ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ತಾಲೂಕು ಆರೋಗ್ಯ ಅಧಿಕಾರಿ ಕಚೇರಿ ಮಂಗಳೂರು. ಲಿಂಕ್ ವ್ಯಸನ ಮುಕ್ತ ಮತ್ತು ಪುನರ್ವಸತಿ ಕೇಂದ್ರ,ಬಜಾಲ್ ಮಂಗಳೂರು ಹಾಗೂ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ.ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ “ಅಂತರಾಷ್ಟ್ರೀಯ ಮಾದಕ ವ್ಯಸನ ಮತ್ತುಅಕ್ರಮ ಸಾಗಾಣಿಕೆ ವಿರೋಧಿ ದಿನ-2025” ಅನ್ನು ದಿನಾಂಕ 9-07-2025ರಂದು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಎರಿಕ್ ಮಥಾಯಿಸ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಜೈಬುನ್ನಿಸಾ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದ.ಕ ಮಂಗಳೂರು ಇವರು ಕಾರ್ಯಕ್ರಮ ಉದ್ಘಾಟಿಸಿದರು. ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ಕುಲಸಚಿವರಾದ ಡಾ. ಆಲ್ವಿನ್ ಡೇಸಾ, ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೈಬುನ್ನಿಸಾರವರು ಮಾದಕದ್ರವ್ಯ ವ್ಯಸನ ಮತ್ತು ಅದರ ಅಕ್ರಮ ಸಾಗಾಣಿಕೆಯ ಬಗ್ಗೆ ತಿಳಿಸಿದರು. ಮಾದಕ ದ್ರವ್ಯದ ವ್ಯಸನಿಗಳ ಕುರಿತು ಮಾತನಾಡಿದ ಅವರು ಅದರಿಂದ ಆಗುವ ಅಪರಾಧಗಳು ಮತ್ತು ಯುವಜನತೆ ಯಾವ ರೀತಿಯ ಚಟಗಳಿಗೆ ಬಲಿಯಾಗುತ್ತಾರೆ ಎಂದು ತಿಳಿಸಿದರು.
ಅತಿಯಾದ ಆತಂಕ ಅಥವಾ ಒತ್ತಡದ ಸಂದರ್ಭದಲ್ಲಿ ಯುವಜನಾಂಗ ಮಾದಕದ್ರವ್ಯಗಳಿಗೆ ಮೊರೆ ಹೋಗುವ ಬಗ್ಗೆ ತಿಳಿಸಿದರು. ಅಲ್ಲದೆ ಒಂದುಬಾರಿ ಪ್ರಯೋಗ ಮಾಡಿನೋಡುವ ಸಲುವಾಗಿಯೂ ಕೂಡ ಯುವಕ-ಯುವತಿಯರು ಮಾದಕದ್ರವ್ಯಗಳ ಮೊರೆಹೋಗುತ್ತಾರೆ. ಇದನ್ನು ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಡಾ|| ಜೋನಾಥನ್, ಅಸಿಸ್ಟೆಂಟ್ ಪ್ರೊಫೆಸರ್, ಮನೋವೈದ್ಯಕೀಯ ವಿಭಾಗ, ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜು, ಡಾ. ಜಗದೀಶ್, ಆರ್.ಎಂ.ಒ., ಲೇಡಿಗೋಶನ್ ಆಸ್ಪತ್ರೆ, ಮಂಗಳೂರು, ಡಾ|| ದುರ್ಗಾಪ್ರಸಾದ್ ಎಂ. ಆರ್., ವೈದ್ಯಕೀಯ ಅಧೀಕ್ಷಕರು, ಸರ್ಕಾರಿ ಲೇಡಿಗೋಷನ್ ಆಸ್ಪತ್ರೆ, ಮಂಗಳೂರು., ಡಾ|| ಸತೀಶ್ ರಾವ್, ಅಧ್ಯಕ್ಷರು. ಲಿಂಕ್ ವಸನ ಮುಕ್ತ ಮತ್ತು ಪುನರ್ವಸತಿ ಕೇಂದ್ರ, ಬಜಾಲ್, ಮಂಗಳೂರು, ಡಾ|| ಪ್ರಜಕ್ತ ವಿ ರಾವ್ ಮನೋರೋಗ ತಜ್ಞರು ಜಿಲ್ಲಾ ಮಾನಸಿಕ ಆರೊಗ್ಯ ಕಾರ್ಯಕ್ರಮ, ಮಂಗಳೂರು, ಡಾ. ಸುಜಯ್ ಭಂಡಾರಿ, ತಾಲೂಕು ಆರೋಗ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗ, ಮಂಗಳೂರು, ಜ್ಯೋತಿ ಕೆ. ಉಳೆಪಾಡಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದ.ಕ. ಮಂಗಳೂರು, ಲಿಡಿಯಾ ಲೋಬೋ, ಲಿಂಕ್ ವ್ಯಸನ ಮುಕ್ತ ಮತ್ತು ಪುನರ್ವಸತಿ ಕೇಂದ್ರ,ಬಜಾಲ್, ಮಂಗಳೂರು ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ. ಸುದರ್ಶನ್ ಸಿ.ಎಂ., ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಹಾಗೂ ಸಿಬ್ಬಂದಿಯವರು ಮತ್ತು ಲಿಂಕ್ ವ್ಯಸನ ಮುಕ್ತ ಮತ್ತು ಪುನರ್ವಸತಿ ಕೇಂದ್ರ, ಬಜಾಲ್, ಮಂಗಳೂರು ಇದರ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡಾ|| ಸತೀಶ್ ರಾವ್ ಅವರು ಮಾದಕದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಾಣಿಕೆಯ ವಿರುದ್ಧ ಪ್ರತಿಜ್ಞಾವಿಧಿಯನ್ನು ನೆರವೇರಿಸಿದರು. ಜ್ಯೋತಿ ಕೆ. ಉಳೆಪಾಡಿ ಕಾರ್ಯಕ್ರಮ ನಿರೂಪಿಸಿದರು. ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ, ಕ್ಯಾರೆಲ್ ಶರಲ್ ಪಿರೇರಾ, ಸ್ವಾಗತಿಸಿದರು. ಡಾ. ಸುಜಯ್ ಭಂಡಾರಿ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ