ವಿಟ್ಲ: ಹವ್ಯಕ ಮಹಾಮಂಡಲ, ವಿದ್ಯಾರ್ಥಿ ವಾಹಿನಿ ಮತ್ತು ಯುವ ವಿಭಾಗದ ಸಹಯೋಗದಲ್ಲಿ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ವಿಶ್ವಾವಸು ಸಂವತ್ಸರದಲ್ಲಿ ಮರೆತುಹೋದ ಮನೆಮಾತನ್ನು ಮರಳಿ ನೆನಪಿಸುವ ಸ್ವಭಾಷಾ ಚಾತುರ್ಮಾಸ್ಯದ ಅಂಗವಾಗಿ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ಮಂಗಳೂರು ಹೋಬಳಿ ಮಟ್ಟದ ನುಡಿದೇಣಿಗೆ ಹಬ್ಬ ಜು.20ರಂದು ಬೆಳಗ್ಗೆ ಗಂಟೆ 10.30ರಿಂದ ಸಂಜೆ ಗಂಟೆ 3.30ರ ವರೆಗೆ ನಡೆಯಲಿದೆ.
ಗರಿಷ್ಠ ಐದು ನಿಮಿಷಗಳಲ್ಲಿ ಸಾಹಿತ್ಯ, ಕವಿತೆ, ಕಥೆ, ಪ್ರಬಂಧ, ಭಾಷಣ, ಕಿರುಪ್ರಹಸನ, ಸಂಗೀತ, ಕಾವ್ಯವಾಚನ ಇತ್ಯಾದಿ ಯಾವುದೇ ರೂಪದ ಸಾಹಿತ್ಯ ಕೃತಿಗಳನ್ನು ಪ್ರಸ್ತುತ ಪಡಿಸಬಹುದು. ಇದು ಸ್ಪರ್ಧೆಯಲ್ಲ. ನಾವು ನಮ್ಮ ಭಾಷಾ ಪ್ರೇಮವನ್ನು ಪ್ರಕಟಪಡಿಸುವ ಒಂದು ಹಬ್ಬ ಎಂದು ಪ್ರಕಟನೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ