ಗಾಂಧೀ ಅನುಯಾಯಿ ಎಲ್.ನರಸಿಂಹಯ್ಯ ಅವರಿಗೆ ಪ್ರೊ. ಎಂ. ಕರೀಮುದ್ದೀನ್ ಪ್ರಶಸ್ತಿ

Chandrashekhara Kulamarva
0



ಮಂಡ್ಯ: ಪ್ರಖರ ಗಾಂಧೀ ಚಿಂತಕರೂ, ಶಿಕ್ಷಣ ವೇತ್ತರಾದ ತುಮಕೂರಿನ ಎಲ್. ನರಸಿಂಹಯ್ಯ ತೊಂಡೋಟಿ ಅವರು ಮಂಡ್ಯದ ಗಾಂಧೀ ಭವನದಲ್ಲಿ ಈ ಸಾಲಿನ ಪ್ರೊ.ಎಂ.ಕರೀ ಮುದ್ದೀನ್ ಸ್ಮಾರಕ ಗಾಂಧೀ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಅಭಿನಂದನಾ ನುಡಿಗಳನ್ನಾಡಿದ ಕರ್ನಾಟಕ ಸರ್ವೋದಯ ಮಂಡಲದ ಅಧ್ಯಕ್ಷ ಡಾ ಎಚ್ ಎಸ್ ಸುರೇಶ್ ಇತ್ತೀಚೆಗೆ ತಮ್ಮ 91 ನೆ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಎಲ್ಲೆನ್ ಅವರು ಕನಕಪುರ ತಾಲ್ಲೂಕು ಹಾರೋಹಳ್ಳಿ ಗ್ರಾಮಾಂತರ ಪ್ರೌಢ ಶಾಲೆಯಲ್ಲಿ ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಆ ಶಾಲೆಗೆ ಗಾಂಧೀ ಮೌಲ್ಯಗಳ ಚೌಕಟ್ಟು ಹಾಕಿದವರು.


ವಿವಿಧ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತುಮಕೂರು ಮತ್ತು ರಾಮನಗರ  ಜಿಲ್ಲೆಗಳ  ಶಾಲಾ ಮಕ್ಕಳಿಗೆ ಗಾಂಧೀ ತತ್ವಗಳನ್ನು ಪರಿಚಯಿಸಿದವರು. ಅವರು ರಚಿಸಿದ ಕಥನ ಕವನ  'ಗಾಂಧೀ ಗೋವಿನ ಕಥೆ 'ಮಕ್ಕಳಿಗೆ ಪ್ರಿಯವಾದ ಪುಸ್ತಿಕೆ.ಪ್ರೊ. ಎಂ. ಕರೀಮುದ್ದಿನ್  ಸಂಸ್ಮರಣೆಯಲ್ಲಿ  ದ್ವಿತೀಯ ವರ್ಷದ ಈ ಗಾಂಧೀ ಸೇವಾ ಪ್ರಶಸ್ತಿಯನ್ನು  ನೀಡಿ ಗೌರವಿಸಿರುವುದು ಅತ್ಯಂತ ಸಮುಚಿತ ಎಂದು ಅಭಿಪ್ರಾಯಪಟ್ಟರು.


ಮಂಡ್ಯದ ಖ್ಯಾತ ವೈದ್ಯ ಡಾ ಬಿ ಸುಜಯ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಯಪ್ರಕಾಶ್ ಗೌಡ, ಸರ್ವೋದಯ ಮಂಡಲದ ಅಧ್ಯಕ್ಷ ಪ್ರೊ. ನಾಗಾನಂದ, ಪಿಇಟಿ ಸಮೂಹ ಸಂಸ್ಥೆ ಅಧ್ಯಕ್ಷ ಡಾ. ರಾಮಲಿಂಗಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top