ಆಂಧ್ರಪ್ರದೇಶದ ವಿದ್ವಾಂಸರಾದ ರಾಳ್ಲಪಲ್ಲಿ ಕೃಷ್ಣ ಶರ್ಮಾ ಅವರು ಬಹುಭಾಷಾತಜ್ಞರಾಗಿ, ಸಂಶೋಧಕರಾಗಿ, ಸಂಗೀತಗಾರರಾಗಿ, ಮತ್ತು ಪ್ರಾಧ್ಯಾಪಕರಾಗಿ ಹೆಸರುಗಳಿಸಿದವರು. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸಣ್ಣ ರಾಳ್ಲಪಲ್ಲಿ ಗ್ರಾಮದಲ್ಲಿ 23-1-1893 ರಂದು ಜನಿಸಿದರು.
ವಿದ್ಯಾಭ್ಯಾಸದ ನಿಮಿತ್ತ ಮೈಸೂರಿನಲ್ಲಿ ವ್ಯಾಕರಣ, ಅಲಂಕಾರ ಶಾಸ್ತ್ರವನ್ನು ಅಧ್ಯಯನ ಮಾಡಿದರು. ಕರಗಿರಿರಾಯರು, ಚಿಕ್ಕ ರಾಮರಾಯರು ಮತ್ತು ಬಿಡಾರಂ ಕೃಷ್ಣಪ್ಪ ಅವರ ಮಾರ್ಗದರ್ಶನದಲ್ಲಿ ಸಂಗೀತವನ್ನು ಅತ್ಯುತ್ತಮ ಮಟ್ಟದಲ್ಲಿ ಕಲಿತರು. ಮೈಸೂರು ವಿಶ್ವವಿದ್ಯಾಲಯದ ತೆಲುಗು ಪ್ರಾಧ್ಯಾಪಕ ವೃತ್ತಿ ಆರಂಭಿಸಿ, ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿದರು. ಕನಾ೯ಟಕ ಮತ್ತು ಆಂಧ್ರದಲ್ಲೂ ಎಲ್ಲಾ ಜನರು ಸಹ ಇವರ ಸಾಧನೆ ಕಂಡು ಗೌರವಿಸುತ್ತಿದ್ದರು.
ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಇವರ ಹಿರಿಯ ಪುತ್ರ ಆರ್ ಗ ಫಣಿಶಾಯಿ ಪ್ರಾಧ್ಯಾಪಕ ಮತ್ತು ಪ್ರಿನ್ಸಿಪಾಲ್ ಆಗಿದ್ದುದು ವಿಶೇಷ. ರಾಳ್ಲಪಲ್ಲಿ ಅನಂತ ಕೃಷ್ಣ ಶರ್ಮ ಅವರು ಎರಡು ಅಧ್ಭುತ ಗ್ರಂಥಗಳನ್ನು ಬರೆದ ಮಹನೀಯರು. ಗಾನಕಲೆ ಮತ್ತು ಸಾಹಿತ್ಯ ಮತ್ತು ಜೀವನಕಲೆ ಗ್ರಂಥಗಳು ಪ್ರಮುಖವಾದವು. ಸಂಸೃತದಲ್ಲಿ ಮಹಿಶೂರ ರಾಜಾಭ್ಯುದಯಾದರ್ಶ ಎಂಬ ಚಂಪೂ ಕಾವ್ಯವನ್ನು ಸಹ ಬರೆದರು. ಇದಕ್ಕೆ ಮೈಸೂರು ಸಂಸ್ಥಾನದಿಂದ ಬಹುಮಾನ ಲಭಿಸಿತು. ಆಂಧ್ರಪ್ರದೇಶದ ಪರಿಶೋಧನಾಲಯದ ರೀಡರ್ ಆಗಿದ್ದು, ಅಣ್ಣಮಾಚಾರ್ಯರ ಆಧ್ಯಾತ್ಮಿಕ ಮತ್ತು ಶೃಂಗಾರ ಸಂಕೀತ೯ನಗಳನ್ನು ಸಂಪಾದಿಸಿ, ಹೊರತಂದರು. ಅನಂತ ಭಾರತಿ ಎಂಬ ಸಂಸೃತ ರಚನೆಗಳ ಸಂಕಲನ. ತೆಲುಗಿನಲ್ಲಿ ಮೀರಾಬಾಯಿ ಖಂಡಕಾವ್ಯ, ತಾರಾದೇವಿ ಖಂಡಕಾವ್ಯ, ವೇಮನ, ನಾಟಕೋಪನ್ಯಾಸಾಲು, ಪ್ರಾಕೃತದಿಂದ ಅನುವಾದಿತ ಶಾಲಿವಾಹನ ಗಾಥಾಸಪ್ತಶತಿ ಸಾರಮು, ಸಾರಸ್ವತ ಲೋಕ, ಜಾಯಪಸೇನಾನೀ ನೃತ್ಯ ರತ್ನಾವಳೀ, ಸುಂದರ ಪಾಂಡ್ಯರ ಮತ್ತು ಸಂಸೃತದಿಂದ ಅನುವಾದಿತವಾದ ಆರ್ಯ ಮುಂತಾದವು ಇವರ ಪ್ರಮುಖ ಗ್ರಂಥಗಳು.
ಆಕಾಶವಾಣಿ ಎಂಬ ಪದ ಸೂಚಿಸಿದ ಕೀರ್ತಿಗೆ ಇವರು ಭಾಜನ ಎಂದು ಪ್ರೊಫೆಸರ್ ಜಿ ವೆಂಕಟಸುಬ್ಬಯ್ಯನವರು ಸ್ಮರಿಸಿದ್ದಾರೆ.
ರಾಳ್ಲಪಳ್ಳಿ ಅನಂತಕೃಷ್ಣಶರ್ಮ ಅವರು ಸಂಗೀತ ಕ್ಷೇತ್ರದಲ್ಲಿ ಅನೇಕ ವಿದ್ಯಾರ್ಥಿಗಳನ್ನು ತಯಾರು ಮಾಡಿದರು. ಬಹಳಷ್ಟು ವಿದ್ಯಾರ್ಥಿಗಳು ಇವರ ಮನೆಯಲ್ಲಿ ವಾಸ್ತವ್ಯ ಮಾಡುತ್ತಿದ್ದರು. ತಾತಾಚಾರ್ಯರು ಇವರ ಪ್ರಮುಖ ಶಿಷ್ಯರಲ್ಲೊಬ್ಬರು. ರಾಳ್ಲಪಲ್ಲಿ ಅನಂತಕೃಷ್ಣಶರ್ಮ ಅವರು ತುಂಬಾ ವಿನಯವಂತರು ಮತ್ತು ನಿರ್ಲಿಪ್ತ ಜೀವಿಯಾಗಿದ್ದರು. ಒಮ್ಮೆ ಇವರಿಗೆ ತುಂಬಾ ಅಭಿಮಾನಿಯಾಗಿದ್ದ ಎನ್ ರಂಗನಾಥಶರ್ಮ ಅವರು ವೀ.ಸಿ ಅವರ ಹತ್ತಿರ ಹೋಗಿ ಮಾತನಾಡಿದಾಗ ರಾಳ್ಲಪಲ್ಲಿ ಅವರ ಪಾದಗಳಿಗೆ ಒಂದು ಸಲ ನಮಸ್ಕರಿಸಿದರೇ, ನಮ್ಮ ಆಯುಷ್ಯ ಹತ್ತು ವರ್ಷ ಹೆಚ್ಚುತ್ತದೆ ಎಂದು ಉದ್ಗರಿಸಿದರಂತೆ.
ರಾಳ್ಲಪಲ್ಲಿ ಅನಂತಕೃಷ್ಣಶರ್ಮ ಅವರು ಆಂಧ್ರ ಪ್ರದೇಶದ ಸಾಹಿತ್ಯ ಅಕಾಡೆಮಿ ಮತ್ತು ಸಂಗೀತ ನಾಟಕ ಅಕಾಡೆಮಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಗಾನಕಲಾಸಿಂಧು, ಗಾನಕಲಾ ಪ್ರಪೂರ್ಣ ಸಂಗೀತ ಕಲಾರತ್ನ, ರಾಜ್ಯ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಗೌರವ ಡಾಕ್ಟರೇಟ್ ಮತ್ತು ಅನೇಕ ಸನ್ಮಾನಗಳಿಗೆ ಭಾಜನರಾಗಿದ್ದಾರೆ.
11-3-1979 ರಂದು ತಿರುಪತಿಯಲ್ಲಿ ಟಿ ಟಿ ಡಿ ನೀಡಿದ ಸಂಗೀತ ಸಾಹಿತ್ಯ ಆಸ್ಥಾನ ಗೌರವ ಸ್ವೀಕರಿಸಿ, ಭಗವಂತನ ಪಾದಾರವಿಂದಕ್ಕೆ ಐಕ್ಯ ಆಗಿ, ವೈಕುಂಠವಾಸಿಯಾದರು. ತಿರುಪತಿಯಲ್ಲಿ ಇವರ ಸ್ಮರಣಾರ್ಥ ರಾಳ್ಲಪಲ್ಲಿ ಅನಂತಶರ್ಮ ಅವರ ಪುತ್ಥಳಿ ನಿಮಿ೯ಸಿ ಗೌರವವನ್ನು ಜನರು ಅರ್ಪಿಸಿ, ಧನ್ಯರಾಗಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ