ಸುರತ್ಕಲ್: ಮಾದಕ ದ್ರವ್ಯ ಸೇವನೆಯ ಚಟ ಹದಿಹರೆಯದ ಯುವ ಜನತೆಯಲ್ಲಿ ಹೆಚ್ಚಳವಾಗುತ್ತಿರು ವುದು ವಿಷಾದದ ವಿಚಾರ. ಇದರ ತಡೆಗಟ್ಟುವಿಕೆಯಲ್ಲಿ ಸಾಮಾಜಿಕ ಸೇವಾ ಸಂಸ್ಥೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಮನಃಶಾಸ್ತ್ರಜ್ಞ ಡಾ. ಮನು ಆನಂದ್ ಸುರತ್ಕಲ್ ನುಡಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಚಿತ್ರಾಪುರ ಕುಳಾಯಿಯ ಹಳೆ ವಿದ್ಯಾರ್ಥಿಸಂಘ ಮತ್ತು ಸುರತ್ಕಲ್ ರೋಟರಿ ಕ್ಲಬ್ ಇವುಗಳ ಸಹಯೋಗದಲ್ಲಿ ಕಾರ್ಗಿಲ್ ವಿಜಯ್ ದಿವಸದಂದು ಹಮ್ಮಿಕೊಂಡಿದ್ದ ಮಾದಕ ದ್ರವ್ಯ ಸೇವನೆ ಮುಕ್ತ ಸಮಾಜದ ನಿರ್ಮಾಣ ಅರಿವು ಅಭಿಯಾನದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಮಕ್ಕಳನ್ನು ಜಾಹಿರಾತುಗಳು ಹಾದಿ ತಪ್ಪಿಸುತ್ತಿದ್ದು, ಸೈನಿಕರು, ಶಿಕ್ಷಕರು, ಪೋಷಕರು, ಕಾರ್ಮಿಕ ಜನತೆ ನಮ್ಮ ಆದರ್ಶ ವ್ಯಕ್ತಿಗಳು ಎಂದರು.
ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಮಾತನಾಡಿ, ಕಾರ್ಗಿಲ್ ವಿಜಯ ದಿನದ ಪುಣ್ಯ ಪರ್ವದಲ್ಲಿ ಕಾರ್ಗಿಲ್ ವೀರರ ಬಲಿದಾನವು ಶಕ್ತ ಸಮಾಜ ನಿರ್ಮಾಣಕ್ಕೆ ತೊಡಗಿಸಿಕೊಳ್ಳುವ ಕಾರ್ಯಕ್ಕೆ ಪ್ರೇರಣೆ ನೀಡುತ್ತತದೆ ಎಂದರು.
ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಸ್ಥಿರ ಸಮಾಜಕ್ಕೆ ಸರ್ವರ ಕೊಡುಗೆ ಅಗತ್ಯ ಎಂದರು.
ಸುರತ್ಕಲ್ ರೋಟರಿ ಕ್ಲಬ್ ಕಾರ್ಯದರ್ಶಿ ರಾಮಮೋಹನ್ ವೈ, ಕೋಶಾಧಿಕಾರಿ ಮೋಹನ್ ರಾವ್ ಹೊಸಬೆಟ್ಟು, ಯುವ ನಿರ್ದೇಶಕ ಶ್ರೀಶ ಭಟ್, ಇಂಟರ್ಯಕ್ಟ್ ಸಂಯೋಜಕ ಶ್ರೀಧರ್ ಭಟ್ ಕುಳಾಯಿ, ಜಿಲ್ಲಾ ಯೋಜನಾ ನಿರ್ದೇಶಕ ಸತೀಶ್ ಸದಾನಂದ್, ನಿವೃತ್ತ ಶಿಕ್ಷಕಿ ಪುಷ್ಪಾ ಶ್ರೀನಿವಾಸ್ ರಾವ್, ಸೇವಾಕರ್ತ ಶ್ರೀನಿವಾಸ ರಾವ್, ಹಿರಿಯ ಶಿಕ್ಷಕಿ ಸುಕೇಶಿನಿ, ಸಿಂತಿಯಾ, ನೀತಾ ತಂತ್ರಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶೋಭಾ ಸ್ವಾಗತಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ