ ಎಂ 8ನೇ ಸೆಮಿಸ್ಟರ್, ಬಿಎ (ಎಸ್ ಎಲ್ ಪಿ), ಹಾಗೂ ಎನ್ಇಪಿ ಅಲ್ಲದ (non NEP) ಕಾರ್ಯಕ್ರಮಗಳ ಪುನರಾವರ್ತಿತ ವಿದ್ಯಾರ್ಥಿಗಳ ಫಲಿತಾಂಶವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಪರೀಕ್ಷಾಂಗ ಕುಲಸಚಿವ ಪ್ರೊ. ದೇವೇಂದ್ರಪ್ಪ ಹೆಚ್ ಅವರು ತಿಳಿಸಿದ್ದಾರೆ.


ಮಂಗಳೂರು ವಿವಿಯು ಈ ಬಾರಿ ಮೌಲ್ಯಮಾಪನ ಕೇಂದ್ರದಲ್ಲಿಯೇ ಅಂಕತಃಖ್ತೀಕರಣ ದಾಖಲಿಸುವ ಪ್ರಕ್ರಿಯೆಯನ್ನು ಆನ್ ಲೈನ್ ವ್ಯವಸ್ಥೆಯ ಮೂಲಕ ಸಂಪೂರ್ಣವಾಗಿ ಗಣಕೀಕರಣಗೊಳಿಸಿದ್ದರಿಂದ ಮೌಲ್ಯಮಾಪನ ನಡೆಯುತ್ತಿರುವಾಗಲೇ ಫಲಿತಾಂಶವನ್ನು ಪ್ರಕಟಿಸಲು ಸಾಧ್ಯವಾಗಿದೆ. ಇದಕ್ಕೆ ಪೂರಕವಾಗಿ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಂಯೋಜಕರು ಪರೀಕ್ಷಾ ಮಂಡಳಿ ಅಧ್ಯಕ್ಷರು, ಮೌಲ್ಯಮಾಪಕರು, ಶಿಕ್ಷಕೇತರ ಸಿಬ್ಬಂದಿಗಳ ಪೂರ್ಣಪ್ರಮಾಣದ ಸಹಕಾರದಿಂದ ನಿಗದಿತ ಸಮಯದಲ್ಲಿ  ಮೌಲ್ಯಮಾಪನವನ್ನು ಪೂರ್ಣಗೊಳಿಸಿ ಅತ್ಯಂತ ಕಡಿಮೆ ಸಮಯದಲ್ಲಿ ಫಲಿತಾಂಶವನ್ನು ಪ್ರಕಟಿಸಲು ಸಾಧ್ಯವಾಗಿದೆ. ಪರೀಕ್ಷಾ ಫಲಿತಾಂಶಗಳಿಗೆ ಸಂಬಂಧಿಸಿ, ಮರುಮೌಲ್ಯಮಾಪನಕ್ಕೆ (ಉಳಿದ ಎಲ್ಲಾ ಫಲಿತಾಂಶ ಪ್ರಕಟವಾದ ಬಳಿಕ): ಅರ್ಜಿ ಆಹ್ವಾನಿಸಿ ಸದ್ಯದಲ್ಲಿಯೇ ವಿಶ್ವವಿದ್ಯಾಲಯದಿಂದ ಪ್ರಕಟಣೆ ಹೊರಡಿಸಲಾಗುವುದು. ಅರ್ಜಿ ಸಲ್ಲಿಸಲು  ಇಚ್ಚಿಸುವ ವಿದ್ಯಾರ್ಥಿಗಳು ನಿಗದಿತ ಅರ್ಜಿ ಶುಲ್ಕ ಪಾವತಿಸಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪರೀಕ್ಷಾಂಗ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top