ಬೆಂಗಳೂರು: ಶ್ರೀ ಮದ್ ವಾದಿರಾಜರ “ಶ್ರೀ ರುಕ್ಮಿಣೀಶ ವಿಜಯ” ಮಹಾಕಾವ್ಯವನ್ನು ಸಂಸ್ಕೃತದಿಂದ ಕನ್ನಡಕ್ಕೆ ಮೂಲ ಸಾಹಿತ್ಯದ ವರ್ಣನಾ ವೈಖರಿಗೆ ಚ್ಯುತಿ ಬಾರದಂತೆ ಅನುವಾದಿಸಿ, ವ್ಯಾಸ ಸಾಹಿತ್ಯ ಹಾಗೂ ದಾಸ ಸಾಹಿತ್ಯ ಎರಡೂ ಕ್ಷೇತ್ರಗಳಲ್ಲಿ ಕೃತಿಗಳನ್ನು ರಚಿಸಿರುವ ರಾಯಚೂರಿನ ನಿವಾಸಿ ಶ್ರೀಮತಿ ಶೋಭಾ ಮೂರ್ತಿ ಅವರಿಗೆ ಈ ವರ್ಷದ “ಮೈತ್ರೇಯಿ ಜೀವಮಾನ ಸಾಧನೆ ಪ್ರಶಸ್ತಿ” ನೀಡಿ, ಗೌರವಿಸಲಾಗುತ್ತಿದೆ.
ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ಈ ಪ್ರಶಸ್ತಿಯನ್ನು ನೀಡುತ್ತಿದ್ದು, ತನ್ನ ಸಂಸ್ಥಾಪನಾ ದಿನದ ಅಂಗವಾಗಿ ಜುಲೈ 12ರಂದು ಶೋಭಾಮೂರ್ತಿ ಅವರಿಗೆ ಅವರ ನಿವಾಸದಲ್ಲಿ ಪ್ರದಾನ ಮಾಡಲಾಯಿತು ಎಂದು ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.
ನ್ಯಾಯಮೂರ್ತಿಗಳ ಪುತ್ರಿಯಾಗಿದ್ದು, ಧಾರ್ಮಿಕ ವಾತಾವರಣದಲ್ಲಿ ಬೆಳೆದ ಶೋಭಾಮೂರ್ತಿ ಅವರು ಸೋದೆ ಮಠದ ಸಂಪರ್ಕಕ್ಕೆ ಬಂದು ಶ್ರೀ ಗುರು ವಾದಿರಾಜರಲ್ಲಿ ಗುರುಭಕ್ತಿ ಮತ್ತು ಅವರ ಗ್ರಂಥಗಳ ಅಧ್ಯಯನದಲ್ಲಿ ಆಸಕ್ತಿ ಬೆಳೆಸಿಕೊಂಡರು. ಸಂಸ್ಕೃತದಲ್ಲಿ ಆಳವಾದ ಅಧ್ಯಯನ ಮತ್ತು ಅಧ್ಯಾಪನ ನಡೆಸಿ ಪಕ್ವವಾದ ಅನುಭವವನ್ನು ಪಡೆದಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ