ಮಂಗಳೂರು: ಜ್ಞಾನ ಧಾರೆ ಎರೆಯುವ ಗುರುವಿನ ಸ್ಮರಣೆಯಿಂದ ಬದುಕಿಗೆ ಶ್ರೇಯಸ್ಸಾಗುತ್ತದೆ ಎಂದು ಥಿಯೊಸೊಫಿಕಲ್ ಸೊಸೈಟಿ ಮಂಗಳೂರು ಅಧ್ಯಕ್ಷ ವಿದ್ವಾನ್ ತುಪ್ಪೆಕಲ್ಲು ನರಸಿಂಹ ಶೆಟ್ಟಿ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಮಂಗಳೂರು ತಾಲೂಕು ಸಮಿತಿ ಮತ್ತು ಥಿಯೊಸೊಫಿಕಲ್ ಸೊಸೈಟಿ ಮಂಗಳೂರು ವತಿಯಿಂದ
ಥಿಯೊಸೊಫಿಕಲ್ ಸೊಸೈಟಿಯ ಬೆಸೆಂಟ್ ಮಂದಿರದಲ್ಲಿ ಜರಗಿದ ವ್ಯಾಸ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗುರು ಅಂಧಕಾರವನ್ನು ಹೊಡೆದೋಡಿಸಿ, ಸುಜ್ಞಾನದ ಸುಗಂಧವನ್ನು ಎಲ್ಲೆಡೆ ಪಸರಿಸುತ್ತಾರೆ. ವೇದವ್ಯಾಸರು ವೇದಗಳನ್ನು ವಿಂಗಡಿಸಿ ಅದರ ಸಾರವನ್ನು ಎಲ್ಲರಿಗೂ ಉಣಬಡಿಸಿದ ಮಹಾನ್ ಜ್ಞಾನಿಗಳು ಎಂದು ಅವರು ಹೇಳಿದರು.
ಅಭಾಸಾಪ ದ.ಕ. ಜಿಲ್ಲಾಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದಿವಾಣ ಕೇಶವ ಭಟ್ಟ ಮುಖ್ಯ ಅತಿಥಿಯಾಗಿದ್ದರು. ಅಭಾಸಾಪ ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷೆ ಡಾ. ಮೀನಾಕ್ಷಿ ರಾಮಚಂದ್ರ ಸ್ವಾಗತಿಸಿ, ಶೈಲಜಾ ಪುದುಕೋಳಿ ವಂದಿಸಿದರು. ಯಶೋದಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ